ಒಟಿಟಿ ಪ್ಲಾಟ್‌ಫಾರಂಗಳಲ್ಲೊಂದಾದ ನೆಟ್‌ಫ್ಲಿಕ್ಸ್‌ನಲ್ಲಿ ಹಲವು 18 ಪ್ಲಸ್ ಸಿನಿಮಾಗಳಿವೆ. ಕೆಲವು ಅಡಲ್ಟ್ ಸೀನ್‌ಗಳು ನಿಮ್ಮ ಸಂಗಾತಿ ಜೊತೆಗಿನ ಬಾಂಧವ್ಯವನ್ನು  ಹೆಚ್ಚಿಸುತ್ತಿವೆಯಂತೆ.

ಟಿಟಿ ವೇದಿಕೆಯಲ್ಲಿ ನಿಮಗೆ ಎಲ್ಲಾ ರೀತಿಯ ಸಿನಿಮಾ, ವೆಬ್‌ ಸಿರೀಸ್, ಸಾಕ್ಷ್ಯ ಚಿತ್ರಗಳು, ರಿಯಾಲಿಟಿ ಶೋ ಸೇರಿದಂತೆ ಎಲ್ಲಾ ಮನರಂಜನೆಯ ಕಾರ್ಯಕ್ರಮಗಳು ನೋಡಲು ಸಿಗುತ್ತವೆ. ರೊಮ್ಯಾಂಟಿಕ್, ಆಕ್ಷನ್, ಥ್ರಿಲ್ಲರ್, ಹಾರರ್ ಅಥವಾ ಕಾಮಿಡಿ ಹೀಗೆ ಎಲ್ಲಾ ವಿಭಾಗದ ಸಿನಿಮಾಗಳನ್ನು ನಿಮ್ಮ ಮೊಬೈಲ್‌ನಲ್ಲಿಯೇ ವೀಕ್ಷಿಸಬಹುದಾಗಿದೆ. ಕೆಲವೊಮ್ಮೆ ಕೆಲ ಜನರು ಇಂಟಿಮೇಟ್ ಮತ್ತು ಕಾಮಪ್ರಚೋದಕ ದೃಶ್ಯಗಳು ಅಥವಾ ಕಥೆಯನ್ನು ಹೊಂದಿರುವ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಕಥೆ ಗೊತ್ತಿಲ್ಲದೇ ಸಿನಿಮಾಗಳನ್ನು ಮನೆಯವರ ಜೊತೆ ನೋಡಿ ಮುಜುಗರಕ್ಕೊಳಗಾಗುವ ಸನ್ನಿವೇಶ ಉಂಟಾಗುತ್ತಿರುತ್ತದೆ. ಹಾಗಾಗಿ ಇಂದು ನಾವು ನಿಮಗೆ ಇಂಟಿಮೇಟ್ ಮತ್ತು ಕಾಮಪ್ರಚೋದಕ ಸಿನಿಮಾಗಳ ಬಗ್ಗೆ ಹೇಳುತ್ತಿದ್ದೇವೆ. ಈ ಚಿತ್ರಗಳನ್ನು ಮನೆಯವರ ಜೊತೆಯಲ್ಲ, ಸಂಗಾತಿ ಜೊತೆ ಖಾಸಗಿಯಾಗಿ ನೋಡಬೇಕು ಎಂದು ವೀಕ್ಷಕರು ಹೇಳುತ್ತಾರೆ. ಇಂದು ನಾವು ಹೇಳುತ್ತಿರುವ ಸಿನಿಮಾಗಳನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು. 

1.ಅಮರ್ - Amar 
ನೆಟ್‌ಫ್ಲಿಕ್ಸ್‌ನಲ್ಲಿ ಅಮರ್ ಹೆಸರಿನ ಸಿನಿಮಾವೊಂದಿದೆ. ಈ ಸಿನಿಮಾ ದಂಪತಿ ಲೌರಾ- ಕಾಲರ್ಸ್ ನಡುವಿನ ರೊಮ್ಯಾಂಟಿಕ್ ಕಥೆಯಾಗಿದೆ. ಲೌರಾ ಮತ್ತು ಕಾಲರ್ಸ್ ನಡುವೆ ಪ್ರೀತಿ ಉಂಟಾಗುತ್ತದೆ. ಆದ್ರೆ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಈ ಸವಾಲುಗಳು ಲೌರಾ-ಕಾಲರ್ಸ್ ನಡುವಿನ ಪ್ರೀತಿಯನ್ನು ಕಡಿಮೆ ಮಾಡುತ್ತವೆ. ಒಂದೇ ವರ್ಷದಲ್ಲಿ ಇಬ್ಬರ ಬದುಕಿನ ಮಾರ್ಗವೇ ಬದಲಾಗುತ್ತದೆ. ಎಸ್ಟೆಬನ್ ಕ್ರೆಸ್ಪೋ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಲೌರಾ ಮತ್ತು ಕಾಲರ್ಸ್ ನಡುವಿನ ರೊಮ್ಯಾಂಟಿಕ್ ಸೀನ್‌ಗಳು ಚಿತ್ರದ ಹೈಲೆಟ್ ಎಂದೇ ಹೇಳಬಹುದು. 

2.ರಿಯಲಿ ಲವ್ - Really Love
ನೆಟ್‌ಫ್ಲಿಕ್ಸ್‌ನಲ್ಲಿರುವ ಮತ್ತೊಂದು ಅಡಲ್ಟ್ ಕಂಟೆಂಟ್ ಸಿನಿಮಾ ಅಂದ್ರೆ ಅದು ರಿಯಲಿ ಲವ್. ಹಲವರು ತಮ್ಮ ಸಂಗಾತಿಯನ್ನು ಹುಡುಕುತ್ತಿರುತ್ತಾರೆ. ತಮ್ಮ ನಿಜವಾದ ಪ್ರೀತಿಯನ್ನು ಶೋಧದಲ್ಲಿರುವವರು ಹಲವು ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಈ ರಿಯಲ್ ಲವ್ ಚಿತ್ರದಲ್ಲಿ ತುಂಬಾನೇ ಕಾಮಪ್ರಚೋದಕ ದೃಶ್ಯಗಳಿದ್ದು, ಏಕಾಂತದಲ್ಲಿ ನೋಡಬೇಕೆಂದು ಸಲಹೆ ನೀಡಲಾಗುತ್ತದೆ.

YouTube video player

3.ಪ್ಲೇಯಿಂಗ್ ವಿಥ್ ಫೈರ್-Flying With Fire
ಪ್ಲೇಯಿಂಗ್ ವಿಥ್ ಫೈರ್ ಸ್ಪ್ಯಾನಿಶ್ ಭಾಷೆಯ ವೆಬ್‌ ಸಿರೀಸ್ ಆಗಿದ್ದು, 10 ಎಪಿಸೋಡ್‌ಗಳನ್ನು ಹೊಂದಿದೆ. ಈ 10 ಎಪಿಸೋಡ್‌ಗಳು ಒಂದಕ್ಕಿಂತ ಒಂದು ಅಶ್ಲೀಲ ದೃಶ್ಯಗಳನ್ನು ಹೊಂದಿವೆ. ಈ ವೆಬ್‌ ಸಿರೀಸ್‌ನ್ನು ಸಂಗಾತಿ ಜೊತೆ ವೀಕ್ಷಿಸಬೇಕೆಂದು ನೋಡಗರು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದಾರೆ. ಅಪ್ಪಿತಪ್ಪಿಯೂ ಕುಟುಂಬಸ್ಥರ ಜೊತೆ ಈ ವೆಬ್‌ ಸಿರೀಸ್ ನೋಡಬೇಡಿ. 

YouTube video player

900 ಕೋಟಿ ಕೊಟ್ರೆ ಮಾತ್ರ ಡಿವೋರ್ಸ್ ಕೊಡುವೆ ಎಂದ ನಟಿ; ಜೀವನಾಂಶ ಕೊಡಲು ಒಪ್ತಾರಾ ಗಂಡ?

4.ಯು ಗೆಟ್‌ ಮಿ-You Get Me
ಈ ಚಿತ್ರ ಸಹ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದ್ದು, ಹೋಲಿ ಮತ್ತು ಟೈಲರ್ ನಡುವಿನ ಒನ್ ನೈಟ್ ಸ್ಟಾಂಡ್ ಕಹಾನಿಯಾಗಿದೆ. ಒನ್ ನೈಟ್ ಸ್ಟಾಂಡ್ ಬಳಿಕ ಹೋಲಿಯಲ್ಲಿ ಹೊಸ ಪ್ರೇಮದ ರೋಮಾಂಚನ ಉಂಟಾಗುತ್ತದೆ. ಹಾಗಾಗಿ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಟೈಲರ್‌ನ ಹೈಸ್ಕೂಲ್‌ಗೆ ಹೋಲಿ ಶಿಫ್ಟ್ ಆಗುತ್ತಾಳೆ. ನಂತರ ಇಬ್ಬರು ಜೊತೆಯಾಗಿ ರೊಮ್ಯಾಂಟಿಕ್ ಕ್ಷಣಗಳನ್ನು ಎಂಜಾಯ್ ಮಾಡುತ್ತಾರೆ. ಇಬ್ಬರ ನಡುವೆ ಹಲವು ಹಸಿಬಿಸಿ ದೃಶ್ಯಗಳಿವೆ.

YouTube video player

5.ಡಾರ್ಕ್ ಡಿಸೈರ್-Dark Desire
ಈ ಸಿನಿಮಾ ಸಹ ಹಲವು ಹಸಿಬಿಸಿ ದೃಶ್ಯಗಳಿಂದ ತುಂಬಿದೆ. ಕಾಮಪ್ರಚೋದಕ ಸಿನಿಮಾಗಳನ್ನು ಇಷ್ಟಪಡೋರು ಡಾರ್ಕ್ ಡಿಸೈರ್ ನೋಡಬಹುದು. ರೊಮ್ಯಾನ್ಸ್, ಥ್ರಿಲ್ಲರ್ ಜೊತೆ ಹಲವು ರೊಮ್ಯಾಂಟಿಕ್ ದೃಶ್ಯಗಳನ್ನು ಡಾರ್ಕ್ ಡಿಸೈರ್ ಹೊಂದಿದೆ.

ಈ ಮೂರು ಸಿನಿಮಾಗಳು ಹಾರ್ಟ್‌ಬೀಟ್ ಹೆಚ್ಚಿಸುತ್ತೆ! ಹುಷಾರ್, ನಿಮ್ಮ ಮೈಂಡ್ ಹ್ಯಾಂಗ್ ಆಗಬಹುದು!

YouTube video player