ಸಲ್ಮಾನ್ ಖಾನ್ Sikandar Trailer ಲಾಂಚ್: ಟೀಮ್ ಮಾಡಿರೋ ಹೊಸ ಪ್ಲಾನ್ ಸಕ್ಸಸ್, ಹವಾ ಶುರು..

ಈ ಹೊಸ ಪೋಸ್ಟರ್‌ನಲ್ಲಿ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ, ಪ್ರತೀಕ್ ಬಬ್ಬರ್, ಸತ್ಯರಾಜ್, ಕಾಜಲ್ ಅಗರ್ವಾಲ್, ಅಂಜನಿ ಧವನ್ ಮತ್ತು ಶರ್ಮನ್ ಜೋಶಿ ಮುಂತಾದವರು.. 'ಬಸ್ ಅಬ್ ಮುಡ್ನೆ ಕಿ ದೇರ್ ಹೈ. ದಿಲ್ ಥಾಮ್ ಕೆ ಬೈಠಿಯೇ' ಎಂಬ...

The trailer of Salman Khan movie Sikandar releaseed on March 23

ಸಲ್ಮಾನ್ ಖಾನ್ (Salman Khan) ಅಭಿನಯದ ಬಹುನಿರೀಕ್ಷಿತ 'ಸಿಕಂದರ್' ಚಿತ್ರದ ಟ್ರೈಲರ್ (Sikandar) ಬಿಡುಗಡೆ ಫಂಕ್ಷನ್ ನಡೆಯುತ್ತಿದೆ. ಚಿತ್ರತಂಡ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್ ಚಿತ್ರದ ತಾರಾ ಬಳಗವನ್ನು ಅನಾವರಣಗೊಳಿಸಿದ್ದು, ಚಿತ್ರವು ಈದ್ ಹಬ್ಬದಂದು ಬಿಡುಗಡೆಯಾಗಲಿದೆ. ಘಜಿನಿ ಸಿನಿಮಾ ಖ್ಯಾತಿಯ ಎ.ಆರ್. ಮುರುಗದಾಸ್ ನಿರ್ದೇಶನದ ಈ ಚಿತ್ರವು ಮಾರ್ಚ್ 30 ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಮೂಡಿದೆ.

ಈ ಹೊಸ ಪೋಸ್ಟರ್‌ನಲ್ಲಿ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ (Rashmika Mandanna) , ಪ್ರತೀಕ್ ಬಬ್ಬರ್, ಸತ್ಯರಾಜ್, ಕಾಜಲ್ ಅಗರ್ವಾಲ್, ಅಂಜನಿ ಧವನ್ ಮತ್ತು ಶರ್ಮನ್ ಜೋಶಿ ಮುಂತಾದ ಕಲಾವಿದರು ಮಿಂಚಿದ್ದಾರೆ. ಇದೇ ಮೊದಲ ಬಾರಿಗೆ ಚಿತ್ರತಂಡ ಪೋಸ್ಟರ್ ಮೂಲಕ ಸಂಪೂರ್ಣ ತಾರಾಗಣವನ್ನು ಬಹಿರಂಗಪಡಿಸಿದೆ. 'ಬಸ್ ಅಬ್ ಮುಡ್ನೆ ಕಿ ದೇರ್ ಹೈ. ದಿಲ್ ಥಾಮ್ ಕೆ ಬೈಠಿಯೇ' ಎಂಬ ಶೀರ್ಷಿಕೆಯೊಂದಿಗೆ ಈ ಪೋಸ್ಟರ್ ಅನ್ನು ನಾಡಿಯಾಡ್ವಾಲಾ ಗ್ರ್ಯಾಂಡ್ಸನ್‌ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಮೊಣಕಾಲು ಮುರಿದರೂ Veer Savarkar ಪಾತ್ರಕ್ಕೆ ಜೀವ ತುಂಬಿದ ರಣದೀಪ್ ಹೂಡಾ, ಗ್ರೇಟ್!

ಇಂದು, ಅಂದರೆ ಮಾರ್ಚ್ 23 ರಂದು ಸಂಜೆ 4 ಗಂಟೆಗೆ ಮುಂಬೈನಲ್ಲಿ ಈ ಅದ್ಧೂರಿ ಸಮಾರಂಭ ನಡೆಯುತ್ತಿದೆ. ಸಿಕಂದರ್ ಟ್ರೈಲರ್ ಬಿಡುಗಡೆಯಾಗಿದೆ. ಸಲ್ಮಾನ್ ಖಾನ್ ರನ್ನು ರಗಡ್ ಲುಕ್ ನಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಅದು ಅನಾರಣವಾಗಿದೆ. ಟ್ರೈಲರ್‌ ನೋಡಿ ಸಲ್ಲೂ ಫ್ಯಾನ್ಸ್ ಖುಷಿಯಾಗಿದ್ದಾರೆ. ಹೈದರಾಬಾದ್ ಮತ್ತು ಮುಂಬೈನಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರವು ಈ ವರ್ಷದ ಅತಿದೊಡ್ಡ ಚಿತ್ರಗಳಲ್ಲಿ ಒಂದು ಎಂದು ನಿರೀಕ್ಷಿಸಲಾಗಿದೆ. ಸಿಕಂದರ್ ಮಾರ್ಚ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಭಿಮಾನಿಗಳು ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ 'ಸಿಕಂದರ್' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಅದಕ್ಕೂ ಮೊದಲು ಕೆಲವೇ ಗಂಟೆಗಳಿರುವಾಗ, ಚಿತ್ರತಂಡ ಹೊಸ ಪೋಸ್ಟರನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರಿನಲ್ಲಿ ಚಿತ್ರದ ತಾರಾ ಬಳಗವೇ ರಾರಾಜಿಸುತ್ತಿದೆ. ಎ.ಆರ್. ಮುರುಗದಾಸ್ ನಿರ್ದೇಶನದ ಈ ಚಿತ್ರ ಈದ್ ಹಬ್ಬದಂದು ಅಂದರೆ ಮಾರ್ಚ್ 30 ರಂದು ಬಿಡುಗಡೆಯಾಗಲಿದೆ. ಟ್ರೈಲರ್ ಬಿಡುಗಡೆಗೂ ಮುನ್ನ ಪೋಸ್ಟರ್ ಬಿಡುಗಡೆಯಾಗಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಅಲ್ಲಾಯ್ತು ಭಾರೀ ಯಡವಟ್ಟು!.. ರಾಜಮೌಳಿ ಹೇಳಿದ್ದಕ್ಕೇ ಒಡಿಶಾಗೆ ಬಂದಿರೋ ಮಹೇಶ್ ಬಾಬು!

ಘಜಿನಿ ಖ್ಯಾತಿಯ ಎ.ಆರ್. ಮುರುಗದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಸಿಕಂದರ್' ಚಿತ್ರದಲ್ಲಿ ಸಲ್ಮಾನ್ ಖಾನ್ ರಗಡ್ ಲುಕ್‌ ಭಾರೀ ಮೆಚ್ಚುಗೆ ಗಳಿಸಿದೆ. ಸಿಕಂದರ್ ಚಿತ್ರದಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ, ಪ್ರತೀಕ್ ಬಬ್ಬರ್, ಸತ್ಯರಾಜ್, ಕಾಜಲ್ ಅಗರ್ವಾಲ್, ಅಂಜಿನಿ ಧವನ್, ಮತ್ತು ಶರ್ಮನ್ ಜೋಶಿ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಇದೇ ಮೊದಲ ಬಾರಿಗೆ ಚಿತ್ರತಂಡ ಪೋಸ್ಟರ್ ಮೂಲಕ ಸಂಪೂರ್ಣ ತಾರಾ ಬಳಗವನ್ನು ಬಹಿರಂಗಪಡಿಸಿದೆ. ನಿಜವಾಗಿಯೂ ನಿರೀಕ್ಷೆ ಇನ್ನೂ ಹೆಚ್ಚಾಗುತ್ತಿದೆ. 

 

 

Latest Videos
Follow Us:
Download App:
  • android
  • ios