ಹಾರ್ಟ್​ ಆಫ್​ ಸ್ಟೋನ್ಸ್​ ಚಿತ್ರದ ಶೂಟಿಂಗ್​ ವೇಳೆ ಗರ್ಭಿಣಿಯಾಗಿದ್ದ ಆಲಿಯಾ ಭಟ್​ ಮಾಡಿರುವ ಸ್ಟಂಟ್​ ವಿಡಿಯೋ ವೈರಲ್​ ಆಗಿದ್ದು, ಫ್ಯಾನ್ಸ್​ ಶಾಕ್​ ಆಗಿದ್ದಾರೆ.  

ಬಾಲಿವುಡ್​ ನಟಿ ಆಲಿಯಾ ಭಟ್ (Alia Bhatt) ಇತ್ತೀಚಿನ ದಿನಗಳಲ್ಲಿ ಹಾಲಿವುಡ್‌ನಲ್ಲಿ ಅಲೆಗಳನ್ನು ಎಬ್ಬಿಸಿದ ಮೂರನೇ ಭಾರತೀಯ ನಟಿ. ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ನಂತರ, ಇವರೀಗ ಹಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಅವರು ಬ್ರಿಟಿಷ್ ಚಲನಚಿತ್ರ ನಿರ್ಮಾಪಕ ಟಾಮ್ ಹಾರ್ಪರ್ ನಿರ್ದೇಶನದ ಹಾಲಿವುಡ್ ಸ್ಪೈ ಆಕ್ಷನ್ ಥ್ರಿಲ್ಲರ್ ಚಲನಚಿತ್ರ 'ಹಾರ್ಟ್ ಆಫ್ ಸ್ಟೋನ್' ನಲ್ಲಿ 'ವಂಡರ್ ವುಮನ್' ಸ್ಟಾರ್ ಗಾಲ್ ಗಡೋಟ್ ಅವರೊಂದಿಗೆ ನಟಿಸಲಿದ್ದಾರೆ. ಇದು ಅವರ ಹಾಲಿವುಡ್ ಚೊಚ್ಚಲ ಚಿತ್ರವಾಗಿದೆ. ಜೇಮಿ ಡೋರ್ನಾನ್, ಸೋಫಿ ಒಕೊನೆಡೊ, ಮಥಿಯಾಸ್ ಷ್ವೀಘೋಫ್, ಜಿಂಗ್ ಲೂಸಿ, ಪಾಲ್ ರೆಡಿ ಮತ್ತು ಜಾನ್ ಕೊರ್ಟಜರೆನಾ ಸಹ ನಟಿಸಿದ್ದಾರೆ. ಹಾರ್ಟ್ ಆಫ್ ಸ್ಟೋನ್ ಟ್ರೇಲರ್ ಈಚೆಗೆ ನೆಟ್‌ಫ್ಲಿಕ್ಸ್‌ನ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಇದರಲ್ಲಿ ಕಪೂರ್ ಕುಟುಂಬದ ಸೊಸೆಯ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿದೆ.

 ಈಗ ಬಿಡುಗಡೆಯಾಗಿರುವ ಟ್ರೇಲರ್ (Trailer) ನೋಡಿದರೆ ಆಲಿಯಾ ಅವರದ್ದು ನೆಗೆಟಿವ್ ಪಾತ್ರ ಎನ್ನುವುದು ತಿಳಿದುಬರುತ್ತದೆ. ವಾಸ್ತವವಾಗಿ, ಸಾವೊ ಪಾಲೊದಲ್ಲಿ ನಡೆದ ನೆಟ್‌ಫ್ಲಿಕ್ಸ್ ಟುಡಮ್ 2023 ಈವೆಂಟ್‌ನಲ್ಲಿ ಬಹು ನಿರೀಕ್ಷಿತ ಚಲನಚಿತ್ರ ಹಾರ್ಟ್ ಆಫ್ ಸ್ಟೋನ್‌ನ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗಿದೆ. ಅದೇ ಸಮಯದಲ್ಲಿ, ಈ ಟ್ರೇಲರ್ ಅನ್ನು ನೋಡಿದ ನಂತರ, ಅಭಿಮಾನಿಗಳು ಅವರು ನೆಗೆಟಿವ್ ಪಾತ್ರದಲ್ಲಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ಆದರೆ ಇದೀಗ ಶೂಟಿಂಗ್​ ಸ್ಪಾಟ್​ನ ಕೆಲವೊಂದು ಸ್ಟಂಟ್​ಗಳನ್ನು ಆಲಿಯಾ ಶೇರ್​ ಮಾಡಿಕೊಂಡಿದ್ದು, ಅದನ್ನು ನೋಡಿದರೆ ಅಬ್ಬಬ್ಬಾ ಎನ್ನುವಂತಿದೆ. ಈಗಿನ ಕೆಲ ನಟಿಯರು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಸ್ಟಂಟ್​ ಮಾಡುವುದು ಇದೆ. ಅದೇನೂ ಹೊಸತಲ್ಲ. ಆದರೆ ಆಲಿಯಾ ಭಟ್​ ಅವರ ಈ ಸ್ಟಂಟ್​ ನೋಡಿ ಬೆಚ್ಚಿಬೀಳಲು ಒಂದು ಕಾರಣವೂ ಇದೆ. ಅದೇನೆಂದರೆ ಹಾರ್ಟ್​ ಆಫ್ ಸ್ಟೋನ್​ ಮಾಡುವ ಸಮಯದಲ್ಲಿ ಆಲಿಯಾ ಮೂರು ತಿಂಗಳ ಗರ್ಭಿಣಿಯಾಗಿದ್ದರು!

ಗರ್ಭಿಣಿಯಾಗಿದ್ದ ಸುದ್ದಿಯನ್ನು ಪತಿಗಿಂತಲೂ ಮೊದ್ಲು ಆ ಸ್ಟಾರ್​ಗೆ ತಿಳಿಸಿದ್ರಂತೆ ಆಲಿಯಾ!

ಹೌದು. ರಣಬೀರ್ ಕಪೂರ್ (Ranbeer Kapoor) ಮತ್ತು ಆಲಿಯಾ ಭಟ್ ಮದುವೆಯಾದದ್ದು 2022ರ ಏಪ್ರಿಲ್​ 14ರಂದು. ಮದುವೆಯಾದ ಏಳು ತಿಂಗಳಿಗೇ ಮಗುವಿಗೆ ಜನ್ಮ ನೀಡಿದ್ದರು. ಮದುವೆಗೂ ಮುನ್ನವೇ ಈಕೆ ಗರ್ಭಿಣಿಯಾಗಿರುವ ಸುದ್ದಿಗಳೂ ಹರಿದಾಡಿದ್ದವು. ಆದರೆ ಇವೆಲ್ಲವನ್ನೂ ಸೀಕ್ರೇಟ್​ ಆಗಿ ಇಟ್ಟಿದ್ದ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋ ಶೇರ್​ ಮಾಡಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಅದೇ ವೇಳೆಯೇ ಹಾಲಿವುಡ್​ಗೆ ಎಂಟ್ರಿಕೊಟ್ಟಿದ್ದ ನಟಿ ಹಾರ್ಟ್​ ಆಫ್ ಸ್ಟೋನ್​ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದರು. ಆರಂಭದಲ್ಲಿ ಅವರು ತಾವು ಗರ್ಭಿಣಿ ಎನ್ನುವ ಸುದ್ದಿಯನ್ನು ಎಲ್ಲಿಯೂ ಹೇಳಿರಲಿಲ್ಲ. ಅಸಲಿಗೆ ಪ್ರತಿ ಗರ್ಭಿಣಿಗೂ ಮೊದಲ ಮೂರು ತಿಂಗಳು ಅತ್ಯಂತ ಜಾಗರೂಕರಾಗಿ ಇರುವಂತೆ ಹೇಳಲಾಗುತ್ತದೆ. ಆದರೆ ಇಂಥ ಸಮಯದಲ್ಲಿಯೂ ನಟಿ ಆಲಿಯಾ ಅತ್ಯಂತ ಭಯಾನಕ ಎನ್ನುವ ಸ್ಟಂಟ್​ ಮಾಡಿದ್ದಾರೆ. ಗಾಳಿಯಲ್ಲಿ ಫೈಟಿಂಗ್​ ಮಾಡುವ ದೃಶ್ಯದಲ್ಲಿಯೂ ಅವರು ಮಿಂಚಿದ್ದಾರೆ. ಅದನ್ನು ಅವರು ಇನ್​ಸ್ಟಾಗ್ರಾಮ್​ ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಇದನ್ನು ನೋಡಿ​, ಆಲಿಯಾ ಭಟ್​ ಅವರ ಫ್ಯಾನ್ಸ್​ ಫುಲ್​ ಕಂಗಾಲಾಗಿದ್ದಾರೆ. ಇಂಥ ಸಮಯದಲ್ಲಿಯೂ ಇಷ್ಟೊಂದು ರಿಸ್ಕ್​ ತೆಗೆದುಕೊಳ್ಳುವ ಅಗತ್ಯವೇನಿತ್ತು ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಈಗ ಆಲಿಯಾ ಮುದ್ದು ರಾಹಾಳ ಅಮ್ಮನಾಗಿ ತಿಂಗಳುಗಳೇ ಕಳೆದಿವೆ. 

Heart of Stone: ಹಾಲಿವುಡ್​ನಲ್ಲಿ ಆಲಿಯಾ ವಿಲನ್​; ಬಿಡುಗಡೆಯಾಯ್ತು ಚೊಚ್ಚಲ ಚಿತ್ರದ ಟ್ರೇಲರ್​

View post on Instagram