ಒಟಿಟಿಯಲ್ಲೂ ಧೂಳೆಬ್ಬಿಸುತ್ತಿದೆ ದಿ ಕೇರಳ ಸ್ಟೋರಿ: ಮತಾಂತರದ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ ವೀಕ್ಷಕರು. ಇದೀಗ ಈ ಚಿತ್ರ ದಾಖಲೆ ಸೃಷ್ಟಿಸಿದೆ. ಏನದು?  

ಇಸ್ಲಾಂ ಯುವತಿಯನ್ನು ತನ್ನ ರೂಮ್​ಮೇಟ್ಸ್​ಗಳನ್ನು ಹೇಗೆ ಮತಾಂತರದ ಕುರಿತು ಬ್ರೇನ್​ವಾಷ್​ ಮಾಡಿ ಅವರ ಮನಸ್ಸನ್ನು ಪರಿವರ್ತನೆ ಮಾಡುತ್ತಾಳೆ ಎನ್ನುವ ನೈಜ ಘಟನೆಯುಳ್ಳ ದಿ ಕೇರಳ ಸ್ಟೋರಿ ಸಿನಿಮಾ ಸೃಷ್ಟಿಸಿದ ವಿವಾದ ಎಲ್ಲರಿಗೂ ತಿಳಿದದ್ದೇ. ಆಸೀಫಾ ಎಂಬ ಯುವತಿ ರೂಮ್​ಮೇಟ್ಸ್​ ನರ್ಸಿಂಗ್​ ಕಲಿಯಲು ಪ್ರತಿಷ್ಠಿತ ಕಾಲೇಜಿಗೆ ಸೇರಿಕೊಂಡಿರೋ ಶಾಲಿನಿ ಉನ್ನಿಕೃಷ್ಣನ್ (Shalini Unnikrishnan), ಗೀತಾಂಜಲಿ, ನಿಮ್ಹಾ ಮ್ಯಾಥ್ಯುಸ್. ಆಸೀಫಾ ಈ ಮೂವರು ಹುಡುಗಿಯರ ಬ್ರೇನ್ ವಾಷ್ ಮಾಡುತ್ತಾಳೆ. ಈ ಮೂವರೂ ಆಕೆಯ ರೂಮ್ ​ಮೇಟ್ಸ್​. ಇಸ್ಲಾಂ ಬಗ್ಗೆ ಬ್ರೇನ್​ ವಾಷ್​ ಮಾಡಿ ಕೊನೆಗೆ ಅವಳದ್ದೇ ಧರ್ಮಕ್ಕೆ ಸೇರಿಸ್ತಾಳೆ. ಅವರ ಬದುಕನ್ನು ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ನಾಶ ಮಾಡುತ್ತಾಳೆ, ಐಸಿಸ್​ ಉಗ್ರ ಸಂಘಟನೆಗೆ ಸೇರಿಸುತ್ತಾಳೆ... ಈ ಸತ್ಯ ಘಟನೆಯನ್ನು ಹೊಂದಿರುವ ದಿ ಕೇರಳ ಸ್ಟೋರಿ ಸಿನಿಮಾ ಸೃಷ್ಟಿಸಿದ ವಿವಾದ ಅಷ್ಟಿಷ್ಟಲ್ಲ. 

 ಈ ನೈಜ ಘಟನೆಯ ಸಿನಿಮಾವನ್ನು ನೋಡಿ ಸಹಿಸಿಕೊಳ್ಳಲು ಆಗದ ಒಂದು ವರ್ಗ ಭಾರಿ ಪ್ರತಿರೋಧ ಮಾಡಿದ ನಡುವೆಯೇ ಚಿತ್ರ ಇದಾಗಲೇ ಬ್ಲಾಕ್​ಬಸ್ಟರ್​ ಎನಿಸಿಕೊಂಡಿದೆ. ಹಲವಾರು ದಾಖಲೆಗಳನ್ನು ಉಡೀಸ್​ ಮಾಡಿದೆ. ಕಾಂಗ್ರೆಸ್​, ತೃಣಮೂಲ ಕಾಂಗ್ರೆಸ್​, ಕಮ್ಯೂನಿಸ್ಟ್​ ಪಕ್ಷಗಳು ಈ ಭಯಾನಕ ಸತ್ಯ ಘಟನೆಯ ಚಿತ್ರವನ್ನು ಸಹಿಸಿಕೊಳ್ಳದೇ ತಮ್ಮ ರಾಜ್ಯಗಳಲ್ಲಿ ಚಿತ್ರಗಳನ್ನು ಬ್ಯಾನ್​ ಮಾಡಿದ್ದರೂ, ದಿ ಕೇರಳ ಸ್ಟೋರಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಒಂದು ವರ್ಗದಿಂದ ಭಾರಿ ಪ್ರತಿರೋಧದ ನಡುವೆಯೂ ದಿ ಕೇರಳ ಸ್ಟೋರಿ (The Kerala Story) ಸಕತ್​ ಸುದ್ದಿ ಮಾಡಿತ್ತು. ಈ ಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದು, ವಿಪುಲ್ ಅಮೃತಲಾಲ್ ಶಾ ನಿರ್ಮಿಸಿದ್ದಾರೆ. ಅದಾ ಶರ್ಮಾ (Adah Sharma) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಾಗಲೇ ಚಿತ್ರ ತಂಡದ ಬಹುತೇಕ ಎಲ್ಲರಿಗೂ ಕೊಲೆ ಬೆದರಿಕೆ ಬಂದಿದ್ದರೂ, ತಂಡ ಜಗ್ಗದೇ ಮುನ್ನುಗ್ಗಿತ್ತು. 

ಡೀಪ್​ಫೇಕ್​ ಹೆಸ್ರಲ್ಲಿ ಶಾರುಖ್​, ಸಲ್ಮಾನ್​, ರಣಬೀರ್, ಅಕ್ಷಯ್​​ಗೆ ಹೀಗೆಲ್ಲಾ ಮಾಡೋದಾ? ಉಫ್​ ಎಂದ ಫ್ಯಾನ್ಸ್​! ​

ಭಾರತದ ಬಾಕ್ಸ್​ ಆಫೀಸ್​ನಲ್ಲಿ ಗಳಿಸಿದ್ದು ಬರೋಬ್ಬರಿ 242 ಕೋಟಿ ರೂಪಾಯಿ. ವಿದೇಶದ ಕಲೆಕ್ಷನ್ ಸೇರಿದರೆ ಅಂದಾಜು 303 ಕೋಟಿ ರೂಪಾಯಿ ಆಗಲಿದೆ. 2023ರ ಮೇ 5ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಮೂರು ದಿನಗಳ ಹಿಂದೆ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ.‘ಜೀ5’ ಒಟಿಟಿ ಮೂಲಕ ‘ದಿ ಕೇರಳ ಸ್ಟೋರಿ’ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ಚಿತ್ರಮಂದಿರಗಳಲ್ಲಿ ಅಬ್ಬರಿಸಿದ ರೀತಿಯೇ ಒಟಿಟಿಯಲ್ಲೂ ಸಿನಿಮಾ ಧೂಳೆಬ್ಬಿಸುತ್ತಿದೆ. ಒಟಿಟಿಯಲ್ಲೂ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಜನರು ಮುಗಿಬಿದ್ದಿದ್ದು ಹೊಸದೊಂದು ದಾಖಲೆ ಸೃಷ್ಟಿಸಿದೆ. ಮೂರೇ ದಿನಗಳಲ್ಲಿ 150 ಮಿಲಿಯನ್​ ನಿಮಿಷಗಳ ವೀಕ್ಷಣೆ ಕಂಡಿದೆ. ಇದು ಇಲ್ಲಿಯವರೆಗೆ ದಾಖಲೆ ಎನ್ನಲಾಗಿದೆ. 

ಹೌದು. ದಿ ಕೇರಳ ಸ್ಟೋರಿ ತಂಡದಿಂದ ಹೊಸ ಚಿತ್ರದೊಂದಿಗೆ ತೆರೆ ಮೇಲೆ ಬರುತ್ತಿದೆ. ನೈಜ ಕಥೆಯನ್ನು ಆಧರಿಸಿದ ಇದರ ಹೆಸರು 'ಬಸ್ತರ್' (Bastar) ಎನ್ನಲಾಗಿದೆ. ಇದರ ಪೋಸ್ಟರ್ ಇದಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಪುಲ್ ಮತ್ತು ಅಮೃತಲಾಲ್ ಜೋಡಿಯ ಈ ಚಿತ್ರ ಏಪ್ರಿಲ್ 5 ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ. ಚಿತ್ರದ ಪೋಸ್ಟರ್‌ನಲ್ಲಿ 'ಬಸ್ತರ್' ಅಕ್ಷರ ಕೆಂಪು ಬಣ್ಣದ ಫಾಂಟ್‌ಗಳಲ್ಲಿ ಕಾಣಿಸಿಕೊಂಡಿದೆ. ಆದ್ದರಿಂದ ಇದು ಕೂಡ ದಿ ಕೇರಳ ಸ್ಟೋರಿ ರೀತಿಯಲ್ಲಿಯೇ ಇರುವ ನಿರೀಕ್ಷೆ ಇದೆ. ಅಷ್ಟೇ ಅಲ್ಲದೇ ಸಬ್​ ಟೈಟಲ್​ನಲ್ಲಿ ‘ದೇಶವನ್ನೇ ಬಿರುಗಾಳಿ ಎಬ್ಬಿಸಲಿರುವ ಗುಪ್ತ ಸತ್ಯ’ ಎಂದು ಬರೆಯಲಾಗಿದೆ. ‘ಬಸ್ತರ್​’ ಸಿನಿಮಾದಲ್ಲಿ ಯಾವ ನೈಜ ಘಟನೆಯನ್ನು ಜನರ ಎದುರು ತರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 

ಡಿವೋರ್ಸ್​, ಮಯೋಸೈಟಿಸ್‌ ಕಾಯಿಲೆ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ಸಮಂತಾ ರುತ್​ ಪ್ರಭು

View post on Instagram