Asianet Suvarna News Asianet Suvarna News

ಕಾಶ್ಮೀರಿ ಪಂಡಿತರಿಗೆ ಐದು ಲಕ್ಷ ರೂ. ಘೋಷಿಸಿದ ನಟ ಅನುಪಮ್​ ಖೇರ್​

1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ನರಮೇಧದ ಕುರಿತು  ಬಿಚ್ಚಿಟ್ಟ ಚಿತ್ರ ದಿ ಕಾಶ್ಮೀರಿ ಫೈಲ್ಸ್​ ಭರ್ಜರಿ ಕಲೆಕ್ಷನ್​ ಮಾಡಿದ ಬೆನ್ನಲ್ಲೇ ನಟ ಅನುಪಮ್​ ಖೇರ್​ ಘೋಷಣೆಯೊಂದನ್ನು ಮಾಡಿದ್ದಾರೆ. ಏನದು?
 

The Kashmir Files star Anupam Kher pledges Rs 5 lakh to support Kashmiri Pandits
Author
First Published Feb 27, 2023, 5:55 PM IST

ಕಳೆದ ವರ್ಷ ಮಾರ್ಚ್​ನಲ್ಲಿ ಬಿಡುಗಡೆಯಾದ 'ದಿ ಕಾಶ್ಮೀರ್ ಫೈಲ್ಸ್' (The Kashmir files) ಚಿತ್ರ ಇದೇ 20 ರಂದು ನಡೆದ ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್‌ನಲ್ಲಿ  (Film Festival Award) 'ಅತ್ಯುತ್ತಮ ಚಲನಚಿತ್ರ' ಪ್ರಶಸ್ತಿಯನ್ನು ಪಡೆದುಕೊಂಡಿದೆ. 1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ನರಮೇಧ ಹೇಗೆ ನಡೆದಿತ್ತು ಎಂದು ಎಳೆಎಳೆಯಾಗಿ ಕ್ರೌರ್ಯದ ಮುಖ ಬಿಚ್ಚಿಟ್ಟ ಈ ಚಿತ್ರದಲ್ಲಿ ಸೆನ್​ಸೇಷನಲ್​ ಸೃಷ್ಟಿಸಿತ್ತು. ಈ ಚಿತ್ರದ ವಿರುದ್ಧ ಒಂದು ವರ್ಗ ಇನ್ನೂ ಟೀಕೆ ಮಾಡುತ್ತಲೇ ಇದೆ. ಚಿತ್ರದಲ್ಲಿ ತೋರಿಸುವುದೆಲ್ಲವೂ ಕಪೋಕಲ್ಪಿತ ಎಂದು ಹೇಳುತ್ತಲೇ ಬಂದಿದೆ. ಆದರೆ ಈ ಕ್ರೌರ್ಯಕ್ಕೆ ಸಾಕ್ಷಿಯಾಗಿದ್ದ, ಖುದ್ದು ನೊಂದು ಬೆಂದುಹೋಗಿದ್ದ ಕಾಶ್ಮೀರಿ ಪಂಡಿತರು ತಮಗಾಗಿರುವ ಅನ್ಯಾಯದ ಕುರಿತು ದನಿ ಎತ್ತಿದ್ದಾರೆ. ಈ ಚಿತ್ರದಲ್ಲಿ ತೋರಿಸಿರುವ ಕ್ರೌರ್ಯವೆಲ್ಲವೂ ನಿಜವಾದದ್ದೇ ಎಂದು ಹೇಳಿದ್ದಾರೆ. ಕೆಲವೊಂದು ಸನ್ನಿವೇಶಗಳನ್ನು ಹೊರತುಪಡಿಸಿದರೆ, ತಾವು ಅನುಭವಿಸಿದ ಯಾತನೆಯ ಸಂಪೂರ್ಣ ಘಟನೆಯನ್ನು ಈ ಚಿತ್ರ ಬಿಂಬಿಸಿದೆ ಎಂದು ಹೇಳುತ್ತಿದ್ದಾರೆ. 

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮೌತ್ ಪಬ್ಲಿಸಿಟಿಯ ಮೂಲಕವೇ ಭರ್ಜರಿ ಕಲೆಕ್ಷನ್ (Collection) ಮಾಡಿದ ಬಾಲಿವುಡ್​ ಚಿತ್ರ.  'ಇದು  ಕೇವಲ ಚಲನಚಿತ್ರವಲ್ಲ. ಇದು ನರಮೇಧದಿಂದ ಬಳಲುತ್ತಿರುವ ಎಲ್ಲ ಜನರನ್ನು ಪ್ರತಿನಿಧಿಸುವ ಚಿತ್ರವಅಗಿದೆ.  ಚಿತ್ರವು ಯಾವಾಗಲೂ ಜನರ ಹೃದಯಕ್ಕೆ ಹತ್ತಿರವಾಗಿರಬೇಕು. ಅಂತೆಯೇ  ವಿವೇಕ್ ಅಗ್ನಿಹೋತ್ರಿ (Vivek Agnihotri) ಮತ್ತು ಚಿತ್ರದೊಂದಿಗೆ ಭಾಗಿಯಾಗಿರುವ ಎಲ್ಲ ಜನರು ಈ ಚಿತ್ರದಲ್ಲಿ ಇದನ್ನೇ ಮಾಡಿದ್ದಾರೆ. ಈ ಚಿತ್ರ ಬಿಡುಗಡೆಯಾದಾಗಿನಿಂದ ಇದು ಒಂದು ವರ್ಗವನ್ನು ಬಹಳ ನೋಯಿಸುತ್ತಿದೆ. ಇವೆಲ್ಲಾ ಕಟ್ಟುಕಥೆ, ಇಂಥ ಘಟನೆ ಸಂಭವಿಸಿಯೇ ಇಲ್ಲ ಎಂದು ವಾದಿಸುತ್ತಿದ್ದಾರೆ. ಅದನ್ನು ಸಾಬೀತು ಪಡಿಸಲೂ ನೋಡಿದರು. ಆದರೆ ಅದು ಸಾಧ್ಯವಾಗಿಲ್ಲ. ಬಾಕ್ಸ್​ ಆಫೀಸ್​ನಲ್ಲಿ ಇದು ಚಿಂದಿ ಉಡಾಯಿಸಿದಾಗ ಅದು ಕೂಡ ಕೆಲವರ ಅಸಮಾಧಾನಕ್ಕೆ ಕಾರಣವಾಯಿತು. ಚಿತ್ರದ  ನೈಜತೆಯನ್ನು ಅವಮಾನಿಸುವ ಪ್ರಯತ್ನವೂ ನಡೆಯಿತು. ಆದರೆ ಈಗ ಆಸ್ಕರ್​ ಅಂಗಳಕ್ಕೆ ಕಾಲಿಟ್ಟಿದ್ದರಿಂದ ಹೀಗೆಲ್ಲಾ ಹೇಳಿದವರಿಗೆ ಕಪಾಳಮೋಕ್ಷವಾಗಿದೆ' ಎಂದು ಅನುಪಮ್ ಖೇರ್​ (Anupam Kher) ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು. ಈ ಚಿತ್ರದಲ್ಲಿ ಇವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
 
'ಕಾಶ್ಮೀರ್ ಫೈಲ್ಸ್ ನಾನ್‌ಸೆನ್ಸ್' ಎಂದ ಪ್ರಕಾಶ್‌ ರಾಜ್ ವಿರುದ್ಧ ನಟ ಅನುಪಮ್ ಖೇರ್ ವಾಗ್ದಾಳಿ

'ಈ ಚಿತ್ರ ಕಾಶ್ಮೀರದಲ್ಲಿ ತಮ್ಮ ಮನೆಗಳಿಂದ ಹೊರಹಾಕಲ್ಪಟ್ಟ ಜನರನ್ನು ಮಾತ್ರವಲ್ಲದೆ 1.4 ಶತಕೋಟಿ ಜನರನ್ನು ಪ್ರತಿನಿಧಿಸುತ್ತದೆ. ಜನ ಇದನ್ನು ಮೆಚ್ಚಿದ್ದಾರೆ. ಮರೆಮಾಚಲಾದ ಸತ್ಯವನ್ನು ಜನರ ಎದುರಿಗೆ ಇಟ್ಟಿದ್ದು, ಜನ ಈ ನೈಜ ಘಟನೆಗಳನ್ನು ಅರಿತಿದಿದ್ದಾರೆ. ಕಾಶ್ಮೀರಿ ಪಂಡಿತರ ಮೇಲೆ ಒಂದು ವರ್ಗ ಮಾಡಿದ್ದ ಘೋರ ಅನ್ಯಾಯ ಈಗ ಜಗಜ್ಜಾಹೀರವಾಗಿದೆ ಎಂದು ನೋವಿನಿಂದ ಅನುಪಮ್​ ಖೇರ್​ ನುಡಿದಿದ್ದರು. ಇದೀಗ ಅವರು  ಕಾಶ್ಮೀರಿ ಪಂಡಿತರಿಗೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.  'ಕಾಶ್ಮೀರ ಫೈಲ್ಸ್' ಕಾಶ್ಮೀರಿ ಪಂಡಿತರ (Kashmir Pandiths) ಸಮಸ್ಯೆಗಳನ್ನು ತೋರಿಸಿದೆ. ನಾವು ಸಾಕಷ್ಟು ಗಳಿಸಿದ್ದೇವೆ. ಈಗ ನಮ್ಮ ಸ್ವಂತ ಜನರಿಗೆ ಸಹಾಯ ಮಾಡುವುದು ಮುಖ್ಯವಾಗಿದೆ. ನಾನು ರೂ. ಅವರಿಗೆ 5 ಲಕ್ಷ ರೂ ನೀಡುತ್ತೇನೆ ಎಂದು ಅನುಪಮ್ ಖೇರ್ ಹೇಳಿದ್ದಾರೆ. ಈ ಕುರಿತು  ಎಎನ್​ಐ ಟ್ವೀಟ್ (Tweet) ಮೂಲಕ ಮಾಹಿತಿ ನೀಡಿದೆ.

ʻThe Kashmir Filesʼ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಮತ್ತು ನಟಿ ಪಲ್ಲವಿ ಜೋಶಿ ಲವ್‌ ಸ್ಟೋರಿ ನಿಮಗೆ ಗೊತ್ತಾ?

 ಅನುಪಮ್ ಖೇರ್, ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ ಜೊತೆಗಿನ ಸಂವಾದದಲ್ಲಿ, ದಾದಾಸಾಹೇಬ್ ಅವರಿಂದ ಅಂಗೀಕರಿಸಲ್ಪಟ್ಟಿರುವುದು ಖುಷಿಯಾಗಿದೆ. ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಚಲನಚಿತ್ರದ ತೇಜಸ್ಸನ್ನು ಒಪ್ಪಿಕೊಳ್ಳುತ್ತದೆ. ಈ ಪ್ರಶಸ್ತಿಯು ಸತ್ಯಾಸತ್ಯತೆಯನ್ನು ಸ್ಥಾಪಿಸಿದೆ ಎಂದಿದ್ದಾರೆ.
 

Follow Us:
Download App:
  • android
  • ios