'ದಿ ಕಾಶ್ಮೀರ್ ಫೈಲ್ಸ್' ನಾನ್ಸೆನ್ಸ್ ಸಿನಿಮಾ ಎಂದು ಕರೆದಿದ್ದ ಪ್ರಕಾಶ್ ರಾಜ್ ವಿರುದ್ಧ ನಟ ಅನುಪಮ್ ಖಾರ್ ವಾಗ್ದಾಳಿ ನಡೆಸಿದರು.
'ದಿ ಕಾಶ್ಮೀರ್ ಫೈಲ್ಸ್' ನಾನ್ಸೆಸ್ ಸಿನಿಮಾ ಎಂದು ಕರೆದಿದ್ದ ಪ್ರಕಾಶ್ ರಾಜ್ ವಿರುದ್ಧ ನಟ ಅನುಪಮ್ ಖಾರ್ ವಾಗ್ದಾಳಿ ನಡೆಸಿದರು. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್ ಅನೇಕ ಕಾರಣಗಳಿಂದ ಜನರ ಮನಸ್ಸಲ್ಲಿ ಉಳಿದಿದೆ ಎಂದು ಹೇಳಿದ್ದಾರೆ. ನಟ ಪ್ರಕಾಶ್ ರಾಜ್ ಇತ್ತೀಚೆಗಷ್ಟೆ ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಪಠಾಣ್ ಸಕ್ಸಸ್, ಮೋದಿ ಸಾಕ್ಷ್ಯಚಿತ್ರ ಮತ್ತು ಕಾಶ್ಮೀರ್ ಫೈಲ್ಸ್ ಬಗ್ಗೆ ಮತನಾಡಿದ್ದರು. ಇದೀಗ ನವಭಾರತ್ ಟೈಮ್ಸ್‌ನೊಂದಿಗಿನ ಮಾತನಾಡಿದ ನಟ ಅನುಪಮ್ ಖೇರ್, ಕಾಶ್ಮೀರ ಫೈಲ್ಸ್ ಬಗ್ಗೆ ನಟ ಪ್ರಕಾಶ್ ರಾಜ್ ಕಾಮೆಂಟ್‌ಗಳಿಗೆ ತಿರುಗೇಟು ನೀಡಿದರು.
ಅನುಪಮ್ ಖೇರ್ ಮಾತನಾಡಿ, 'ಜನರು ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಮಾತನಾಡುತ್ತಾರೆ. ಕೆಲವರು ಜೀವನಪೂರ್ತಿ ಸುಳ್ಳು ಹೇಳಿಕೊಂಡೆ ಬದುಕುತ್ತಾರೆ ಇನ್ನು ಕೆಲವರು ಜೀವಪೂರ್ತಿ ಸತ್ಯ ಹೇಳಿ ಬದುಕುತ್ತಾರೆ. ಜೀವನದುದ್ದಕ್ಕೂ ಸತ್ಯವನ್ನೇ ನುಡಿದವರಲ್ಲಿ ನಾನೂ ಒಬ್ಬ. ಸುಳ್ಳನ್ನೇ ಹೇಳಿಕೊಂಡು ಬದುಕಲು ಬಯಸುವವರು ಅವರಿಗೆ ಬಿಟ್ಟಿದ್ದು' ಎಂದು ಹೇಳಿದ್ದಾರೆ.
ಮೋದಿ ಚಿತ್ರ 30 ಕೋಟಿ ಗಳಿಸಿಲ್ಲ, ಬೊಗಳ್ತಾರೆ ಕಚ್ಚಲ್ಲ; ಪಠಾಣ್ ಬಹಿಷ್ಕರಿಸಿದವರ ವಿರುದ್ಧ ಪ್ರಕಾಶ್ ರಾಜ್ ಕಿಡಿ
ಪ್ರಕಾಶ್ ರಾಜ್ ಹೇಳಿದ್ದೇನು?
ಕೇರಳದ ಕಾರ್ಯಕ್ರಮದಲ್ಲಿ ಪ್ರಕಾಶ್ ರಾಜ್, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ತರಾಟೆ ತೆಗೆದುಕೊಂಡಿದ್ದರು. ‘ಕಾಶ್ಮೀರ್ ಫೈಲ್ಸ್ ನಾನ್ಸೆನ್ಸ್ ಸಿನಿಮಾ. ಅದನ್ನು ನಿರ್ಮಾಣ ಮಾಡಿದ್ದು ಯಾರು ಅನ್ನೋದು ನಿಮಗೆ ಗೊತ್ತಿದೆ. ಅಂತಾರಾಷ್ಟ್ರಿಯ ಜ್ಯೂರಿಗಳು ಚಿತ್ರವನ್ನು ತೆಗಳಿದರು. ಈ ಚಿತ್ರದ ನಿರ್ದೇಶಕ ನಮ್ಮ ಚಿತ್ರಕ್ಕೆ ಏಕೆ ಆಸ್ಕರ್ ಸಿಗುತ್ತಿಲ್ಲ ಎಂದು ಕೇಳುತ್ತಿದ್ದಾರೆ, ಇವರಿಗೆ ಭಾಸ್ಕರ್ ಕೂಡ ಸಿಗಲ್ಲ. ಈ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಲು ಅವರು 2000 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ. ಆದರೆ, ಎಲ್ಲಾ ಬಾರಿಯೂ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ’ ಪ್ರಕಾಶ್ ರಾಜ್ ಹೇಳಿದ್ದರು.
ಪ್ರಾಣಿ ರಕ್ಷಣೆಗೆ ಸಂಯುಕ್ತ ಹೊರನಾಡು ಆ್ಯಂಬುಲೆನ್ಸ್, ಹೆಲ್ಪ್‌ಲೈನ್‌ಗೆ ಆರಂಭ;ಈ ಸಂಖ್ಯೆಗೆ ಕರೆ ಮಾಡಿ
ಪಠಾಣ್ ಸಕ್ಸಸ್ ಹೊಗಳಿದ್ದ ಪ್ರಕಾಶ್ ರಾಜ್
'ಅವರು ಪಠಾನ್ ಸಿನಿಮಾವನ್ನು ನಿಷೇಧಿಸಲು ಬಯಸಿದ್ದರು. ಆದರೆ, ಈ ಚಿತ್ರ 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೂರ್ಖರು, ಮತಾಂಧರು ಪಠಾಣ್ನ ಬ್ಯಾನ್ ಮಾಡಲು ಬಯಿಸಿದ್ದರು. ಮೋದಿ ಸಿನಿಮಾಗೆ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿಸಲು ಸಾಧ್ಯವಾಗಿಲ್ಲ. ಅವರು ಬೊಗಳುತ್ತಾರೆ, ಕಚ್ಚುವುದಿಲ್ಲ. ವಾಯು ಮಾಲಿನ್ಯ ಇದು’ ಎಂದು ಪ್ರಕಾಶ್ ರಾಜ್ ಹೇಳಿದ್ದರು.
