Asianet Suvarna News Asianet Suvarna News

ಸೂರ್ಯವಂಶಿ, ಸ್ಪೈಡರ್ ಮ್ಯಾನ್ ಚಿತ್ರಗಳ ದಾಖಲೆ ಮುರಿದ ಕಾಶ್ಮೀರ್ ಫೈಲ್ಸ್; ಕಲೆಕ್ಷನ್ ಮಾಹಿತಿ ಇಲ್ಲಿದೆ

ಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ, 83, ಸ್ಪೈಡರ್ ಮ್ಯಾನ್ ಸಿನಿಮಾಗಳ ದಾಖಲೆಯನ್ನು ಮುರಿದು ದಿ ಕಾಶ್ಮೀರ್ ಫೈಲ್ಸ್ ಮುನ್ನುಗ್ಗುತ್ತಿದೆ. ಶನಿವಾರ ಮತ್ತು ಭಾನುವಾರ ರಜೆ ದಿನಗಳಲ್ಲಿ ಕಾಶ್ಮೀರ್ ಫೈಲ್ಸ್ ಸಿನಿಮಾ ಭರ್ಜರಿ ಗಳಿಕೆ ಮಾಡಿತ್ತು. ಇದುವರೆಗೂ ಸಿನಿಮಾ 179 ಕೋಟಿ ರೂಪಾಯಿ ಬಾಚಿಕೊಂಡಿದೆ.

The Kashmir Files earns Rs 179 crore beats Sooryavanshi and Spider-Man No Way Home
Author
Bengaluru, First Published Mar 22, 2022, 4:53 PM IST

ದಿ ಕಾಶ್ಮೀರ್ ಫೈಲ್ಸ್(The Kashmir Files) ಸಿನಿಮಾ ಭಾರತದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಕೋಟಿ ಕೋಟಿ ಬಾಚಿಕೊಳ್ಳುತ್ತಿರುವ ದಿ ಕಾಶ್ಮೀರ್ ಫೈಲ್ಸ್ 2ನೇ ವಾರ ದಾಖಲೆಯ ಕಲೆಕ್ಷನ್ ಮಾಡಿ ಗಮನ ಸೆಳೆದಿದೆ. ದಿ ಕಾಶ್ಮೀಕ್ ಫೈಲ್ಸ್ ಚಿತ್ರದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಸಿನಿಮಾ ನೋಡಿ ಅನೇಕರು ಮೆಚ್ಚಿಕೊಂಡರೆ ಇನ್ನು ಕೆಲವರು ಅಸಮಾಧಾನ ಹೊರಹಾಕುತ್ತಿದ್ದಾರೆ. ಸಿನಿಮಾ ಬಿಡುಗಡೆಯಾಗಿ 11ನೇ ದಿನವೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ.

1990ರ ಸಮಯದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಬಗ್ಗೆ ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ((Vivek Agnihotri) ಸಾರಥ್ಯದಲ್ಲಿ ಬಂದ ಈ ಚಿತ್ರಕ್ಕೆ ಸಿನಿ ಗಣ್ಯರು ಮಾತ್ರವಲ್ಲದೆ ಅನೇಕ ರಾಜಕೀಯ ಗಣ್ಯರು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯನ್ನು ಅನೇಕರು ಹಾಡಿಹೊಗಳುತ್ತಿದ್ದಾರೆ. ಎಂತಹ ಸಿನಿಮಾ ನೀಡಿದ್ದೀರಿ ಎಂದು ಅಗ್ನಿಹೋತ್ರಿಗೆ ಗಣ್ಯಾತಿಗಣ್ಯರು ಶಹಭಾಷ್ ಗಿರಿ ನೀಡುತ್ತಿದ್ದಾರೆ.

ಕಲೆಕ್ಷನ್ ವಿಚಾರದಲ್ಲಿ ದಾಖಲೆ ನಿರ್ಮಿಸಿರುವ ದಿ ಕಾಶ್ಮೀರ್ ಫೈಲ್ಸ್ ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ ಮಾಡಿತ್ತು. ಈ ಮೂಲಕ ಕಾಶ್ಮೀರ್ ಫೈಲ್ಸ್ ಅನೇಕ ಸಿನಿಮಾಗಳ ದಾಖಲೆಯನ್ನು ಮುರಿದಿದೆ. ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ, 83, ಸ್ಪೈಡರ್ ಮ್ಯಾನ್ ಸಿನಿಮಾಗಳ ದಾಖಲೆಯನ್ನು ಮುರಿದು ದಿ ಕಾಶ್ಮೀರ್ ಫೈಲ್ಸ್ ಮುನ್ನುಗ್ಗುತ್ತಿದೆ. ಶನಿವಾರ ಮತ್ತು ಭಾನುವಾರ ರಜೆ ದಿನಗಳಲ್ಲಿ ಕಾಶ್ಮೀರ್ ಫೈಲ್ಸ್ ಸಿನಿಮಾ ಭರ್ಜರಿ ಗಳಿಕೆ ಮಾಡಿತ್ತು. ಶನಿವಾರ ಒಂದೇ ದಿನ ಸಿನಿಮಾ 24.80 ಕೋಟಿ ಬಾಚಿಕೊಂಡರೆ ಭಾನುವಾರ 26.20 ಕೋಟಿ ಕಲೆಕ್ಷನ್ ಮಾಡಿತ್ತು. ಆ ಮೂಲಕ ಒಟ್ಟು 168 ಕೋಟಿ ಬಾಚಿಕೊಂಡಿದ್ದರು.

ಇದೀಗ ಕಾಶ್ಮೀರ್ ಫೈಲ್ಸ್ 11ನೇ ದಿನ 179 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಏರಡನೇ ವಾರ ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ 162 ಕೋಟಿ ಕಲೆಕ್ಷನ್ ಮಾಡಿತ್ತು. ಕಾಶ್ಮೀರ್ ಫೈಲ್ಸ್ ಈ ದಾಖಲೆಯನ್ನು ಮುರಿದು ಭಾರಿ ಮುನ್ನಡೆ ಸಾಧಿಸಿದೆ. ಕಲೆಕ್ಷನ್ ಇದೇ ವೇಗದಲ್ಲಿ ಸಾಗಿದರೇ 200 ಕೋಟಿ ಕ್ಲಬ್ ದಾಟಿ ಮುಂದಿನ ವಾರ 300 ಕೋಟಿ ಕ್ಲಬ್ ಸೇರುವ ಸೂಚನೆ ನೀಡಿದೆ.

ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಪುನೀತ್ ಇಸ್ಸಾರ್, ಪ್ರಕಾಶ್ ಬೆಳವಾಡಿ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.

ಆಮೀರ್ ಖಾನ್ ಹೇಳಿಕೆ

ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್(Aamir Khan) ಪ್ರತಿಕ್ರಿಯೆ ನೀಡಿ ಚಿತ್ರವನ್ನು ಹಾಡಿ ಹೊಗಳಿದ್ದರು. ಖಂಡಿತವಾಗಿಯೂ ಈ ಸಿನಿಮಾ ನೋಡುತ್ತೇನೆ ಎಂದು ಆಮೀರ್ ಖಾನ್ ಹೇಳಿದ್ದರು. 'ನಾನು ಈ ಸಿನಿಮಾವನ್ನು ಖಂಡಿತವಾಗಿಯೂ ನೋಡುತ್ತೇನೆ. ಈ ಕತೆ ನಮ್ಮ ಇತಿಹಾಸದ ಒಂದು ಭಾಗವಾಗಿದೆ. ಕಾಶ್ಮೀರಿ ಪಂಡಿತರಿಗೆ ಏನಾಯಿತು ಎನ್ನುವುದು ನಿಜಕ್ಕೂ ದುಃಖಕರವಾಗಿದೆ. ಅಂತಹ ವಿಷಯದ ಮೇಲೆ ಯಾವುದೇ ಸಿನಿಮಾ ಬಂದರೂ ಭಾರತೀಯರು ನೋಡಬೇಕು' ಎಂದಿದ್ದರು.

'ಈ ಚಿತ್ರ ಮಾನವೀತೆ ಇರುವ ಎಲ್ಲಾ ಜನರ ಭಾವನೆಗಳನ್ನು ಮುಟ್ಟಿದೆ. ನಾನು ಖಂಡಿತವಾಗಿ ಸಿನಿಮಾ ವೀಕ್ಷಿಸುತ್ತೇನೆ. ಈ ಸಿನಿಮಾ ಯಶಸ್ವಿಯಾಗಿರುವುದು ನೋಡಿ ನನಗೆ ತುಂಬಾ ಸಂತೋಷವಾಗಿದೆ' ಎಂದು ಹೇಳಿದರು.

 

Follow Us:
Download App:
  • android
  • ios