ನನ್ನ ಚಿತ್ರಗಳಿಗೆ ಸ್ಟಾರ್‌ಗಳ ಅಗತ್ಯವಿಲ್ಲ, ನಟರು ಸಾಕು: ಕಂಗನಾ ಕಾಲೆಳೆದ ಕಾಶ್ಮೀರಿ ಫೈಲ್ಸ್ ನಿರ್ದೇಶಕ

  • ಕಂಗನಾ ಕಾಲೆಳೆದ ಕಾಶ್ಮೀರಿ ಫೈಲ್ಸ್ ನಿರ್ದೇಶಕ
  • ನನ್ನ ಚಿತ್ರಗಳಿಗೆ ಸ್ಟಾರ್‌ಗಳ ಅಗತ್ಯವಿಲ್ಲ, ನಟರು ಸಾಕು
  • ಕಾಶ್ಮೀರ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳಿಕೆ
The Kashmir Files director Vivek Agnihotri takes indirect dig at Kangana Ranaut akb

ಕಾಶ್ಮೀರ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಕಂಗನಾ ರನೌತ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. 90 ರ ದಶಕದಲ್ಲಿ ಕಣಿವೆ ರಾಜ್ಯ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಹಾಗೂ ಕಣಿವೆಯಿಂದ ಹೊರದೂಡಲ್ಪಟ್ಟ ಕತೆಯನ್ನಾಧರಿಸಿ ನಿರ್ಮಾಪಕ ವಿವೇಕ್ ರಂಜನ್ ಅಗ್ನಿಹೋತ್ರಿ (Vivek Ranjan Agnihotri) ನಿರ್ಮಿಸಿದ ಚಲನಚಿತ್ರ 'ದಿ ಕಾಶ್ಮೀರ್ ಫೈಲ್ಸ್‌ (The Kashmir Files) ಪ್ರೇಕ್ಷಕರಿಂದ ಅಪಾರ ಪ್ರೀತಿ ಮತ್ತು ಮೆಚ್ಚುಗೆಯನ್ನು ಗಳಿಸುತ್ತಿದೆ. ಈ ಸಿನಿಮಾದಿಂದ ಬಾಲಿವುಡ್‌ ನಟಿ ಕಂಗನಾ ರಣಾವತ್ (Kangana Ranaut) ಕೂಡ ಪ್ರಭಾವಿತರಾದರು ಮತ್ತು ಅಂತಹ ಸೂಕ್ಷ್ಮ ವಿಷಯದ ಮೇಲೆ ಚಲನಚಿತ್ರವನ್ನು ನಿರ್ಮಿಸಿದ್ದಕ್ಕಾಗಿ ಚಲನಚಿತ್ರ ನಿರ್ಮಾಪಕರನ್ನು ಶ್ಲಾಘಿಸಿದ್ದರು. 

ಬಾಲಿವುಡ್‌ ಕ್ವೀನ್‌ ಖ್ಯಾತಿಯ ಕಂಗನಾ ತನ್ನ ಮನೋಜ್ಞ ನಟನಾ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ ಮತ್ತು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಮತ್ತು ಅಗ್ನಿಹೋತ್ರಿಯವರ 'ದಿ ಕಾಶ್ಮೀರ್ ಫೈಲ್ಸ್' ಗೆ ಅವರ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೋಡಿ ನಟಿ ಶೀಘ್ರದಲ್ಲೇ ಅವರೊಂದಿಗೆ ಕೆಲಸ ಮಾಡಬಹುದೆಂಬ ಊಹಾಪೋಹಗಳು ಹಬ್ಬಿದ್ದವು. ಆದಾಗ್ಯೂ ಈಗ ತಮ್ಮ ಚಿತ್ರದ ಯಶಸ್ಸಿನ ಹುರುಪಿನಲ್ಲಿರುವ ನಿರ್ಮಾಪಕ ವಿವೇಕ್ ರಂಜನ್ ಅಗ್ನಿಹೋತ್ರಿ ಈಗ 'ತಲೈವಿ' ನಟಿಯ 'ಸ್ಟಾರ್' ಸ್ಥಾನಮಾನದ ಕಾರಣದಿಂದಾಗಿ ಅವರೊಂದಿಗೆ ಕೆಲಸ ಮಾಡಲು ನಿರಾಕರಿಸಿದ್ದಾಗಿ ಹೇಳಿದ್ದಾರೆ. 

ಜನ್ಮದಿನದ ಸಂಭ್ರಮದಲ್ಲಿ ಕಂಗನಾ ರಣಾವತ್; ದೇವಿ ದರ್ಶನ ಪಡೆದು ನಟಿ ಹೇಳಿದ್ದೇನು?

ಮನರಂಜನಾ ಪೋರ್ಟಲ್‌ಗೆ ನೀಡಿರುವ ಸಂದರ್ಶನವೊಂದರಲ್ಲಿ ವಿವೇಕ್, 'ನನ್ನ ಚಿತ್ರಗಳಿಗೆ ಸ್ಟಾರ್‌ಗಳ ಅಗತ್ಯವಿಲ್ಲ. ನನ್ನ ಸಿನಿಮಾಗಳಿಗೆ ನಟರು ಬೇಕು. ನಾನು 12 ವರ್ಷಗಳ ಹಿಂದೆ ನನ್ನ ಸಿನಿ ಪ್ರಯಾಣವನ್ನು ಪ್ರಾರಂಭಿಸಿದಾಗ ನಾನು ನನ್ನದೇ ರೀತಿಯ ಚಲನಚಿತ್ರವನ್ನು ಮಾಡಬೇಕೆಂದು ನಿರ್ಧರಿಸಿದೆ ಮತ್ತು ನಾನು ಎಂದಿಗೂ ಸ್ಟಾರ್ ಪ್ರಧಾನ್ಯತೆಯ ಚಲನಚಿತ್ರವನ್ನು ಮಾಡುವುದಿಲ್ಲ. ಸಿನಿಮಾ, ಬರಹಗಾರ ಮತ್ತು ನಿರ್ದೇಶಕರ ಮಾಧ್ಯಮ ಎಂದು ನಾನು ದೃಢವಾಗಿ ನಂಬುತ್ತೇನೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ  ಕಾಶ್ಮೀರಿ ಫೈಲ್ಸ್ ಸಿನಿಮಾವನ್ನು ಹೊಗಳಿದ ಕಂಗನಾ ರಣಾವತ್, 'ಎಷ್ಟು ಒಳ್ಳೆಯ ಸಿನಿಮಾಗಳನ್ನು ಇವರು(ಅಗ್ನಿಹೋತ್ರಿ) ಮಾಡಿದ್ದಾರೆ. ಇವರು ಬಾಲಿವುಡ್‌ನ ಪಾಪವನ್ನು ತೊಳೆದಿದ್ದಾರೆ ಎಂದು ಹೇಳಿದ್ದರು. ಅಲ್ಲದೇ ಇತರ ಸೆಲೆಬ್ರಿಟಿಗಳು ಹೊರಬಂದು ಈ ಚಿತ್ರದ ಪ್ರಚಾರ ಮಾಡುವಂತೆ ಅವರು ಒತ್ತಾಯಿಸಿದರು. ಏತನ್ಮಧ್ಯೆ, ರಾಷ್ಟ್ರದಲ್ಲಿ ಹವಾ ಎಬ್ಬಿಸಿದ 'ದಿ ಕಾಶ್ಮೀರ ಫೈಲ್ಸ್' ಸಿನಿಮಾ ಈಗ ಯುಎಇಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಅಂತಿಮವಾಗಿ ಯುಎಇಯಲ್ಲಿ ಚಿತ್ರದ ಮೇಲಿನ ನಿಷೇಧವನ್ನು ತೆಗೆದು ಹಾಕಲಾಗಿದೆ ಮತ್ತು ಚಿತ್ರವು ಏಪ್ರಿಲ್ 7 ರಂದು ಅಲ್ಲಿ ಬಿಡುಗಡೆಯಾಗಲಿದೆ. 

'ಭೋಪಾಲಿ' ಎಂದರೆ ಸಲಿಂಗಕಾಮಿ; ಭೋಪಾಲ್ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ 'ಕಾಶ್ಮೀರ್ ಫೈಲ್ಸ್' ನಿರ್ದೇಶಕ

ಸಂತೋಷದ ಸುದ್ದಿಯನ್ನು ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 'ದೊಡ್ಡ ವಿಜಯ: ಅಂತಿಮವಾಗಿ, ಯುಎಇಯಿಂದ ಸೆನ್ಸಾರ್ ಕ್ಲಿಯರೆನ್ಸ್ ಸಿಕ್ಕಿತು. ಯಾವುದೇ ಕಡಿತವಿಲ್ಲದೆ 15+ ರೇಟ್ ಮಾಡಲಾಗಿದೆ. ಏಪ್ರಿಲ್ 7 ರಂದು (ಗುರುವಾರ) ಬಿಡುಗಡೆಯಾಗುತ್ತಿದೆ. ಈಗ ಸಿಂಗಾಪುರ ಎಂದು ಟ್ವಿಟ್ ಮಾಡಿದ್ದರು. ಈ ಸುದ್ದಿಯನ್ನು ನಟ ಅನುಪಮ್ ಖೇರ್ (Anupam Kher) ಟ್ವೀಟ್ ಮಾಡುವ ಮೂಲಕ ಸಂಭ್ರಮಿಸಿದರು.

'ಹರ್ ಹರ್ ಮಹಾದೇವ್! #TheKashmirFiles ಅಂತಿಮವಾಗಿ #UAE ನಲ್ಲಿ ಏಪ್ರಿಲ್ 7 ರಂದು ಬಿಡುಗಡೆಯಾಗುತ್ತಿದೆ! ಎಂದು ಖೇರ್ ಬರೆದುಕೊಂಡಿದ್ದಾರೆ. 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವೂ ಬಿಡುಗಡೆಯಾದಾಗಿನಿಂದಲೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.ಇದು  250 ಕೋಟಿ ರೂಪಾಯಿಗಳ ಗಡಿ ದಾಟಿದೆ. ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್(Anupam Kher), ಪಲ್ಲವಿ ಜೋಶಿ(Pallavi Joshi), ದರ್ಶನ್ ಕುಮಾರ್ (Darshan Kumaar), ಭಾಷಾ ಸುಂಬ್ಲಿ (Bhasha Sumbli) ಮತ್ತು ಚಿನ್ಮಯ್ ಮಾಂಡ್ಲೇಕರ್ (Chinmay Mandlekar)ನಟಿಸಿದ್ದಾರೆ. 
 

Latest Videos
Follow Us:
Download App:
  • android
  • ios