ಹಿಂಸೆ, ನಾನ್ಸೆನ್ಸ್ ಸಿನಿಮಾ; ಪ್ರಭಾಸ್-ಪ್ರಶಾಂತ್ ನೀಲ್ 'ಸಲಾರ್' ವಿರುದ್ಧ ನಿರ್ದೇಶಕ ಆಗ್ನಿಹೋತ್ರಿ ಕಿಡಿ
ಹಿಂಸೆ, ನಾನ್ಸೆನ್ಸ್, ವಿಪರೀತ ಹಿಂಸೆಯನ್ನು ಗ್ಲಾಮರ್ ಮಾಡುವುದನ್ನೂ ಪ್ರತಿಭೆ ಎಂದುಕೊಂಡಿದ್ದಾರೆ ಎಂದು ಪ್ರಭಾಸ್-ಪ್ರಶಾಂತ್ ನೀಲ್ ಅವರ 'ಸಲಾರ್' ವಿರುದ್ಧ ನಿರ್ದೇಶಕ ಆಗ್ನಿಹೋತ್ರಿ ಕಿಡಿ ಕಾರಿದ್ದಾರೆ.
ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸುದ್ದು ಮಾಡುತ್ತಿದೆ. ಭಾರಿ ನಿರೀಕ್ಷೆಯ ಟೀಸರ್ ಇದಾಗಿತ್ತು. ಜುಲೈ 6 ಬೆಳ್ಳಂಬೆಳಗ್ಗೆ ಸಲಾರ್ ಟೀಸರ್ ರಿಲೀಸ್ ಮಾಡಲಾಗಿದೆ. ಟೀಸರ್ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆದಿದೆ. ಟೀಸರ್ ಸದ್ಯ ಟ್ರೆಂಡಿಂಗ್‌ನಲ್ಲಿದೆ. ಈ ಟೀಸರ್ ನಲ್ಲಿ ನಾಯಕನನ್ನು ಅತ್ಯಂತ ಹಿಂಸಾತ್ಮಕ ವ್ಯಕ್ತಿ ಎಂದು ಲೇಬಲ್ ಮಾಡಲಾಗಿದೆ. ಈ ಬಗ್ಗೆ ಅನೇಕರು ಅಸಮಧಾನ ಹೊರಹಾಕುತ್ತಿದ್ದಾರೆ. ಇದೀಗ ಕಾಶ್ಮೀರ್ ಫೈಲ್ಸ್ ಖ್ಯಾತಿಯ ಬಾಲಿವುಡ್ ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಲಾರ್ ಸಿನಿಮಾದ ವಿರುದ್ಧ ಕಿಡಿ ಕಾರಿದ್ದಾರೆ.
ನಿರ್ದೇಶಕ ಆಗ್ನಿಹೋತ್ರಿ ಸಾಮಾಜಿಕ ಜಾಲತಾಣಲ್ಲಿ ಹಿಂಸೆಯನ್ನು ವೈಭವೀಕರಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಪರೋಕ್ಷವಾಗಿ ಸಲಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ ಟ್ವೀಟ್‌ನಲ್ಲಿ ಆಗ್ನಿಹೋತ್ರಿ ಸಲಾರ್ ಅಥವಾ ಪ್ರಭಾಸ್ ಹೆಸರನ್ನು ಹೇಳದೆ ವಾಗ್ದಾಳಿ ನಡೆಸಿದ್ದಾರೆ. 'ಈಗ ಸಿನಿಮಾದಲ್ಲಿ ವಿಪರೀತ ಹಿಂಸೆಯನ್ನು ಗ್ಲಾಮರ್ ಮಾಡುವುದನ್ನೂ ಪ್ರತಿಭೆ ಎಂದು ಪರಿಗಣಿಸಲಾಗಿದೆ. ನಾನ್ಸೆನ್ಸ್ ಸಿನಿಮಾವನ್ನು ಪ್ರಚಾರ ಮಾಡುವುದು ದೊಡ್ಡ ಪ್ರತಿಭೆ ಎಂದು ಪರಿಗಣಿಸಲಾಗಿದೆ. ನಟರಲ್ಲದವರನ್ನು ದೊಡ್ಡ ಸ್ಟಾರ್ ಎಂದು ಪ್ರಚಾರ ಮಾಡುವುದು ದೊಡ್ಡ ಪ್ರತಿಭೆ ಎಂದುಕೊಂಡಿದ್ದಾರೆ. ಪ್ರೇಕ್ಷಕರು ಸೂಪರ್ ದಡ್ಡರು ಎಂದು ಭಾವಿಸುವುದು ಎಲ್ಲಾ ಪ್ರತಿಭೆಗಳ ತಾಯಿ' ಎಂದು ಕಿಡಿ ಕಾರಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಆಗ್ನಿಹೇತ್ರಿ, 'ಅಸಾಧಾರಣ, ಪ್ರಯೋಗ, ಆವಿಷ್ಕಾರ, ಇಂಜಿನಿಯರಿಂಗ್. ಅಸಾಧಾರಣ ಆಕ್ಷನ್ ಸಿನಿಮಾದ ಜಗತ್ತು' ಎಂದು ಹೇಳಿದ್ದಾರೆ.
Salaar Teaser: ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಟೀಸರ್ ರಿಲೀಸ್: ರಗಡ್ ಲುಕ್‌ನಲ್ಲಿ ಡಾರ್ಲಿಂಗ್ ಪ್ರಭಾಸ್
ಸದ್ಯ ರಿಲೀಸ್ ಆಗಿರುವ ಟೀಸರ್‌ನಲ್ಲಿ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ. ಆದರೆ ನಾಯಕ ಪ್ರಭಾಸ್ ಅವರನ್ನು ಅತ್ಯಂತ ಹಿಂಸಾತ್ಮಕ ನಾಯಕ ಎಂದು ಬಿಂಬಿಸಲಾಗಿದೆ. ಸಲಾರ್ ಕೂಡ ಪಾರ್ಟ್ 1 ಮತ್ತು ಪಾರ್ಟ್ 2ನಲ್ಲಿ ರಿಲೀಸ್ ಆಗುತ್ತಿದೆ. ಪ್ರಭಾಸ್ ಲುಕ್ ಜೊತೆಗೆ ಮಲಯಾಳಂ ಸ್ಟಾರ್ ಸುಕುಮಾರ್ ದರ್ಶನ ಕೂಡ ಟೀಸರ್‌ನಲ್ಲಿ ಆಗಿದೆ. ಈ ಸಿನಿಮಾದಲ್ಲಿ ಸುಕುಮಾರನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
'KGF-2' ಕ್ಲೈಮ್ಯಾಕ್ಸ್‌ಗು 'ಸಲಾರ್' ಟೀಸರ್‌ಗೂ ಇದೆ ಲಿಂಕ್: ಏನಿದು 5:12AM ರಹಸ್ಯ?
ಇನ್ನು ಉಳಿದಂತೆ ಸಲಾರ್ ಸಿನಿಮಾದಲ್ಲಿ ಕನ್ನಡದ ನಟ ದೇವರಾಜ್, ಜಗಪತಿ ಬಾಬು ಸೇರಿದಂತೆ ಅನೇಕ ಸ್ಟಾರ್ ಕಾಣಿಸಿಕೊಂಡಿದ್ದಾರೆ. ಶ್ರುತಿ ಹಾಸನ್ ನಾಯಕಿಯಾಗಿ ಮಿಂಚಿದ್ದಾರೆ. ಶ್ರುತಿ, ಆದ್ಯಾ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರವಿ ಬಸ್ರೂರ್ ಸಂಗೀತ ಸಿನಿಮಾಗಿದೆ. ಕೆಜಿಎಫ್ ಬಳಿಕ ಬಹುತೇಕ ಅದೇ ತಂಡ ಸಲಾರ‌್‌ನಲ್ಲೂ ಒಂದಾಗಿದ್ದು ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಟೀಸರ್‌ನಲ್ಲೇ ಹಿಂಸೆಯ ಬಗ್ಗೆ ದೊಡ್ಡ ಸುಳಿವು ನೀಡಿರುವ ಸಲಾರ್ ಸಿನಿಮಾ ಹೇಗಿರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.