'KGF-2' ಕ್ಲೈಮ್ಯಾಕ್ಸ್‌ಗು 'ಸಲಾರ್' ಟೀಸರ್‌ಗೂ ಇದೆ ಲಿಂಕ್: ಏನಿದು 5:12AM ರಹಸ್ಯ?
ಯಶ್ ನಟನೆಯ 'KGF-2' ಕ್ಲೈಮ್ಯಾಕ್ಸ್‌ಗೂ 'ಸಲಾರ್' ಟೀಸರ್ ರಿಲೀಸ್ ಸಮಯಕ್ಕೂ ಲಿಂಕ್ ಇದೆ ಎನ್ನುವ ಚರ್ಚೆ ವೈರಲ್ ಆಗಿದೆ. 15:12ರ ರಹಸ್ಯ ಏನು ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.
ಭಾರತೀಯ ಸಿನಿಮಾರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ಸಲಾರ್. ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್, ಹೊಂಬಾಳೆ ಫಿಲ್ಮ್ಸ್ ಹಾಗೂ ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಸಲಾರ್ ಸಿನಿಮಾಗಾಗಿ ಅಭಿಮಾನಿಗಳು ಭಾರಿ ಕುತೂಹಲದಿಂದ ಕಾಯುತ್ತಿದ್ದಾರೆ. ಕೆಜಿಎಫ್ ಸಿನಿಮಾ ನಂತರ ನಿರ್ದೇಶಕ ಪ್ರಶಾಂತ್ ನೀಲ್ ಕೈಗೆತ್ತಿಕೊಂಡಿರುವ ಸಲಾರ್ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಸಲಾರ್ ಸಿನಿಮಾದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ದಿಢೀರ್ ಟೀಸರ್ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಅಂದಹಾಗೆ ಸಲಾರ್ ಟೀಸರ್ ಜುಲೈ 6ಕ್ಕೆ ರಿಲೀಸ್ ಆಗುತ್ತಿದೆ. ಟೀಸರ್ ರಿಲೀಸ್ ಸಮಯದಲ್ಲೂ ಒಂದು ವಿಶೇಷತೆ ಇದೆ. ಸಾಮಾನ್ಯವಾಗಿ ಸಿನಿಮಾದ ಟ್ರೈಲರ್, ಟೀಸರ್, ಫಸ್ಟ್ ಲುಕ್ ರಿಲೀಸ್ ಆಗುವುದು ಹಗಲು. ಸಂಜೆ ಅಥವಾ ರಾತ್ರಿ ಹೆಚ್ಚಾಗಿ ಸಿನಿಮಾದ ಟೀಸರ್ ಮತ್ತು ಟ್ರೈಲರ್ ರಿಲೀಸ್ ಆಗುತ್ತೆ. ಆದರೆ ಸಲಾರ್ ಸಿನಿಮಾದ ಟೀಸರ್ ಬೆಳ್ಳಂಬೆಳಗ್ಗೆ ರಿಲೀಸ್ ಆಗುತ್ತಿದೆ. ಮುಂಜಾನೆ 5.12ಕ್ಕೆ ರಿಲೀಸ್ ಆಗುತ್ತಿದೆ. ಈ ಸಮಯಕ್ಕೂ ಕೆಜಿಎಫ್ 2 ಸಿನಿಮಾದ ಕ್ಲೈಮ್ಯಾಕ್ಸ್‌ಗೂ ಲಿಂಕ್ ಇದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ.
ಕೆಜಿಎಫ್-2 ಸಿನಿಮಾದ ಕ್ಲೈಮ್ಯಾಕ್ಸ್ ಫೋಟೋ ಮತ್ತು ಸಲಾರ್ ಟೀಸರ್ ರಿಲೀಸ್ ಸಮಯ ಎರಡು ಒಂದೆ. ರಾಕಿ ಭಾಯ್ ಸಿನಿಮಾದ ಕೊನೆಯಲ್ಲಿ ಸಮುದ್ರದಲ್ಲಿ ಮುಳುಗುವ ಸಮಯ ಬೆಳಗ್ಗೆ 5:12. ರಾಕಿ ಭಾಯ್ ಹಡಗಿನ ಪೈಲಟ್ ಡೆಕ್‌ನೊಳಗೆ ನಾಲ್ಕು ಗಡಿಯಾರಗಳಿವೆ. ಒಂದು 5 ಗಂಟೆ, ಮತ್ತೊಂದು ಗಡಿಯಾರದಲ್ಲಿ 5:12 ಇದು ರಾಕಿ ಭಾಯ್ ಸಮುದ್ರಕ್ಕೆ ಮುಳುಗಿದ ಸಮಯವಾಗಿದೆ. ಅದೇ ಸಮಯಕ್ಕೆ ಟೀಸರ್ ರಿಲೀಸ್ ಆಗುತ್ತಿದೆ. ಅಂದರೆ ಆ ಸಮಯಕ್ಕೆ ಸಲಾರ್ ಪ್ರಾರಂಭವಾಗುತ್ತೆ, ಸಲಾರ್ ವ್ಯಕ್ತಿ ರಾಕಿ ಭಾಯ್ ಸಾವಿಗೆ ಸೇಡು ತೀರಿಸಿಕೊಳ್ಳುತ್ತಾನೆ ಎನ್ನುವ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Salaar; ಪ್ರಶಾಂತ್ ನೀಲ್-ಪ್ರಭಾಸ್ ಸಿನಿಮಾದ ಸೀಕ್ವೆಲ್ ಬರ್ತಿದಿಯಾ? ನಿರ್ಮಾಪಕರು ಹೇಳಿದ್ದೇನು?
ಗೇಮ್ ಆಫ್ ಥ್ರೋನ್ಸ್ ಹಾಗೂ ಇತರ ಸೂಪರ್‌ಹಿಟ್ ಸರಣಿಗಳ ಸಂದರ್ಭದಲ್ಲೂ ಹೀಗೆ ಒಂದಕ್ಕೊಂದು ಲಿಂಕ್ ಇರುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸುತ್ತವೆ. ಹಾಗೆ ಸಲಾರ್ ಕೂಡ ಸಾಕಷ್ಟು ಕುತೂಹಲದಿಂದ ಕೂಡಿದೆ ಎನ್ನಲಾಗುತ್ತಿದೆ. ಹಾಗಾಗಿ ಅಭಿಮಾನಿಗಳ ನಿರೀಕ್ಷೆ ಕೂಡ ಮತ್ತಷ್ಟುಹೆಚ್ಚಾಗಿದೆ.
Salaar ಬಿಗ್ ಅಪ್‌ಡೇಟ್; ಕೊನೆಗೂ ಟೀಸರ್ ರಿಲೀಸ್‌ಗೆ ಡೇಟ್ ಫಿಕ್ಸ್
ಅಂದಹಾಗೆ ಸಿನಿಮಾದಲ್ಲಿ ಮಲಾಯಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್, ಕನ್ನಡದ ನಟ ದೇವರಾಜ್, ಜಗಪತಿ ಬಾಬು ಸೇರಿದಂತೆ ಅನೇಕ ಸ್ಟಾರ್ ನಟಿಸಿದ್ದಾರೆ. ನಟಿ ಶ್ರುತಿ ಹಾಸನ್ ಆದ್ಯಾ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರವಿ ಬಸ್ರೂರ್ ಸಂಗೀತ ಸಿನಿಮಾಗಿದೆ. ಕೆಜಿಎಫ್ ಬಳಿಕ ಬಹುತೇಕ ಅದೇ ತಂಡ ಸಲಾರ‌್‌ನಲ್ಲೂ ಒಂದಾಗಿದ್ದು ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅದಕ್ಕೂ ಮೊದಲು ಟೀಸರ್ ನೋಡಲು ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ. ತುಂಬಾ ಸಮಯದಿಂದ ಕಾಯುತ್ತಿದ್ದ ಅಭಿಮಾನಿಗಳು ಟೀಸರ್ ನೋಡಿ ಥ್ರಿಲ್ ಆಗ್ತಾರಾ ಕಾದು ನೋಡಬೇಕು.