ಕೊರೊನಾ ಬಳಿಕ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಹಿಂದಿ ಸಿನಿಮಾ The Kashmir Files; ಗಳಿಸಿದ್ದೆಷ್ಟು?
ಕೊರೊನಾ ಬಳಿಕ ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಏಕೈಕ ಸಿನಿಮಾ ಎಂದರೆ ದಿ ಕಾಶ್ಮೀರ್ ಫೈಲ್ಸ. ಹಿಂದಿಯಲ್ಲಿ ಕೊರೊನಾ ಬಳಿಕ 250 ಕೋಟಿ ದಾಟಿದ ಮೊದಲ ಸಿನಿಮಾ ಇದಾಗಿದೆ.
ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲೂ ದಕ್ಷಿಣ ಭಾರತದ ಸಿನಿಮಾಗಳದ್ದೆ ಹವಾ. ಒಂದು ಕಾಲದಲ್ಲಿ ಹಿಂದಿ ಸಿನಿಮಾ ಇಡೀ ಭಾರತದಾದ್ಯಂತ ಅವರಿಸಿಕೊಂಡಿದ್ದವು. ಆದರೀಗ ಕಾಲ ಬದಲಾಗಿದೆ, ಪ್ರಾದೇಶಿಕ ಭಾಷೆಯ ಸಿನಿಮಾಗಳು ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಸದ್ದು ಮಾಡುತ್ತಿವೆ. ಇದಕ್ಕೆ ಬಾಹುಬಲಿ ಮತ್ತು ಕೆಜಿಎಫ್ ಸಿನಿಮಾಗಳೇ ಸಾಕ್ಷಿ. ಇತ್ತೀಚಿನ ದಿನಗಳಲ್ಲ ದಕ್ಷಿಣ ಭಾರತದ ಅನೇಕ ಸಿನಿಮಾಗಳು ಬಾಲಿವುಡ್ ನಲ್ಲೂ ಧೂಳ್ ಎಬ್ಬಿಸಿವೆ. ಪ್ರದೇಶಿಕ ಭಾಷೆಗಳ ಕ್ರೇಜ್ ನೋಡಿ ಹಿಂದಿ ಸಿನಿಮಾರಂಗ ಮಂಕಾಗಿದೆ. ಇತ್ತೀಚಿನ ದಿನಗಳಲ್ಲಿ ಹಿಂದಿಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳು ತೀರ ಕಡಿಮೆ. ಕೊರೊನಾ ಬಳಿಕ ಸದ್ದು ಮಾಡಿದ ಹಿಂದಿ ಸಿನಿಮಾ ವೆಂದರೆ ಅದು ದಿ ಕಾಶ್ಮೀರ್ ಫೈಲ್ಸ್(The Kashmir Files) ಮಾತ್ರ.
ದಿ ಕಾಶ್ಮೀರ್ ಫೈಲ್ಸ್ ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಕಡಿಮೆ ಬಜೆಟ್ ನಲ್ಲಿ ನಿರ್ಮಿಸಿದ ಈ ಸಿನಿಮಾ ಕೋಟಿ ಕೋಟಿ ಗಳಿಕೆ ಮಡುವ ಮೂಲಕ ಸ್ಟಾರ್ ನಟರ ಸಿನಿಮಾಗಳನ್ನು ಹಿಂದಕ್ಕೆ ತಳ್ಳಿ ದಾಖಲೆ ಮಾಡಿದೆ. ಕೊರೊನಾ ಬಳಿಕ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಏಕೈಕ ಹಿಂದಿ ಸಿನಿಮಾ ಎಂದರೆ ದಿ ಕಾಶ್ಮೀರ್ ಫೈಲ್ಸ. ಹಿಂದಿಯಲ್ಲಿ ಕೊರೊನಾ ಬಳಿಕ 250 ಕೋಟಿ ದಾಟಿದ ಮೊದಲ ಸಿನಿಮಾ ಇದಾಗಿದೆ. ಬಾಕ್ಸ್ ಆಫೀಸ್ ನಲ್ಲಿ ದಿ ಕಾಶ್ಮೀರ್ ಫೈಲ್ಸ್ ಒಟ್ಟು 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.
RRR ಮತ್ತು ಕಾಶ್ಮೀರ್ ಫೈಲ್ಸ್ ನೋಡಿದ್ರಾ ಯಶ್?, ರಾಕಿಂಗ್ ಸ್ಟಾರ್ ಉತ್ತರವೇನು?
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿದ್ದು ಇದು 90 ದಶಕದಲ್ಲಿ ಕಾಶ್ಮೀರ ಪಂಡಿತರ ಹತ್ಯೆ ಮತ್ತು ವಲಸೆ ಬಗ್ಗೆ ಇರುವ ಸಿನಿಮಾವಾಗಿದೆ. ಕೇವಲ 15 ಕೋಟಿ ರೂಪಾಯಿನಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಸಿನಿಮಾ ಬಿಡುಗಡೆಯಾಗಿ 5 ವಾರಗಳಲ್ಲಿ ಕಾಶ್ಮೀರ ಫೈಲ್ಸ್ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಬಗ್ಗೆ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಮಾಹಿತಿ ನೀಡಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಅನುಪಮ್ ಖೇರ್, ವಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ದರ್ಶನ್ ಕುಮಾರ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಸ್ಟಾರ್ ಕಲಾವಿದರಿಲ್ಲದೆ, ಅಬ್ಬರದ ಪ್ರಚಾರ ವಿಲ್ಲದೆ ಈ ಸಿನಿಮಾ ಗಳಿಸಿದ ದೊಡ್ಡ ಮಟ್ಟದ ಸಕ್ಸಸ್ ಬಾಲಿವುಡ್ ಮಂದಿಗೆ ಅಚ್ಚರಿ ಮೂಡಿಸಿದೆ.
'ದಿ ಕಾಶ್ಮೀರ್ ಫೈಲ್ಸ್ ಏಕ್ ಅರ್ಧಸತ್ಯ' ಕಾರ್ಯಕ್ರಮಕ್ಕೆ ಕಾಶ್ಮೀರಿ ಪಂಡಿತರಿಗೆ ತಡೆ
ದಿ ಕಾಶ್ಮೀರ್ ಪೈಲ್ಸ್ ವಿಶ್ವದಾದ್ಯಂತ 337 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ ಸಿನಿಮಾ ವಿಶ್ವದಾದ್ಯಂತ 293 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಬಳಿಕ ಬಂದ ಆರ್ ಆರ್ ಆರ್ 1000 ಕೋಟಿ ಗಡಿದಾಟಿ ಮುನ್ನುಗ್ಗುತ್ತಿದೆ. ಇದೀಗ ಕನ್ನಡದ ಕೆಜಿಎಫ್2 ಸಿನಿಮಾದ ಮೇಲು ಭಾರಿ ನಿರೀಕ್ಷೆ ಇದ್ದು, ಆರ್ ಆರ್ ಆರ್ ದಾಖಲೆಯನ್ನು ಬ್ರೇಕ್ ಮಾಡುತ್ತಾ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.