ಬಾಲಿವುಡ್​ ನಟಿ ಶೆಹನಾಜ್ ಗಿಲ್ ಆಸ್ಪತ್ರೆಗೆ ದಾಖಲಿದ್ದಾರೆ. ಇದಕ್ಕೂ ಟ್ರೋಲ್​ ಮಾಡ್ತಿರೋ ಟ್ರೋಲಿಗರು ಇದು ಆ ದಿನ ಕಂಡಕಂಡವರಿಗೆ ಕಿಸ್​ ಕೊಟ್ಟ ಪ್ರಭಾವ ಅಂತಿದ್ದಾರೆ!  

ಪಂಜಾಬ್‌ನ ಕತ್ರಿನಾ ಎಂದು ಕರೆಯಲ್ಪಡುವ ನಟಿ ಶೆಹನಾಜ್​ ಗಿಲ್ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಸಿನಿಮಾಗಳಲ್ಲಿ ಬಿಜಿ ಆಗಿರುವ ನಟಿ ಬೋಲ್ಡ್​ ಲುಕ್​ನಲ್ಲಿಯೇ ಫೇಮಸ್​ ಆಗುತ್ತಿರುವವರು. ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಶೆಹನಾಜ್ ಗಿಲ್, ಶೀಘ್ರದಲ್ಲೇ 'ಥ್ಯಾಂಕ್ ಯು ಫಾರ್ ಕಮಿಂಗ್' ಚಿತ್ರದ ಮೂಲಕ ತೆರೆ ಮೇಲೆ ಬರಲಿದ್ದಾರೆ. ಥ್ಯಾಂಕ್ ಯು ಫಾರ್ ಕಮಿಂಗ್' ಚಿತ್ರದಲ್ಲಿ ಶೆಹನಾಜ್​ ಜೊತೆ ಭೂಮಿ ಪೆಡ್ನೇಕರ್, ಕುಶಾ ಕಪಿಲಾ, ಡಾಲಿ ಸಿಂಗ್ ಮತ್ತು ಶಿಬಾನಿ ಬೇಡಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇದರ ಟ್ರೇಲರ್​ ಬಿಡುಗಡೆಯಾಗಿದ್ದು, ಭರ್ಜರಿ ಪ್ರಚಾರದಲ್ಲಿ ತೊಡಗಿತ್ತು ತಂಡ. ಇದೇ ಅಕ್ಟೋಬರ್​ 6ರಂದು ಚಿತ್ರ ಬಿಡುಗಡೆಯಾಗಿದ್ದು, ಅದರ ಖುಷಿಯಲ್ಲಿದೆ ಚಿತ್ರತಂಡ. ಈ ಚಿತ್ರದ ಪ್ರಮೋಷನ್​ನಲ್ಲಿದ್ದ ನಟಿ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲವು ತಾರೆಯರು ನಟಿಯನ್ನು ನೋಡಲು ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ನಟಿಯ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಅಭಿಮಾನಿಗಳು ಆತಂಕ ಹೊರಹಾಕಿದ್ದಾರೆ.

ಆದರೆ ಯಾರೂ ಅಷ್ಟು ಹೆದರುವ ಅಗತ್ಯವಿಲ್ಲ ಎಂದು ನಟಿ ಖುದ್ದು ಹೇಳಿದ್ದಾರೆ. ಅಷ್ಟಕ್ಕೂ ನಟಿಗೆ ಹೊಟ್ಟೆಯಲ್ಲಿ ತೀವ್ರ ಸಮಸ್ಯೆಯಾಗಿದೆ ಎನ್ನಲಾಗಿದೆ. ಥ್ಯಾಂಕ್‌ ಯು ಫಾರ್ ಕಮಿಂಗ್ ಚಲನಚಿತ್ರದ ಪ್ರಚಾರ ಮಾಡುವ ಸಮಯದಲ್ಲಿ ಎಲ್ಲೆಡೆ ಸುತ್ತಾಡುತ್ತಿರುವಾಗ ತಿಂದ ಆಹಾರ ಎಡವಟ್ಟಾಗಿದ್ದು ಫುಡ್​ ಪಾಯಿಸನ್​ ಆಗಿದೆ ಎನ್ನಲಾಗಿದೆ. ಸೋಂಕು ಹೆಚ್ಚಾಗಿದ್ದರಿಂದ ಆಕೆಯನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಹೋಗುವ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದ ನಟಿ, ತಮಗೆಹೆಚ್ಚಿಗೆ ಏನೂ ಸಮಸ್ಯೆ ಆಗಿಲ್ಲ ಎಂದು ಹೇಳಿದ್ದರು. ನಂತರ ನಟಿ ಆಸ್ಪತ್ರೆಯ ಹಾಸಿಗೆಯ ಮೇಲೆ ಆಸ್ಪತ್ರೆಯ ಬಟ್ಟೆಗಳನ್ನು ಧರಿಸಿ ಮಲಗಿರುವ ವಿಡಿಯೋ ವೈರಲ್​ ಆಗಿದೆ. ಅದರಲ್ಲಿ ನಟಿ, ಎಲ್ಲರ ಸಮಯವೂ ಬರುತ್ತದೆ ಮತ್ತು ಹೋಗುತ್ತದೆ. ಅದು ನನಗೂ ಸಂಭವಿಸಿದೆ ಎಂದಿದ್ದಾರೆ. ನಾನು ಈಗ ಚೆನ್ನಾಗಿದ್ದೇನೆ. ನಾನು ಸ್ಯಾಂಡ್‌ವಿಚ್ ತಿಂದಿದ್ದು ಅದರಿಂದ ಏನೋ ಸಮಸ್ಯೆ ಆದಂತಿದೆ, ಸೋಂಕು ಉಂಟಾಗಿದ್ದು, ಹೆಚ್ಚಿನ ಸಮಸ್ಯೆ ಇಲ್ಲ ಎಂದಿದ್ದಾರೆ.

ಭೂಮಿ ಪೆಡ್ನೇಕರ್​ರನ್ನು ತಬ್ಬಿಕೊಂಡು ತುಟಿಗೆ ತುಟಿಯಿಟ್ಟ ಶೆಹನಾಜ್​ ಗಿಲ್: ಹೆಣ್ಮಕ್ಕಳನ್ನೂ ಬಿಡಲ್ವಾ ಅಂದ ಫ್ಯಾನ್ಸ್​

ಚಿತ್ರ ನಿರ್ಮಾಪಕಿ ರಿಯಾ ಕಪೂರ್ ಸೇರಿದಂತೆ ಹಲವು ತಾರೆಯರು ಇದಾಗಲೇ ಆಸ್ಪತ್ರೆಗೆ ಭೇಟಿ ನೀಡಿ ನಟಿಯ ಆರೋಗ್ಯ ವಿಚಾರಿಸುತ್ತಿದ್ದಾರೆ. ಬೇಗ ಚೇತರಿಸಿಕೊಳ್ಳುವಂತೆ ಶುಭ ಹಾರೈಸಿದ್ದಾರೆ ನಟ ಅನಿಲ್ ಕಪೂರ್ ಮತ್ತು ಕರೀನಾ ಕಪೂರ್​. ಅಂದಹಾಗೆ, ಶೆಹನಾಜ್​ ಫೇಮಸ್​ ಆಗಲು ಕಾರಣ ಬಿಗ್​ಬಾಸ್​. ಸದಾ ಹಾಟ್​, ಬೋಲ್ಡ್​ ಡ್ರೆಸ್​ನಿಂದಲೇ ಫೇಮಸ್​ ಆಗ್ತಿರೋ ನಟಿಗೆ ಸಹಜವಾಗಿ ಬಿಗ್​ಬಾಸ್​ ಮನೆಯಲ್ಲಿ ಎಂಟ್ರಿ ಸಿಕ್ಕಿತ್ತು. ಅಲ್ಲಿ, ನಟ ಸಿದ್ಧಾರ್ಥ್ ಶುಕ್ಲಾ ಅವರ ಜೊತೆ ಲವ್​ನಲ್ಲಿ ಬಿದ್ದಿದ್ದರು. ಬಿಗ್​ಬಾಸ್ ಸೀಸನ್​ನಲ್ಲಿ ಅವರು ನಟನೊಂದಿಗೆ ಪ್ರೀತಿಯಲ್ಲಿ ಬಿದ್ದರು. ಇವರ ರಿಲೇಷನ್​ಶಿಪ್ ಕ್ಯೂಟ್ ಆಗಿತ್ತು. ಸಿದ್ಧಾರ್ಥ್ ಶುಲ್ಕಾ ಮತ್ತು ಶೆಹನಾಜ್ ಗಿಲ್ ಸಾಟಿಯಿಲ್ಲದ ಒಡನಾಟವನ್ನು ಹೊಂದಿದ್ದರು, ಅವರ ಅಭಿಮಾನಿಗಳು ಅವರನ್ನು ಪ್ರೀತಿಸುತ್ತಿದ್ದರು ಮತ್ತು ಅವರು ಮದುವೆಯಾಗಬೇಕು ಎಂದು ಅಂದುಕೊಂಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಸಿದ್ಧಾರ್ಥ್ ಶುಕ್ಲಾ ಅವರ ಅಕಾಲಿಕ ಮರಣವನ್ನಪ್ಪಿದರು. ಇದರಿಂದ ಕೆಲ ದಿನಗಳು ಖಿನ್ನತೆಗೆ ಜಾರಿದ್ದ ನಟಿ ಈಗ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.

ಕಳೆದ ವಾರವಷ್ಟೇ ಥ್ಯಾಂಕ್ ಯು ಫಾರ್ ಕಮಿಂಗ್ ಚಿತ್ರದ ಪ್ರಮೋಷನ್​ ಸಂದರ್ಭದಲ್ಲಿ ನಡೆದ ಘಟನೆಯೊಂದು ಸಕತ್​ ವೈರಲ್​ ಆಗಿತ್ತು. ಅದರಲ್ಲಿ ಈ ಚಿತ್ರದ ನಟಿಯರು ಸಕತ್​ ಎಂಜಾಯ್​ ಮೂಡಿನಲ್ಲಿದ್ದರು. ಶೆಹನಾಜ್​ ಹಾಗೂ ಇತರ ಕಲಾವಿದೆಯರಾದ ಭೂಮಿ ಪೆಡ್ನೇಕರ್, ಕುಶಾ ಕಪಿಲಾ, ಡಾಲಿ ಸಿಂಗ್ ಮತ್ತು ಶಿಬಾನಿ ಬೇಡಿ ಸಕತ್​ ಎಂಜಾಯ್​ ಮಾಡುತ್ತಿದ್ದರು. ಆಗ ಶೆಹನಾಜ್, ನಟಿ ಭೂಮಿ ಪೆಡ್ನೇಕರ್​ ಅವರನ್ನು ತಬ್ಬಿಕೊಂಡು ಕಿಸ್​ ಮಾಡಲು ಬಂದಿದ್ದರು. . ಆ ಸಮಯದಲ್ಲಿ ಸ್ವಲ್ಪ ಗಲಿಬಿಲಿಗೊಂಡ ಭೂಮಿ, ಆಕೆಯನ್ನು ನಯವಾಗಿ ತಳ್ಳಿ ಕಿಸ್​ ಕೊಡಲು ಬಿಡಲಿಲ್ಲ. ಇದರಿಂದ ಶೆಹನಾಜ್​ ಅವರನ್ನು ಸಕತ್​ ಟ್ರೋಲ್​ ಮಾಡಲಾಗಿತ್ತು. ಆದ್ದರಿಂದ ನಟಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿಯುತ್ತಲೇ ಕಂಡ ಕಂಡವರಿಗೆ ಕಿಸ್​ ಕೊಟ್ರೆ ಹೀಗೇ ಆಗುವುದು ಎನ್ನುತ್ತಿದ್ದಾರೆ. ಚಿತ್ರದ ಪ್ರಮೋಷನ್​ ವೇಳೆ ಅತ್ಯುತ್ಸಾಹದಲ್ಲಿದ್ದ ನಟಿ ಹಲವರಿಗೆ ಕಿಸ್​ ಕೊಡಲು ಮುಂದಾಗಿದ್ದನ್ನು ಫ್ಯಾನ್ಸ್​ ನೆನಪಿಸುತ್ತಿದ್ದಾರೆ. 

'ಮಿಸ್​ ಬಿಕಿನಿ ಇಂಡಿಯಾ'ಗೆ ಕಾಂಗ್ರೆಸ್​ ಟಿಕೆಟ್​ ಕೊಟ್ರೆ ಹೀಗೆಲ್ಲಾ ಆಗೋದಾ? ಮೊನ್ನೆ ಹಲ್ಲೆ, ಇಂದು ಪಕ್ಷದಿಂದ್ಲೇ ಔಟ್​!

Scroll to load tweet…