ರಿಲೀಸ್ ಆದ ಟ್ರೈಲರ್ನಲ್ಲಿ ವಿಜಯ್, ರಾಜಕಾರಣಿಗಳಿಗೆ ಥಳಿಸುವ ಸನ್ನಿವೇಶ ಇತ್ತು. ಇದು ವಿಜಯ್ ರಾಜಕೀಯ ವಿರೋಧಿಗಳಿಗೆ ಬೇಕಂತಲೇ ಕೊಟ್ಟ ಪಂಚ್ನಂತೆ ಇತ್ತು. ಸಿನಿಮಾದಲ್ಲೂ ಇಂಥಾ ಹಲವು ರಾಜಕೀಯ ನಂಟಿನ ಸಂಭಾಷಣೆ, ದೃಶ್ಯಗಳಿವೆಯಂತೆ. ಅದೇ ಕಾರಣಕ್ಕೆ ಸೆನ್ಸಾರ್ ಮಂಡಳಿ ಇವುಗಳನ್ನ ಕಟ್ ಮಾಡುವಂತೆ ಸೂಚಿಸಿದೆ.
ದಳಪತಿ ಸೆನ್ಸಾರ್ ವಾರ್, 400 ಕೋಟಿ ಬಂಡವಾಳ.. KVNಗೆ ಢವ ಢವ..!
ದಳಪತಿ ವಿಜಯ್ (Thalapathy Vijay) ನಟನೆಯ ಬಹುನಿರೀಕ್ಷೆಯ ಸಿನಿಮಾ ಜನನಾಯಗನ್ (Jana Nayagan) ರಿಲೀಸ್ಗೆ ಜಸ್ಟ್ ಎರಡು ದಿನ ಬಾಕಿ ಇದೆ. ಫ್ಯಾನ್ಸ್ ವಿಜಯ್ ನಟನೆಯ ಕೊನೆ ಸಿನಿಮಾ ನೋಡಲಿಕ್ಕೆ ತುದಿಗಾಲ ಮೇಲೆ ನಿಂತಿದ್ದಾರೆ. ಆದ್ರೆ ಇದೂವರೆಗೂ ಜನನಾಯಗನ್ಗೆ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿಲ್ಲ. ಈ ಸೆನ್ಸಾರ್ ಕಿರಿಕ್ ಹಿಂದೆ ತಮಿಳುನಾಡು ಡರ್ಟಿ ದೆ.
ದಳಪತಿಗೆ ಚಿತ್ರಕ್ಕೆ ಸೆನ್ಸಾರ್ ಕಿರಿಕ್, ತಮಿಳುನಾಡು ಡರ್ಟಿ ಪಾಲಿಟಿಕ್ಸ್
ಯೆಸ್ ದಳಪತಿ ವಿಜಯ್ ನಟನೆಯ ಜನನಾಯಗನ್ ಸಿನಿಮಾ ರಿಲೀಸ್ಗೆ ಇನ್ನೂ ಎರಡೇ ಎರಡು ದಿನ ಬಾಕಿ ಇದೆ. ಶುಕ್ರವಾರ ಜನನಾಯಗನ್ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಆದ್ರೆ ಇದೂವರೆಗೂ ಸಿನಿಮಾಗೆ ಸೆನ್ಸಾರ್ ಸರ್ಟಿಫಿಕೇಟ್ ಮಾತ್ರ ಸಿಕ್ಕಿಲ್ಲ.
ಜನನಾಯಗನ್ ತನ್ನ ಕೊನೆ ಸಿನಿಮಾ ಅಂತ ವಿಜಯ್ ಘೋಷಿಸಿರೋದು ಗೊತ್ತೇ ಇದೆ. ಈ ಚಿತ್ರದ ಬಳಿಕ ವಿಜಯ್ ಫುಲ್ ಟೈಂ ಪಾಲಿಟಿಕ್ಸ್ನಲ್ಲಿ ಆಕ್ಟಿವ್ ಆಗಲಿದ್ದಾರೆ. ಈಗಾಗ್ಲೇ ಟಿವಿಕೆ ಅನ್ನೋ ಪಾರ್ಟಿ ಕಟ್ಟಿ ತಮಿಳುನಾಡು ಪಾಲಿಟಿಕ್ಸ್ನಲ್ಲಿ ಸಂಚಲನ ಮೂಡಿಸಿದ್ದಾರೆ.
ಜನನಾಯಗನ್ನಲ್ಲಿ ಪಾಲಿಟಿಕ್ಸ್ ಪಂಚ್..!
ಇತ್ತೀಚಿಗೆ ರಿಲೀಸ್ ಆದ ಟ್ರೈಲರ್ನಲ್ಲಿ ವಿಜಯ್ , ರಾಜಕಾರಣಿಗಳಿಗೆ ಥಳಿಸುವ ಸನ್ನಿವೇಶ ಇತ್ತು. ಇದು ವಿಜಯ್ ರಾಜಕೀಯ ವಿರೋಧಿಗಳಿಗೆ ಬೇಕಂತಲೇ ಕೊಟ್ಟ ಪಂಚ್ನಂತೆ ಇತ್ತು. ಸಿನಿಮಾದಲ್ಲೂ ಇಂಥಾ ಹಲವು ರಾಜಕೀಯ ನಂಟಿನ ಸಂಭಾಷಣೆ, ದೃಶ್ಯಗಳಿವೆಯಂತೆ. ಅದೇ ಕಾರಣಕ್ಕೆ ಸೆನ್ಸಾರ್ ಮಂಡಳಿ ಇವುಗಳನ್ನ ಕಟ್ ಮಾಡುವಂತೆ ಸೂಚಿಸಿದೆ.
400 ಕೋಟಿ ಬಂಡವಾಳ.. KVNಗೆ ಢವ ಢವ..!
ಹೌದು ಜನನಾಯಗನ್ ಸಿನಿಮಾದ ಬಜೆಟ್ ಬರೊಬ್ಬರಿ 400 ಕೋಟಿ. ಇದನ್ನ ಹೂಡಿಕೆ ಮಾಡಿರೋದು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ. ವಿಜಯ್ ಕೊನೆ ಚಿತ್ರವಾದ್ದರಿಂದ ಇಷ್ಟು ಹಣ ಬರೋದು ದೊಡ್ಡ ವಿಷ್ಯನೇ ಅಲ್ಲ ಅಂದುಕೊಂಡಿದ್ದ ನಿರ್ಮಾಪಕರಿಗೆ ಈಗ ಢವ ಢವ ಶುರುವಾಗಿದೆ. ಒಂದು ವೇಳೆ ಪಾಲಿಟಿಕ್ಸ್ ಕಾರಣಕ್ಕೆ ಸಿನಿಮಾ ರಿಲೀಸ್ಗೆ ಅಡ್ಡಿಯಾದ್ರೆ ನಿರ್ಮಾಪಕರು ದೊಡ್ಡ ನಷ್ಟ ಅನುಭವಿಸಲಿದ್ದಾರೆ.
ಸೆನ್ಸಾರ್ಮಂಡಳಿ ಚಿತ್ರದಲ್ಲಿ ಕೆಲ ಸನ್ನಿವೇಶಗಳು ಹಾಗೂ ಡೈಲಾಗ್ಗಳನ್ನ ಮ್ಯೂಟ್ಮಾಡಲು ತಿಳಿಸಿತ್ತು. ಇದಕ್ಕೆ ಕತ್ತರಿ ಹಾಕಿ ಈಗ ಪರಿಷ್ಕೃತ ಆವೃತ್ತಿ ಸಲ್ಲಿಸಿದ್ದರೂ ಕೂಡ ಈವರೆಗೂ ಸೆನ್ಸಾರ್ಪ್ರಮಾಣ ಪತ್ರ ನೀಡಲಾಗಿಲ್ಲ. ಸೋ ಚಿತ್ರತಂಡ ಈಗ ಸೆನ್ಸಾರ್ಗಾಗಿ ಕೋರ್ಟ್ ಮೆಟ್ಟಿಲು ಹತ್ತೋದಕ್ಕೆ ನಿರ್ಧಾರ ಮಾಡಿದೆ.
ತಮಿಳುನಾಡಿನಲ್ಲಿ ಯಾವಾಗಲೂ ರಾಜಕೀಯ ಜಿದ್ದಾಜಿದ್ದಿ ಜಾಸ್ತಿನೇ. ವಿಜಯ್ ಪಾಲಿಟಿಕ್ಸ್ ಎಂಟ್ರಿ ತಮಿಳು ಪಾಲಿಟಿಷಿಯನ್ಸ್ಗೆ ನಡುಕ ಹುಟ್ಟಿಸಿರೋದು ಸುಳ್ಳಲ್ಲ. ವಿಜಯ್ಗಿರೋ ಜನಪ್ರೀಯತೆ, ಫ್ಯಾನ್ ಫಾಲೋವಿಂಗ್ ಮತವಾಗಿ ಕನ್ವರ್ಟ್ ಆಧ್ರೆ ತಮ್ಮ ಸ್ಥಾನಕ್ಕೆ ಕುತ್ತು ಅನ್ನೋದು ಅಲ್ಲಿನ ರಾಜಕಾರಣಿಗಳಿಗೆ ಗೊತ್ತಿದೆ. ಸೋ ವಿಜಯ್ ಕೊನೆ ಚಿತ್ರಕ್ಕೆ ಬೇಕಂತಲೇ ತೊಂದರೆ ಕೊಡೋದಕ್ಕೆ ಪ್ಲಾನ್ ಮಾಡಿದಂತಿದೆ.
ಫ್ಯಾನ್ಸ್ಗೆ ಆತಂಕ
ಒಟ್ನಲ್ಲಿ ವಿಜಯ್ ಕೊನೆಯ ಚಿತ್ರವನ್ನ ದೊಡ್ಡದಾಗಿ ಸೆಲೆಬ್ರೇಟ್ ಮಾಡೋದಕ್ಕೆ ಸಜ್ಜಾಗಿದ್ದ ಫ್ಯಾನ್ಸ್ಗೆ ಸಿನಿಮಾ ರಿಲೀಸ್ ಆಗುತ್ತೋ ಇಲ್ಲವೋ ಅನ್ನೋ ಅನುಮಾನ ಶುರುವಾಗಿದೆ. ಇತ್ತ ಜನನಾಯಗನ್ ನಿರ್ಮಾಪಕರಿಗೂ ಢವ ಢವ ಶುರುವಾಗಿದೆ. ದಳಪತಿಯ ಈ ಸೆನ್ಸಾರ್ ಕಿರಿಕ್ ಬಗೆಹರಿಯುತ್ತಾ..? ಶುಕ್ರವಾರ ಸಿನಿಮಾ ರಿಲೀಸ್ ಆಗುತ್ತಾ ಕಾದುನೋಡಬೇಕಿದೆ.


