ಇಳಯದಳಪತಿ ವಿಜಯ್ ನಟನೆಯ ಬೀಸ್ಟ್ ಸಿನಿಮಾ ಬಿಡುಗಡೆ ಮುನ್ನವೇ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ. ವಿಜಯ್ ಬೀಸ್ಟ್ ಸಿನಿಮಾವನ್ನು ಕುವೈತ್ ನಲ್ಲಿ ಬ್ಯಾನ್ ಮಾಡಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಇಳಯದಳಪತಿ ವಿಜಯ್(Vijay) ನಟನೆಯ ಬಹುನಿರೀಕ್ಷೆಯ ಬೀಸ್ಟ್(Beast) ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಯುಗಾದಿ ಹಬ್ಬದ ಪ್ರಯುಕ್ತ ಬಂದ ಟ್ರೈಲರ್ ಗೆ ವಿಜಯ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಬೀಸ್ಟ್ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ವಿಜಯ್ ವೀರ ರಾಘವನ್ ಎನ್ನುವ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ಔಟ್ ಅಂಡ್ ಔಟ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಟ್ರೈಲರ್ ನಲ್ಲಿ ವಿಜಯ್ ಅಬ್ಬರಿಸಿದ್ದಾರೆ. ಕನ್ನಡದ ಕೆಜಿಎಫ್-2 ಮತ್ತು ಬೀಸ್ಟ್ ಸಿನಿಮಾ ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಕೆಜಿಎಫ್-2 ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ಬೀಸ್ಟ್ ಟ್ರೈಲರ್ ಕೂಡ ಬಿಡುಗಡೆಯಾಗಿದ್ದು ಧೂಳೆಬ್ಬಿಸುತ್ತಿದೆ.
ಏಪ್ರಿಲ್ 13ರಂದು ಬಿಡುಗಡೆಯಾಗುತ್ತಿರುವ ಬೀಸ್ಟ್ ಸಿನಿಮಾ ವೀಕ್ಷಿಸಲು ಅಭಿಮಾನಿಗಳ ಕಾತರರಾಗಿದ್ದಾರೆ. ಆದರೆ ಸಿನಿಮಾ ಬಿಡುಗಡೆ ಮುನ್ನವೇ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ. ವಿಜಯ್ ನಟನೆಯ ಬೀಸ್ಟ್ ಸಿನಿಮಾವನ್ನು ಕುವೈತ್ ನಲ್ಲಿ ಬ್ಯಾನ್ ಮಾಡಲಾಗಿದೆ(Beast banned in Kuwait). ಈ ಮೊದಲು ದುಲ್ಕರ್ ಸಲ್ಮಾನ್ ನಟನೆಯ ಕುರುಪ್ ಮತ್ತು ವಿಶಾಲ್ ನಟನೆಯ ಎಫ್ ಐ ಆರ್ ಸಿನಿಮಾವನ್ನು ಬ್ಯಾನ್ ಮಾಡಲಾಗಿತ್ತು. ಇದೀಗ ವಿಜಯ್ ಸಿನಿಮಾಗೂ ಅದೇ ಸಮಸ್ಯೆ ಎದುರಿಸುತ್ತಿದೆ.
ಅಷ್ಟಕ್ಕೂ ಬ್ಯಾನ್ ಮಾಡಲು ಕಾರಣ, ಸದ್ಯ ಬಿಡುಗಡೆಯಾಗಿರುವ ಟ್ರೈಲರ್ ನಲ್ಲಿ ಇಸ್ಲಾಮಿಕ್ ಭಯೋತ್ಪಾದನೆಯ ಬಗ್ಗೆ ತೋರಿಸಲಾಗಿದೆ ಎನ್ನುವುದು. ಇದು ಕುವೈತ್ ಹಿತಾಸಕ್ತಿಗೆ ವಿರುದ್ಧವಾಗಿದೆ. ಹಾಗಾಗಿ ಸಿನಿಮಾವನ್ನು ನಿಷೇಧಿಸಲು ಅಲ್ಲಿ ಸರ್ಕಾರ ನಿರ್ಧರಿಸಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಬೀಸ್ಟ್ ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ಮಾಲ್ ಹೈಜ್ಯಾಕ್ ಮಾಡಿದ ಭಯೋತ್ಪಾದಕರ ವಿರುದ್ಧ ಹೋರಾಡಿ ಜನರನ್ನು ಕಾಪಾಡುವ ಕಥೆ ಈ ಸಿನಿಮಾದಲ್ಲಿದೆ. ಈ ಕಾರಣಕ್ಕಾಗಿ ಬ್ಯಾನ್ ಶಿಕ್ಷೆ ಎದುರಿಸಬೇಕಾಗಿದೆ.
'ಬೀಸ್ಟ್' ಹಾಲಿವುಡ್ ಸಿನಿಮಾದ ಕಾಪಿನಾ? ವಿಜಯ್ ಚಿತ್ರದ ಬಗ್ಗೆ ನೆಟ್ಟಿಗರ ಅನುಮಾನ
ಇದರಿಂದ ಕುವೈತ್ ನಲ್ಲಿರುವ ವಿಜಯ್ ಅಭಿಮಾನಿಗಳು ಸಿನಿಮಾ ವೀಕ್ಷಿಸಲು ಬೇರ ದೇಶಕ್ಕೆ ಪಯಣ ಮಾಡುವಂತಾಗಿದೆ. ಈ ಬಗ್ಗೆ ಸಿಿಮಾ ವಿಶ್ಲೇಷಕ ರಮೇಶ್ ಬಾಲ ಮಾಹಿತಿ ಹಂಚಿಕೊಂಡಿದ್ದಾರೆ. ಬೀಸ್ಟ್ ಚಿತ್ರದಲ್ಲಿ ಪಾಕಿಸ್ತಾನದ ಕುರಿತ ವಿಚಾರಗಳು, ಭಯೋತ್ಪಾದನೆ ಹಾಗೂ ಹಿಂಸೆಯನ್ನು ವೈಭವೀಕರಿಸಲಾದ ಕಾರಣ ಕುವೈತ್ ಸರ್ಕಾರ ಸಿನಿಮಾ ಬಿಡುಗಡೆ ಅನುಮತಿ ನೀಡಿಲ್ಲ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಅರಬ್ ದೇಶಗಳನ್ನು ಭಯೋತ್ಪಾದಕರ ತವರು ಎಂದು ಬಿಂಬಿಸುವ ಸಿನಿಮಾಗಳಿಗೆ ಕುವೈತ್ ನಲ್ಲಿ ಬಿಡುಗಡೆಗೆ ಅನುಮತಿ ಸಿಗುವುದಿಲ್ಲ. ಈ ಮೊದಲ ಬ್ಯಾನ್ ಆಗಿದ್ದ ದುಲ್ಕರ್ ನಟನೆಯ ಕುರುಪ್ ಸಿನಿಮಾದಲ್ಲಿ ಕುವೈತ್ ನಲ್ಲಿ ಕ್ರಿಮಿನಲ್ ಗಳಿಗೆ ಆಶ್ರಯ ನೀಡುವುದರ ಬಗ್ಗೆ ತೋರಿಸಲಾಗಿದೆ. ಇನ್ನು ಎಫ್ ಐ ಆರ್ ಸಿನಿಮಾದಲ್ಲಿ ಭಯೋತ್ಪಾದನೆ ಬಗ್ಗೆ ಇದೆ. ಹಾಗಾಗಿ ಈ ಎರಡು ಸಿನಿಮಾಗಳನ್ನು ಇತ್ತೀಚಿಗೆ ಬ್ಯಾನ್ ಮಾಡಲಾಗಿತ್ತು.
ಇದು ವಿಜಯ್ ಸಿನಿಮಾಗೆ ದೊಡ್ಡ ಹೊಡೆತವಾಗುವ ಸಾಧ್ಯತೆ ಇದೆ. ವಿದೇಶಿ ಕಲೆಕ್ಷನ್ ಮೇಲೆ ನೇರ ಪರಿಣಾಮ ಬೀರಲಿದೆ. ವಿಜಯ್ ಗೆ ಯುಎಇ ಮತ್ತು ಅರಬ್ ದೇಶಗಳಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಹಾಗಾಗಿ ಬ್ಯಾನ್ ಆದರೆ ಸಿನಿಮಾಗೆ ಕೆಟ್ಟ ಪರಿಣಾಮ ಆಗಲಿದೆ. ಹಾಗಾಗಿ ಸದ್ಯದಲ್ಲೇ ಈ ಸಮಸ್ಯೆ ಸರಿಪಡಿಸಿಕೊಳ್ಳಲಿದೆ ಸಿನಿಮಾತಂಡ ಎನ್ನುವ ಮಾಹಿತಿ ತಿಳಿದುಬಂದಿದೆ.
Beast Trailer; ವಿಜಯ್ ಹೈ ಆ್ಯಕ್ಷನ್ ಟ್ರೈಲರ್ ಗೆ ಅಭಿಮಾನಿಗಳು ಫಿದಾ
ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಟ್ರೈಲರ್ ನಲ್ಲಿ ಪೂಜಾ ಹೆಗ್ಡೆ ಒಂದು ದೃಶ್ಯದಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ಮೂಡಿಬಂದಿದೆ. ಚಿತ್ರಕ್ಕೆ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಈಗಾಗಲೇ ಸಿನಿಮಾದ ಹಾಡು ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಿನಿಮಾ ಏಪ್ರಿಲ್ 13ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ.
