ಭಾರತದಲ್ಲಿ ಜಾತಿ, ಧರ್ಮ ಅನ್ನೋದು ಮೈಗಂಟಿಕೊಂಡ ಚರ್ಮದಂತೆ. ನಾವು ಬಿಟ್ಟೇನೆಂದರೂ ಜನ ಇದನ್ನ ಬಿಡೋದಿಲ್ಲ. ಸದ್ಯ ವಿಜಯ್​ವಿಚಾರದಲ್ಲೂ ಅದೇ ನಡೀತಾ ಇದೆ. ಆದ್ರೆ ನಿಜವಾಗ್ಲೂ ವಿಜಯ್​ಗೆ ಮತ ಹಾಕಿ ಗೆಲ್ಲಿಸಿದ್ದು ಯಾರು? ಈ ಸ್ಟೋರಿ ನೋಡಿ..

ಹೊಸ ಪಕ್ಷ ಕಟ್ಟಿ, ಎರಡೇ ವರ್ಷಗಳಲ್ಲಿ ವಿಜಯ ಸಾಧಿಸಿ ತಮಿಳುನಾಡು ಸಿಎಂ ಪಟ್ಟ ಏರ್ತಾ ಇದ್ದಾರೆ ನಟ ದಳಪತಿ ವಿಜಯ್ (Thalapathy Vijay). ವಿಜಯ್​ರ ಈ ವಿಜಯದ ಬಗ್ಗೆ ಚರ್ಚೆಯಾಗ್ತಿರೋ ಹೊತ್ತಲ್ಲೇ ಅವರ ಧರ್ಮದ ಬಗ್ಗೆನೂ ಚರ್ಚೆಯಾಗ್ತಾ ಇದೆ. ಹಲವರು ದಳಪತಿ ಧರ್ಮ ಯಾವುದಯ್ಯಾ ಅಂತ ಹುಡುಕ್ತಾ ಇದ್ದಾರೆ.. ಇನ್ನೂ ಕೆಲವರು ಇವ ನಮ್ಮವ ಇವ ನಮ್ಮವ ಅಂತ ಹೊಡೆದಾಡ್ತಾ ಇದ್ದಾರೆ.

Add Asianetnews Kannada as a Preferred SourcegooglePreferred

ದಳಪತಿ ಧರ್ಮ ಯಾವುದಯ್ಯಾ..? ಜನರ ಹುಡುಕಾಟ..!

ಇವ ನಮ್ಮವ.. ಇವ ನಮ್ಮವ.. ಶುರುವಾಯ್ತು ಹೊಡೆದಾಟ..!

ಯೆಸ್ ತಮಿಳುನಾಡಿನಲ್ಲಿ ಈಗ ಒನ್ ಅಂಡ್ ಓನ್ಲಿ ವಿಜಯ್​ದೇ ಜಪ. ದಶಕಗಳ ಇತಿಹಾಸವುಳ್ಳ ದ್ರಾವಿಡ ಪಾರ್ಟಿಗಳನ್ನ ಮಣ್ಣುಮುಕ್ಕಿಸಿ, ವಿಜಯ್ ನಾಯಕತ್ವದ ಟಿವಿಕೆ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಆಗಿ ಹೊರಹೊಮ್ಮಿದೆ. ಬಹುಮತ ಬಂದಿಲ್ಲವಾದ್ರೂ , ಕಾಂಗ್ರೆಸ್ ಸೇರಿದಂತೆ ಕೆಲ ಸಣ್ಣ ಪಾರ್ಟಿಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿ ವಿಜಯ್ ಸಿಎಂ ಆಗೋದಕ್ಕೆ ಸಜ್ಜಾಗಿದ್ದಾರೆ.

ಇಂಥಾ ಸಮಯದಲ್ಲಿ ವಿಜಯ್ ಗೆಲುವಿನ ಬಗ್ಗೆ ಎಷ್ಟು ಚರ್ಚೆಯಾಗ್ತಾ ಇದೆಯೋ ಅವರ ಧರ್ಮ, ಜಾತಿ ಬಗ್ಗೆ ಕೂಡ ಚರ್ಚೆ ಶುರುವಾಗಿದೆ. ಜನ ಅವರ ಧರ್ಮ ಯಾವುದು.. ಜಾತಿ ಯಾವುದು ಅಂತ ಹುಡುಕ್ತಾ ಇದ್ದಾರೆ. ಅಸಲಿಗೆ ಸಿನಿಮಾದಲ್ಲಿ ವಿಜಯ್, ದಳಪತಿ ವಿಜಯ್ ಅಂತ ಕರೆಸಿಕೊಳ್ಳೋ ಇವರ ಪೂರ್ಣ ಹೆಸರು ಚಂದ್ರಶೇಖರ್ ಜೋಸೆಫ್ ವಿಜಯ್.

ವಿಜಯ್ ತಂದೆ ಕ್ರಿಶ್ಚಿಯನ್, ತಾಯಿ ಹಿಂದೂ..!

ಹೌದು ವಿಜಯ್ ತಂದೆ ಹೆಸರು ಜೋಸೆಫ್ ಚಂದ್ರಶೇಖರ್. ತಮಿಳು ತೆಲುಗು ಹಿಂದಿಯಲ್ಲಿ ಸಾಕಷ್ಟು ಚಿತ್ರಗಳನ್ನ ನಿರ್ದೇಶನ ಮಾಡಿರೋ ಇವರು ಕನ್ನಡದಲ್ಲಿ ಕೂಡ 4 ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ. ಶಂಕರ್ ನಾಗ್ ನಟನೆಯ ನ್ಯಾಯ ಎಲ್ಲಿದೆ, ಗೆದ್ದ ಮಗ, ಗೆಲುವು ನನ್ನದೇ ಮತ್ತು ವಿಷ್ಣುವರ್ಧನ್ ನಟನೆಯ ಸಿಂಹಘರ್ಜನೆ ಚಿತ್ರಗಳನ್ನ ಇವರು ಡೈರೆಕ್ಟ್ ಮಾಡಿದ್ದಾರೆ.

ಕ್ಯಾಥೋಲಿಕ ಕ್ರೈಸ್ತ ಧರ್ಮೀಯರಾದ ಇವರು ಮದುವೆಯಾಗಿದ್ದು ಸಿಂಗರ್ ಶೋಭಾ ಅವರನ್ನ. ಶೋಭಾ ಅಪ್ಪಟ ಹಿಂದೂ. ಇವರು ಸಾಯಿಬಾಬಾ ಭಕ್ತೆ ಕೂಡ. ತಮ್ಮ ತಾಯಿಗೋಸ್ಕರ ವಿಜಯ್ ಚೆನ್ನೈನಲ್ಲಿ ಸಾಯಿಬಾಬಾ ಮಂದಿರವನ್ನ ಕಟ್ಟಿಸಿಕೊಟ್ಟಿದ್ದಾರೆ.

ವಿಜಯ್ ಪತ್ನಿ ಸಂಗೀತಾ ಹಿಂದೂ, ಮಕ್ಕಳು ಕ್ರಿಶ್ಚಿಯನ್..!

ವಿಜಯ್ ತಂದೆ ತಾಯಿ ಅಂತರ್ಧಮೀಯ ವಿವಾಹ ಆಗಿದ್ದು ವಿಜಯ್, ತಮ್ಮ ತಂದೆಯ ಧರ್ಮ ಫಾಲೋ ಮಾಡ್ತಾ ಬಂದಿದ್ದಾರೆ. ಆದ್ರೆ ವಿಜಯ್ ಮದುವೆಯಾಗಿದ್ದು ಹಿಂದೂ ಧರ್ಮೀಯ ಸಂಗೀತಾರನ್ನ.

ಇನ್ನೂ ವಿಜಯ್ ಮಕ್ಕಳ ಹೆಸರು ಜೇಸನ್ ಸಂಜಯ್ ಮತ್ತು ದಿವ್ಯಾ ಸಶಾ. ಈ ಹೆಸರು ಕೇಳಿದ್ರೆ ಅವರು ತಂದೆಯ ಕ್ರಿಶ್ಚಿಯನ್ ಧರ್ಮ ಪರಿಪಾಲನೆ ಮಾಡ್ತಾ ಇರಬಹುದು ಅನ್ನಿಸುತ್ತೆ. ಎನಿ ವೇ ಭಾರತದಲ್ಲಿ ಯಾರು ಯಾವ ಧರ್ಮ ಬೇಕಾದ್ರೂ ಆಯ್ಕೆ ಮಾಡಿಕೊಂಡು, ಪಾಲನೆ ಮಾಡೋದಕ್ಕೆ ಅವಕಾಶ ಇದೆ. ವಿಜಯ್ ಫ್ಯಾಮಿಲಿಯಲ್ಲಿ ಕೂಡ ಹಲವು ಅಂತರ್ಧಮೀಯ ವಿವಾಹ ನಡೆದಿದ್ದು, ಒಬ್ಬೊಬ್ರು ಒಂದೊಂದು ಧರ್ಮ ಪಾಲನೆ ಮಾಡ್ತಾ ಬಂದಿದ್ದಾರೆ.

ಇನ್ನೂ ಈ ನಡುವೆ ಇನ್ನೊಂದು ಹೊಸ ಚರ್ಚೆ ಶುರುವಾಗಿದೆ. ವಿಜಯ್ ತಂದೆ ಮೂಲತಃ ಮಾದಿಗ ಸಮುದಾಯದವರು. ಸೋ ಇವ ನಮ್ಮವ ಅಂತಿದ್ದಾರೆ ಮಾದಿಗ ಜನ. ಆದ್ರೆ ಅವರು ಕ್ರಿಶ್ಚಿಯನ್ ಧರ್ಮ ಪಾಲನೆ ಮಾಡ್ತಾರೆ. ಅದ್ಹೇಗೆ ನಿಮ್ಮ ಸಮುದಾಯಕ್ಕೆ ಸೇರ್ತಾರೆ ಅಂತ ಕೂಡ ಕೆಲವರು ಪ್ರಶ್ನೆ ಮಾಡ್ತಾ ಇದ್ದಾರೆ.

ಒಟ್ನಲ್ಲಿ ಭಾರತದಲ್ಲಿ ಜಾತಿ, ಧರ್ಮ ಅನ್ನೋದು ಮೈಗಂಟಿಕೊಂಡ ಚರ್ಮದಂತೆ. ನಾವು ಬಿಟ್ಟೇನೆಂದರೂ ಜನ ಇದನ್ನ ಬಿಡೋದಿಲ್ಲ. ಸದ್ಯ ವಿಜಯ್​ವಿಚಾರದಲ್ಲೂ ಅದೇ ನಡೀತಾ ಇದೆ. ಆದ್ರೆ ವಿಜಯ್​ಗೆ ಎಲ್ಲಾ ಜಾತಿ, ಧರ್ಮ , ಸಮುದಾಯದವರು ಮತ ಹಾಕಿ ಗೆಲ್ಲಿಸಿದ್ದಾರೆ. ಸೋ ವಿಜಯ್ ಎಲ್ಲರಿಗೂ ಸೇರಿದವರು. ವಿಜಯ್ ಗೆದ್ದಿರೋದು ಪ್ರಜಾಪ್ರಭುತ್ವದ ಬಲದಿಂದ. ಸೋ ಇಲ್ಲಿ ಜಾತಿ, ಧರ್ಮದ ಹುಡುಕೋದು ಅರ್ಥಹೀನ.. ಏನಂತೀರಿ..!

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...