Asianet Suvarna News Asianet Suvarna News

Thalapathy Vijay; ವಿಜಯ್ ದಾಂಪತ್ಯದಲ್ಲಿ ಬಿರುಕು; 23 ವರ್ಷಗಳ ವೈವಾಹಿಕ ಜೀವನ ಅಂತ್ಯಗೊಳಿಸಲು ನಿರ್ಧಾರ?

ಕಾಲಿವುಡ್ ಸ್ಟಾರ್ ತಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ವಿಜಯ್ ಮತ್ತು ಪತ್ನಿ ಸಂಗೀತಾ ಇಬ್ಬರೂ ವಿಚ್ಛೇದನಕ್ಕೆ ಮುಂದಾಗಿದ್ದು ದೂರ ದೂರ ಆಗುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

Thalapathy Vijay and his wife Sangeetha heading for divorce? sgk
Author
First Published Jan 6, 2023, 10:30 AM IST

ಕಾಲಿವುಡ್ ಸ್ಟಾರ್ ತಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ವಿಜಯ್ ಮತ್ತು ಪತ್ನಿ ಸಂಗೀತಾ ಇಬ್ಬರೂ ವಿಚ್ಛೇದನಕ್ಕೆ ಮುಂದಾಗಿದ್ದು ಇಬ್ಬರೂ ದೂರ ದೂರ ಆಗುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ದಕ್ಷಿಣ ಭಾರತದ ಕ್ಯೂಟ್ ಕಪಲ್ ಗಳಲ್ಲಿ ಒಂದಾಗಿರುವ ಈ ಜೋಡಿ ಇದೀಗ ದೂರ ಆಗುತ್ತಿರುವುನ್ನು ಕೇಳಿ ಅಭಿಮಾನಿಗಳಿಗೆ ಶಾಕ್ ಆಗಿದೆ.  ಇಬ್ಬರ ವಿಚ್ಛೇದನ ಸುದ್ದಿ ವದಂತಿ ಅಷ್ಟೆ ಆಗಿರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.  ಅಂದಹಾಗೆ ಈ ವದಂತಿಗೆ ಕಾರಣವಾಗಿದ್ದು ವಿಜಯ್ ವಿಕಿಪಿಡಿಯ. 

ವಿಜಯ್ ಅವರ ವಿಕಿಪಿಡಿಯ ಪೇಜ್ ನಲ್ಲಿ ಪತ್ನಿ ಸಂಗೀತಾ ಮತ್ತು ವಿಜಯ್ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಉಲ್ಲೇಖಸಲಾಗಿತ್ತು. ಇದು ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಅಂದಹಾಗೆ ವಿಜಯ್ ಸದ್ಯ ವಾರಿಸು ಸಿನಿಮಾ ರಿಲೀಸ್ ನ ಬ್ಯುಸಿಯಲ್ಲಿದ್ದಾರೆ. ಈ ಸಿನಿಮಾ ಬಿಡುಗಡೆ ಸಮಯದಲ್ಲಿ ಹೀಗೆ ಸುದ್ದಿ ಹಬ್ಬಿರುವುದು ಅಚ್ಚರಿ ಮೂಡಿಸಿದೆ. 

ಅಂದಹಾಗೆ ಇಬ್ಬರ ವಿಚ್ಛೇದನ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಲು ಕಾರಣವಾಗಿದ್ದು ಇತ್ತೀಚಿಗೆ ಇಬ್ಬರೂ  ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳದಿರುವುದು. ನಿರ್ದೇಶಕ ಅಟ್ಲೀ ಕುಮಾರ್ ಅವರ ಪತ್ನಿ ಪ್ರಿಯಾ ಬೇಬಿ ಶವರ್ ನಲ್ಲಿ ವಿಜಯ್ ಮಾತ್ರ ಹಾಜರಾಗಿದ್ದರು. ಬಳಿಕ ವಾರಿಸು ಆಡಿಯೋ ಲಾಂಚ್ ಈವೆಂಟ್‌‌ಗೂ ಸಂಗೀತಾ ಗೈರಾಗಿದ್ದರು. ಇದನ್ನು ಗಮನಿಸಿದ ಅಭಿಮಾನಿಗಳಿಗೆ ಇಬ್ಬರೂ ದೂರ ದೂರ ಆಗುತ್ತಿದ್ದಾರೆ ಎನುವ ಅನುಮಾನ ದಟ್ಟವಾಗಿದೆ. 

'ಅಜಿತ್‌ಗಿಂತ ವಿಜಯ್ ದೊಡ್ಡ ಸ್ಟಾರ್' ಎಂದು ವಿವಾದ ಸೃಷ್ಟಿಸಿದ ದಿಲ್ ರಾಜು; ರೊಚ್ಚಿಗೆದ್ದ ತಲಾ ಅಭಿಮಾನಿಗಳು

ವದಂತಿ ತಳ್ಳಿ ಹಾಕಿದ ವಿಜಯ್ ಆಪ್ತಮೂಲ 

ಆದರೆ ಈ ಸುದ್ದಿಯನ್ನು ವಿಜಯ್ ಆಪ್ತ ಮೂಲಗಳು ತಳ್ಳಿ ಹಾಕಿವೆ. 'ವಿಜಯ್ ಮತ್ತು ಸಂಗೀತಾ ನಡುವಿನ ವಿಚ್ಛೇದನ ವದಂತಿ ಆಧಾರರಹಿತವಾಗಿದೆ. ಈ ಸುದ್ದಿ ಹೇಗೆ  ವೈರಲ್ ಆಯಿತು ಎಂದು ಗೊತ್ತಿಲ್ಲ' ಎಂದು ಹೇಳಿದ್ದಾರೆ. ಇನ್ನು ವಿಜಯ್ ಪತ್ನಿ ಸಂಗೀತಾ ಸದ್ಯ ವಿದೇಶದಲ್ಲಿದ್ದಾರೆ. ಅವರ ಮಕ್ಕಳು ವಿದೇಶದಲ್ಲಿ ಓದುತ್ತಿದ್ದಾರೆ. ಹಾಗಾಗಿ ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದಾರೆ. ಹಾಗಾಗಿ ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ. ಸದ್ಯದಲ್ಲೇ ವಿಜಯ್ ಕೂಡ ವಿದೇಶಕ್ಕೆ ಹೋಗುತ್ತಿದ್ದಾರೆ. ಮಕ್ಕಳ ಜೊತೆ ಸಮಯ ಕಳೆಯಲಿದ್ದಾರೆ ಎಂದು ಆಪ್ತಮೂಲಗಳು ಮಾಹಿತಿ ಆಂಗ್ಲ ಮಾಧ್ಯಮಕ್ಕೆ ಮಾಹಿತಿ ನೀಡಿವೆ.     

1999ರಲ್ಲಿ ವಿಜಯ್ -ಸಂಗೀತಾ ಮದುವೆ

ವಿಜಯ್ ಮತ್ತು ಸಂಗೀತಾ ಅವರದ್ದು ಲವ್ ಮ್ಯಾರೇಜ್. ಇಬ್ಬರ ಪ್ರೇಮ್ ಕಹಾನಿ ಯಾವುದೇ ಸಿನಿಮಾಗಿಂತ ಕಡಿಮೆ ಇಲ್ಲ. ವಿಜಯ್ ಸಿನಿಮಾ ನೋಡಿ ಫಿದಾ ಆದ ಸಂಗೀತಾ ಬಳಿಕ ವಿಜಯ್ ಅವರನ್ನು ಭೇಟಿಯಾದರು. 1996ರಲ್ಲಿ ಮೊದಲ ಬಾರಿಗೆ ಇಬ್ಬರೂ ಭೇಟಿಯಾಗಿದರು. ಚೆನ್ನೈ ಶೂಟಿಂಗ್ ಸೆಟ್ ನಲ್ಲಿ ಸಂಗೀತ ಮೊದಲ ಬಾರಿಗೆ ವಿಜಯ್ ಅವರನ್ನು ಭೇಟಿಯಾದರು. ಅಂದಹಾಗೆ ಸಂಗೀತ ಯುಕೆಯಲ್ಲಿ ಇದ್ದರು. ವಿಜಯ್ ಇಷ್ಟವಾದ ಬಳಿಕ ಚೆನ್ನೈಗೆ ಬರಲು ಪ್ರಾರಂಭಿಸಿದರು. ಇಬ್ಬರ ಸ್ನೇಹ ಪ್ರೀತಿಗೆ ತಿರುಗೆ ಬಳಿಕ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾದರು. 

100 ಕೋಟಿ ದಾಟಿದ ವಿಜಯ್ ಸಂಭಾವನೆ; 'ವಾರಿಸು' ಚಿತ್ರಕ್ಕೆ ದಾಖಲೆ ಸಂಭಾವನೆ ಪಡೆದ ದಳಪತಿ

1999 ಆಗಸ್ಟ್ 25ರಂದು ಇಬ್ಬರೂ ದಾಂಪತ್ಯಕ್ಕೆ ಕಾಲಿಟ್ಟರು. ಹಿಂದೂ ಮತ್ತು ಕ್ರಿಸ್ಚಿಯನ್ ಸಂಪ್ರದಾಯಂತೆ ಇಬ್ಬರೂ ಮದುವೆಯಾದರು.  ಮದುವೆಯಾಗಿ ಒಂದು ವರ್ಷದ ನಂತರ ಸಂಗೀತಾ ಮೊದಲ ಮಗ ಜೇಸನ್ ಸಂಜಯ್ ಅವರನ್ನು ಸ್ವಾಗತಿಸಿದರು. ಬಳಿಕ ಮಗಳು ದಿವ್ಯಾ ಜನಿಸಿದಳು. ವಿಜಯ್ ಮತ್ತು ಸಂಗೀತಾ ಜೋಡಿಗೆ ಇಬ್ಬರು ಮಕ್ಕಳು. 23ವರ್ಷಗಳಿಂದ ಸುಂದರ ಸಾಂಸಾರಿಕ ಜೀವನ ನಡೆಸುತ್ತಿದ್ದ ವಿಜಯ್ ಮತ್ತು  ಸಂಗೀತಾ ಬಾಳಲ್ಲಿ ಏನಾಗಿದೆ ಎಂದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇಬ್ಬರೂ ಒಟ್ಟಿಗೆ ಚೆನ್ನಾಗಿ ಇರಲಿ ಎಂದು ಹಾರೈಸುತ್ತಿದ್ದಾರೆ.  

Follow Us:
Download App:
  • android
  • ios