ತಲೈವಿ ಸಿನಿಮಾದ ಕಂಗನಾ ರಣಾವತ್ ಅವರ ಮೊದಲ ಹಾಡು ರಿಲೀಸ್ ಆಗಲಿದೆ. ಇದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ನಟಿ ಜೆ.ಜಯಲಲಿತಾ ಅವರ ಜೀವನವನ್ನು ಆಧರಿಸಿದೆ.

ಚಲಿ ಚಲಿ ಎಂಬ ಈ ಹಾಡು ಜಯಲಲಿತಾ ಅವರ ಸುವರ್ಣ ಯುಗವನ್ನು ತೆರೆ ಮೇಲೆ ಸೆರೆಹಿಡಿಯುತ್ತದೆ. ಈ ಹಾಡನ್ನು ಸೈಂಧವಿ ಪ್ರಕಾಶ್ ಹಾಡಿದ್ದಾರೆ ಮತ್ತು ಅದರ ಸಾಹಿತ್ಯವನ್ನು ಇರ್ಷಾದ್ ಕಾಮಿಲ್ ಬರೆದಿದ್ದಾರೆ.

ನಾನು ಬಾಲಿವುಡ್ ಉಳಿಸಲು ಬರುತ್ತಿದ್ದೇನೆ ಎಂದ ಕ್ವೀನ್ ಕಂಗನಾ

ಚಲಿ ಚಲಿ ಭಾರತೀಯ ಚಿತ್ರರಂಗದಲ್ಲಿ ಜಯಲಲಿತಾ ಅವರ ಪ್ರಯಾಣವನ್ನು ವಿವರಿಸುತ್ತದೆ. ಇದರಲ್ಲಿ ಕಂಗನಾ ಅವರು ಜಯಲಲಿತಾ ಅವರ ಚೊಚ್ಚಲ ಸಿನಿಮಾದಿಂದ ಪ್ರಾರಂಭಿಸಿ ಅನೇಕ ಸಿನಿಮಾ ನೋಟವನ್ನು ಮರುಸೃಷ್ಟಿಸಿದೆ. ಜಯಲಲಿತಾ ತಮ್ಮ ಕೆರಿಯರ್‌ನ ಉಚ್ಛ ದಿನಗಳಲ್ಲಿ ಪರದೆಯ ಮೇಲೆ ಹೊರಹೊಮ್ಮಿದ ಮೋಡಿಯನ್ನು ಪುನರಾವರ್ತಿಸುವಾಗ ಕಂಗನಾ ಸುಂದರವಾಗಿ ಕಾಣುತ್ತಾರೆ.

ಜಯಲಲಿತಾ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ 120 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು 1961 ರಲ್ಲಿ ಹೊರಬಂದ ಎಪಿಸ್ಟಲ್ ಎಂಬ ಇಂಗ್ಲಿಷ್ ಚಲನಚಿತ್ರದಲ್ಲಿ ನಟಿಸಿದ್ದಾರೆ. 1965 ರಲ್ಲಿ ಬಿಡುಗಡೆಯಾದ ವೆನ್ನಿರಾ ಆದೈ ಚಿತ್ರದೊಂದಿಗೆ ಅವರು ಕಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.