ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆವಾಗ ಹಸಿರು ಸೀರೆಯಲ್ಲಿ ನೋರಾ
ಬಾಲಿವುಡ್ ನಟಿ ನೋರಾ ಫತೇಹಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದಾರೆ. ಸಮಾರಂಭಕ್ಕೆ ಚಂದದ ತಿಳಿ ಹಸಿರು ಸೀರೆಯುಟ್ಟು ಬಂದಿದ್ದರು ಈಕೆ. ಇಲ್ನೋಡಿ ಫೋಟೋಸ್
ಇತ್ತೀಚೆಗೆ ನಡೆದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ 2021 ಸಮಾರಂಭದಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ಚಂದದ ಸೀರೆಯಲ್ಲಿ ಮಿಂಚಿದ್ದರು.
ತಮ್ಮ ಫ್ಯಾಷನ್ನಿಂದ ಯುವ ಜನರ ನೆಚ್ಚಿನ ನಟಿಯಾಗಿರೋ ನೋರಾ ಅದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ.
ರೆಡ್ ಕಾರ್ಪೆಟ್ ಲುಕ್ ಇರಲಿ, ಏರ್ಪೋರ್ಟ್ ಲುಕ್ ಇರಲಿ ನೋರಾಗೆ ಬೇರೆ ಯಾರೂ ಸಾಟಿಯಿಲ್ಲ. ಭಾರತ್ ನಟಿಯ ಲುಕ್ ಸೂಪರ್
ಹಸಿರು ಸೀರೆಯಲ್ಲಿ ನೋರಾ ಫೋಟೋ ವೈರಲ್ ಆಗಿದೆ. ಸಿಲ್ಕ್ನಲ್ಲಿ ಗೋಲ್ಡನ್ ಡಿಸೈನ್ ಸೀರೆಯನ್ನುಟ್ಟಿದ್ದರು ನೋರಾ
ಎರಡು ಲೇಯರ್ನ ಪರ್ಲ್ ಸೆಟ್ ಧರಿಸಿದ್ದರು ನೋರಾ. ಡೈಮಂಡ್ ಮತ್ತು ರೂಬಿ ಪೆಂಡೆಂಟ್ ಕೂಡಾ ಇತ್ತು.
ಪರ್ಲ್ ಡ್ರಾಪ್ ಇಯರಿಂಗ್ಸ್ ಮತ್ತು ರಿಂಗ್ ಧರಿಸಿದ್ದರು. 80ರ ರೊಮ್ಯಾಂಟಿಕ್ ಲುಕ್ನಲ್ಲಿ ಕಾಣಿಸಿಕೊಂಡು ವೈರಲ್ ಆಗಿದ್ದಾರೆ ನೋರಾ
ಹೊಸ ಹೊಸ ಆಲ್ಬಂ ಸಾಂಗ್‌ಗಳನ್ನೇ ಮಾಡುತ್ತಿರೋ ನೋರಾ ವಿಡಿಯೋಗಳೆಲ್ಲವೂ ಹಿಟ್ ಆಗಿವೆ