ತೆಲುಗು ಕಿರುತೆರೆ ನಟಿ ಶ್ರಾವಣಿ ಕೊಂಡಪಲ್ಲಿ ಮಂಗಳವಾರ ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೈದರಾಬಾದ್‌ನ ಮಧುರಾನಗರದಲ್ಲಿ ತನ್ನ ಮನೆಯ ಬಾತ್‌ರೂಂ ಸೀಲಿಂಗ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ನಟಿ ಪತ್ತೆಯಾಗಿದ್ದಾರೆ.

"

ಟಿಕ್‌ಟಾಕ್‌ನಲ್ಲಿ ವಿಡಿಯೋ ಮಾಡೋದಷ್ಟೇ ಅಲ್ಲ ಮೆಸೇಜೆಂಗ್, ಚಾಟಿಂಗ್ ಆಪ್ಶನ್‌ಗಳೂ ಇದ್ದವು. ಹೀಗೆ ಟಿಕ್‌ಟಾಕ್‌ನಲ್ಲಿ ಫ್ರೆಂಡ್‌ಶಿಪ್ ಮಾಡಿದ ಕಿರುತೆರೆ ನಟಿ ಗೆಳೆಯನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಖ್ಯಾತ ಹಾಸ್ಯ ನಟ ಜಯಪ್ರಕಾಶ್‌ ರೆಡ್ಡಿ ಇನ್ನಿಲ್ಲ

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಓಸ್ಮಾನಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಯ್‌ಫ್ರೆಂಡ್ ದೇವರಾಜ್ ರೆಡ್ಡಿ ಕಿರುಕುಳದಿಂದ ನಟಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೋಷಕರು ಆರೋಪಿಸಿದ್ದಾರೆ.

ದೇವರಾಜ್ ರೆಡ್ಡಿ ವಿರುದ್ಧ ನಟಿಯ ಪೋಷಕರು ಎಸ್‌ಆರ್ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೇವರಾಜ್ ರೆಡ್ಡಿ ಆಂಧ್ರಪ್ರದೇಶದ ಕಾಕಿನಾಡದವನಾಗಿದ್ದು, ಶ್ರಾವಣಿಗೆ ಕಿರುಕುಳ ನೀಡುತ್ತಲೇ ಇದ್ದ ಎಂದು ನಟಿಯ ಪೋಷಕರು ಆರೋಪಿಸಿದ್ದಾರೆ.

ನಟನೆ ಬಿಟ್ಟು ಬ್ಯುಸಿನೆಸ್ ಆರಂಭಿಸಿದ್ರಾ ಸಮಂತಾ..? ಹೊಸ ಫ್ಯಾಷನ್ ಬ್ರ್ಯಾಂಡ್ 'ಸಾಕಿ' ರೆಡಿ

ಕಳೆದ 8 ವರ್ಷಗಳಿಂದ ತೆಲುಗು ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದ ನಟಿ ಖ್ಯಾತ ಮನಸು ಮಮತ ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. ಮೌನರಾಗಂ ಸಿರೀಯಲ್‌ನಲ್ಲೂ ಕೆಲಸ ಮಾಡುತ್ತಿದ್ದರು.