ಆಂಧ್ರ ಪ್ರದೇಶದ ಗುಂಟೂರಿನ ನಿವಾಸಿಯಾಗಿರುವ ಜಯಪ್ರಕಾಶ್ ಬಾತ್‌ ರೂಮಿನಲ್ಲಿ ಇಂದು (ಸೆಪ್ಟೆಂಬರ್ 8) ಕುಸಿದು ಬಿದಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲು ಕರೆದುಕೊಂಡು ಹೋಗಿತ್ತಾದರೂ, ಮಾರ್ಗ ಮಾಧ್ಯದಲ್ಲಿಯೇ ಕೊನೆ ಉಸಿರೆಳೆದಿದ್ದಾರೆ. ಹೃದಯಾಘಾತದಿಂದ ಇವರು ಕೊನೆಯುಸಿರೆಳೆದಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ವಿಲನ್ ಹಾಗೂ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಜಯಪ್ರಕಾಶ್ ಕೊನೆಯ ಬಾರಿ ಮಹೇಶ್ ಬಾಬು ಜೊತೆ ಸರಿಲ್ಲೇರು ನೀಕ್ಕೆವರು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಹಿರಿಯ ಬಾಲಿವುಡ್ ನಿರ್ದೇಶಕ ಜಾನಿ ಭಕ್ಷಿ ಇನ್ನಿಲ್ಲ

150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಪ್ರಕಾಶ್ ಕೇವಲ ತಮಿಳು ಮಾತ್ರವಲ್ಲದೇ, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 2003ರಲ್ಲಿ  'ಶ್ವೇತ ನಾಗರ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ನಂತರ ಶಿವರಾಜ್‌ಕುಮಾರ್ ಜೊತೆ 'ಸತ್ಯ ಇನ್‌ ಲವ್' ಹಾಗೂ  'ಸಿಟಿಜನ್' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

 

ತೆಲುಗು ಚಿತ್ರರಂಗದ ಗಣ್ಯರು ನಟನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಕುಟುಂಬದವರನ್ನು ಹಾಗೂ ಆಪ್ತರನ್ನು ಅಗಲಿರುವ ಜೆಪಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.