ಚಿರಂಜೀವಿ ಅವರ 'ವಂಶ ಪಾರಂಪರ್ಯಕ್ಕೆ ಗಂಡು ಮಗು ಬೇಕು' ಎಂಬ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ವಿಷ್ಣುವರ್ಧನ್ ದತ್ತು ಪುತ್ರಿಯರನ್ನು ಸ್ವೀಕರಿಸಿದ್ದನ್ನು ಉದಾಹರಣೆಯಾಗಿಟ್ಟುಕೊಂಡು, ಲಿಂಗ ತಾರತಮ್ಯದ ಬಗ್ಗೆ ಚಿರಂಜೀವಿ ಟೀಕೆಗೊಳಗಾಗಿದ್ದಾರೆ. ಹೆಣ್ಣು-ಗಂಡು ಸಮಾನತೆ ಕುರಿತ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.
ಸದ್ಯಕ್ಕೆ ಈ ಲೆಗ್ಗಸಿ (Legacy) ಚರ್ಚೆ ಎಲ್ಲಿಯವರೆಗೆ ಹೋಗಿ ತಲುಪುತ್ತೆ ಎಂಬುದನ್ನು ಕಾದು ನೋಡಬೇಕಿದೆ. ಕಾರಣ, ಹೇಳಿರೋದು ಶ್ರೀಸಾಮಾನ್ಯ ಅಲ್ಲ, ದೊಡ್ಡ ಸ್ಟಾರ್ ನಟ. ಹೀಗಾಗಿ ಸೋಷಿಯಲ್ ಮೀಡಿಯಾ ಚರ್ಚೆ ಸಕತ್ ಜೋರಾಗಿದೆ. ಎಲ್ಲರೂ ತಮ್ಮ ತಮ್ಮ ಅನಿಸಿಕೆ-ಅಭಿಪ್ರಾಯಗಳಲ್ಲಿ ಜಾಲತಾಣದ ಬುಟ್ಟಿಯಲ್ಲಿ ಬೀಸಾಡುತ್ತಿದ್ದಾರೆ. ಬುಟ್ಟಿ ತುಂಬುವುದು ಪಕ್ಕಾ. ಆದರೆ, ಮುಂದೆ ಅದು ತಣ್ಣಗಾಗುತ್ತಾ ಅಥವಾ ನಟ ಚಿರಂಜೀವಿ ತಮ್ಮ ಮಾತಿಗೆ ಕ್ಷಮೆ ಕೇಳ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಅಷ್ಟಕ್ಕೂ, ಗಂಡು-ಹೆಣ್ಣು ಸೃಷ್ಟಿಯಲ್ಲಿ ನಿಜವಾಗಿಯೂ ಸಮಾನರಾ ಅಥವಾ ವಿಭಿನ್ನರಾ ಎಂಬ ಮೂಲ ವಿಷಯದ ಬಗ್ಗೆ ಚರ್ಚೆ ನಡೆಯಬೇಕಿದೆ. ವಿಭಿನ್ನತೆಯನ್ನು ಗೌರವಿಸುವ ಬದಲು ಎಲ್ಲಾ ಕಡೆ ಸಮಾನತೆ ಹುಡುಕಲು ಹೊರಡುವ ಅಜ್ಞಾನದ ಕಣ್ಣಿಗೆ ವಿಭಿನ್ನತೆಯ ಮಹತ್ವ ತಿಳಿಯುವುದು ಹೇಗೆ? ಹೆಣ್ಣನ್ನು ಗಂಡಿಗೆ ಸಮಾನ ಮಾಡಲು ಹೊರಟಿರುವ ಸಮಾಜಕ್ಕೆ ಏನು ಹೇಳಬೇಕು? ಸಮಾನತೆಗಿಂತ ವಿಭಿನ್ನತೆಯೇ ಪ್ರಕೃತಿಯ ತತ್ವ, ಅದರಲ್ಲೇ ಬದುಕಿದೆ, ಖುಷಿಯಿದೆ, ಮುಂದಿನ ಜನರೇಶನ್ ಸೃಷ್ಟಿಯೂ ಅಡಗಿದೆ. ಇದನ್ನು ಹೇಳೋದಕ್ಕೆ ಯಾರು ಆಕಾಶದಿಂದ ಇಳಿದು ಭೂಮಿಗೆ ಬರಬೇಕು?
ಚಿರಂಜೀವಿ ಹೇಳಿದ ಒಂದು ಸಣ್ಣ ಮಾತಿನಿಂದ 500 ಸಿನಿಮಾಗಳಲ್ಲಿ ನಟಿಸಿದ್ದಾರಂತೆ ಒಬ್ಬ ಸ್ಟಾರ್ ಹಾಸ್ಯನಟ!
ಹಾಗಿದ್ದರೆ ಸದ್ಯ ಕನ್ನಡ ನಾಡಿನಲ್ಲಿ ನಡೆಯುತ್ತಿರುವ ಚರ್ಚೆಯ ರೂಪ ಎಂಥದ್ದು? ಇಲ್ಲಿದೆ ನೋಡಿ ಅದಕ್ಕೊಂದು ರೂಪ, ಆಕಾರ.. ಇತ್ತೀಚಿಗೆ ಮೆಗಾಸ್ಟಾರ್ ಚಿರಂಜೀವಿ ಹೆಣ್ಣುಮಗು ಬಗ್ಗೆ ಆಡಿದ ಮಾತು ಇಡೀ ದೇಶದೆಲ್ಲೆಡೆ ವಿವಾದದ ಕಿಡಿ ಹೊತ್ತಿಸಿದೆ. ತಮ್ಮ ಕುಟುಂಬದ ಲೆಗಸಿ ಮುಂದುವರೆಸೋಕೆ ಗಂಡು ಮಗು ಬೇಕು ಅಂತ ಹೇಳಿದ್ದ ಚಿರಂಜೀವಿಗೆ ಎಲ್ಲರೂ ಲೆಫ್ಟ್ ರೈಟ್ ತೆಗೆದುಕೊಳ್ತಾ ಇದ್ದಾರೆ. ಅದ್ರಲ್ಲೂ ಈ ವಿಷ್ಯದಲ್ಲಿ ನಮ್ಮ ವಿಷ್ಣುದಾದರನ್ನ ನೋಡಿ ಕಲಿಯಿರಿ ಅಂತ ಫ್ಯಾನ್ಸ್ ಪಾಠ ಹೇಳ್ತಾ ಇದ್ದಾರೆ.
ಯೆಸ್ ಇತ್ತೀಚಿಗೆ ಮೆಗಾಸ್ಟಾರ್ ಚಿರಂಜೀವಿ ಆಡಿದ ಮಾತು ಅದೆಂಥಾ ವಿವಾದದ ಕಿಡಿ ಹೊತ್ತಿಸಿದೆ ಅನ್ನೋದು ನಿಮಗೆ ಗೊತ್ತೇ ಇದೆ. ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಚಿರಂಜೀವಿ ತಮ್ಮ ಮನೆಯಲ್ಲಿ ಹೆಣ್ಣುಮಕ್ಕಳೇ ಹೆಚ್ಚಿವೆ. ತಮ್ಮ ಕುಟುಂಬದ ಲೆಗಸಿ ಮುಂದವೆಸೋಕೆ ಪುತ್ರ ರಾಮ್ಚರಣ್ ಒಂದು ಗಂಡುಮಗುವನ್ನ ಮಾಡಿಕೊಳ್ಳಬೇಕು ಅಂತ ಹೇಳಿದ್ರು.
ಚಿರಂಜೀವಿಯಂಥಾ ಹಿರಿಯ ನಟರಲ್ಲೂ ಇರೋ ಪುರುಷ ಶ್ರೇಷ್ಟತೆಯ ವ್ಯಸನ, ಕುಟುಂಬದ ಗೌರವ ಕಾಪಾಡೋಕೆ ಗಂಡು ಮಗುವೇ ಬೇಕು ಅನ್ನೊ ಹುಚ್ಚುತನವನ್ನ ಕಂಡು ಜನರು ಛೀಮಾರಿ ಹಾಕಿದ್ರು. ನಿಮ್ಮಂಥಾ ಹಿರಿಯ ನಟರು ಸಮಾಜಕ್ಕೆ ಎಂಥಾ ಕೆಟ್ಟ ಸಂದೇಶ ಕೊಡ್ತಾ ಇದ್ದೀರಿ ಅಂತ ಕ್ಲಾಸ್ ತೆಗೆದುಕೊಂಡಿದ್ರು.
ಕರುಂಗಾಲಿ ಮಾಲೆ ಧರಿಸಿ ಓಡಾಡ್ತಿರೋ ಭಾರತಿ ವಿಷ್ಣುವರ್ಧನ್; ಇದರ ರಹಸ್ಯ ತಿಳಿದರೆ..!
ಅಸಲಿಗೆ ಚಿರಂಜೀವಿಗೆ ಎಲ್ಲರೂ ಡಾ. ವಿಷ್ಣುವರ್ಧನ್ರನ್ನ ನೋಡಿ ಕಲಿಯಿರಿ ಅಂತ ಸಲಹೆ ಕೊಡ್ತಾ ಇದ್ದಾರೆ. ವಿಷ್ಣುವರ್ಧನ್ ಕೂಡ ಚಿರಂಜೀವಿಯಷ್ಟೇ ದೊಡ್ಡ ತಾರೆ. ಜನಪ್ರಿಯತೆ, ಅಭಿಮಾನಿಗಳ ಸಂಖ್ಯೆ, ಮಾಸ್ ಇಮೇಜ್ ವಿಷಯಕ್ಕೆ ಬಂದ್ರೆ ಚಿರುಗಿಂತ ವಿಷ್ಣುದಾದ ಒಂದು ಕೈ ಮೇಲೇನೆ ಅಂದ್ರೂ ತಪ್ಪಾಗಲ್ಲ.
ಹೌದು ಡಾ. ವಿಷ್ಣುವರ್ಧನ್ ಮತ್ತು ಭಾರತಿ ತಾರಾ ದಂಪತಿಗೆ ಮಕ್ಕಳಾಗೋದಿಲ್ಲ. ಆಗ ಇವರು ಎರಡು ಹೆಣ್ಣುಮಕ್ಕಳನ್ನ ದತ್ತು ಸ್ವೀಕಾರ ಮಾಡ್ತಾರೆ. ಕೀರ್ತಿ ಮತ್ತು ಚಂದನಾ ಎಂಬ ಇಬ್ಬರು ಮುದ್ದು ಮಕ್ಕಳಿಗೆ ಪೋಷಕರಾಗ್ತಾರೆ ವಿಷ್ಣು-ಭಾರತಿ.
ಅಸಲಿಗೆ ವಿಷ್ಣುವರ್ಧನ್ ಕೂಡ ಚಿರು ತರಹ ಯೋಚಿಸಿದ್ರೆ ಗಂಡು ಮಗುವನ್ನೇ ದತ್ತು ಪಡೆಯಬಹುದಿತ್ತು. ಮಗನಿಗೆ ಮರಿಸಿಂಹ ಅಂತ ಹೆಸರಿಟ್ಟು ಮೆರೆಸಬಹುದಿತ್ತು. ಆದ್ರೆ ಗಂಡಾದ್ರೇನೂ.. ಹೆಣ್ಣಾದ್ರೇನೂ ಮಕ್ಕಳು ಮಕ್ಕಳೇ ಅಲ್ವಾ ಅಂತ ಯೋಚಿಸಿದ ಹೃದಯವಂತ ವಿಷ್ಣುವರ್ಧನ್.
ವಿಷ್ಣುವರ್ಧನ್ 'ಮುತ್ತಿನಹಾರ' ಬಿಡುಗಡೆ ವೇಳೆ ಪತ್ರಿಕೆಗೆ ಪತ್ರ ಬರೆದಿದ್ದ ಡಾ ರಾಜ್‌ಕುಮಾರ್!
ನಮ್ಮ ಸ್ಯಾಂಡಲ್ವುಡ್ ನಟರಾದ ಅನಂತ್ ನಾಗ್ , ಶಂಕರ್ ನಾಗ್ಗೂ ಬರೀ ಹೆಣ್ಣುಮಕ್ಕಳೆ ಇದ್ದಾರೆ. ಡಾ.ಶಿವರಾಜ್ಕುಮಾರ್ , ಪುನೀತ್ ರಾಜ್‌ಕುಮಾರ್ ಕೂಡ ಹೆಣ್ಣುಮಕ್ಕಳ ತಂದೆಯರು. ಇವರಿಗೆಲ್ಲಾ ಇಲ್ಲದ ಲೆಗೆಸಿ ಹುಚ್ಚು ನಿಮಗ್ಯಾಕೆ ಅಂತ ಜನ ಚಿರಂಜೀವಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
