Asianet Suvarna News Asianet Suvarna News

ಪುತ್ರನಿಗಾಗಿ ಲಂಡನ್‌ಗೆ ಹಾರಿದ ಮಹೇಶ್ ಬಾಬು ಕುಂಟುಂಬ

ಮಹೇಶ್ ಬಾಬು ದಿಢೀರ್ ವಿದೇಶಿ ಪ್ರವಾಸ ಕೈಕೊಂಡಿದ್ದಾರೆ. ಅದು ಮಗನ ವಿಚಾರವಾಗಿ. ತನ್ನ ಇಡೀ ಕುಟುಂಬದ ಜೊತೆ ಮಹೇಶ್ ಬಾಬು ಲಂಡನ್‌ಗೆ ಹಾರಿದೆ.  ಅಂದಹಾಗೆ ಮಹೇಶ್ ಬಾಬು ಇತ್ತೀಚಿಗಷ್ಟೆ ವಿದೇಶಿ ಪ್ರವಾಸ ಮುಗಿಸಿ ಭಾರತಕ್ಕೆ ವಾಪಾಸ್ ಆಗಿದ್ದರು. ಇದೀಗ ಮತ್ತೆ ವಿದೇಶಿ ಫ್ಲೈಟ್ ಹತ್ತಿದ್ದಾರೆ.  ಮಹೇಶ್ ಬಾಬು ಕುಟುಂಬ ಮತ್ತೆ ವಿದೇಶಕ್ಕೆ ಹಾರಿದ್ದು ತಮ್ಮ ಮಗ ಗೌತಮ್‌ಗಾಗಿ. 
 

Telugu star Mahesh Babu Flying To London For Gautam sgk
Author
Bengaluru, First Published Jul 16, 2022, 11:53 AM IST

ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಸದ್ಯ ಮುಂದಿನ ಸಿನಿಮಾದ ಚಿತ್ರೀಕರಣಕ್ಕಾಗಿ ಸಜ್ಜಾಗುತ್ತಿದ್ದಾರೆ. ಸರ್ಕಾರು ಪಾರಿ ಪಾಟ ಸಿನಿಮಾ ಬಳಿಕ ಮಹೇಶ್ ಬಾಬು ಇನ್ನು ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ತೆ,ಲುಗು ಪ್ರಿನ್ಸ್ ನಿರ್ದೇಶಕ ರಾಜಮೌಳಿ ಜೊತೆ ಸಿನಿಮಾ ಮಾಡುವ ಮೊದಲೇ ತ್ರಿವಿಕ್ರಮ್ ಜೊತೆ ಸಿನಿಮಾ ಪ್ರಾರಂಭ ಮಾಡಲಿದ್ದಾರೆ. ಇನ್ನೇನು ಚಿತ್ರೀಕರಣ ಪ್ರಾರಂಭ ಮಾಡುವ ತಯಾರಿಯಲ್ಲಿದ್ದ ಮಹೇಶ್ ಬಾಬು ದಿಢೀರ್ ವಿದೇಶಿ ಪ್ರವಾಸ ಕೈಕೊಂಡಿದ್ದಾರೆ. ಅದು ಮಗನ ವಿಚಾರವಾಗಿ. ತನ್ನ ಇಡೀ ಕುಟುಂಬದ ಜೊತೆ ಮಹೇಶ್ ಬಾಬು ಲಂಡನ್‌ಗೆ ಹಾರಿದೆ.  ಅಂದಹಾಗೆ ಮಹೇಶ್ ಬಾಬು ಇತ್ತೀಚಿಗಷ್ಟೆ ವಿದೇಶಿ ಪ್ರವಾಸ ಮುಗಿಸಿ ಭಾರತಕ್ಕೆ ವಾಪಾಸ್ ಆಗಿದ್ದರು. ಇದೀಗ ಮತ್ತೆ ವಿದೇಶಿ ಫ್ಲೈಟ್ ಹತ್ತಿದ್ದಾರೆ.  ಮಹೇಶ್ ಬಾಬು ಕುಟುಂಬ ಮತ್ತೆ ವಿದೇಶಕ್ಕೆ ಹಾರಿದ್ದು ತಮ್ಮ ಮಗ ಗೌತಮ್‌ಗಾಗಿ. 

ಮಹೇಶ್ ಬಾಬು ಪುತ್ರ ಗೌತಮ್ ಗಾಗಿ ವಿದೇಶದಲ್ಲಿ ಉತ್ತಮ ಶಾಲೆಗಳನ್ನು ಹುಡುಕುತ್ತಿದ್ದರು. ಇತ್ತೀಚಿಗಷ್ಟೆ ಮಹೇಶ್ ಮತ್ತು ನಮ್ರತಾ ದಂಪತಿ ಉತ್ತಮ ಶಾಲೆಯನ್ನು ಹುಡುಕಲು ಯುಎಸ್‌ಗೆ ಹಾರಿದ್ದರು. ಇದೀಗ ಲಂಡನ್‌ನಲ್ಲಿ ಮಗನಿಗಾಗಿ ಅತ್ಯುತ್ತಮ ಶಾಲೆ ಹುಡುಕಿರುವ ಸ್ಟಾರ್ ದಂಪತಿ ಇದೀಗ ಮಗನನ್ನು ಶಾಲೆಗೆ ಸೇರಿಸಲು ಮತ್ತೆ ವಿದೇಶಕ್ಕೆ ಹೋಗಿದ್ದಾರೆ.  
  
ಅನೇಕ ಕಾರಣಗಳಿಗಾಗಿ ಮಹೇಶ್ ಬಾಬು ಲಂಡನ್‌ನಲ್ಲಿ ಮಗನನ್ನು ಶಾಲೆಗೆ ಸೇರಿಸಲು ನಿರ್ಧರಿಸಿದ್ದಾರೆ. ಇದೀಗ ಮಗನ ಜೊತೆ ಮಹೇಶ್ ಬಾಬು, ನಮ್ರತಾ, ಮಗಳು ಸಿತಾರಾ ಮೂವರು ಗೌತಮ್ ಜೊತೆ ವಿದೇಶಕ್ಕೆ ಹಾರಿದ್ದಾರೆ. ಅಲ್ಲಿ ಪುತ್ರನ ಅಡ್ಮಿಷನ್ ಆದ ಬಳಿಕ ಮಹೇಶ್ ಬಾಬು ಕುಟುಂಬ ಹೈದರಾಬಾದ್ ಗೆ ವಾಪಾಸ್ ಆಗಲಿದೆ. ಮಗನ ಶಾಲೆಯ ಜವಾಬ್ದಾರಿ ಮುಗಿದ ಬಳಿಕ ಮಹೇಶ್ ಬಾಬು ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಸದ್ಯದಲ್ಲೇ  ಸರ್ಕಾರು ವಾರಿ ಪಾಟ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.  

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಜೊತೆ ಮಹೇಶ್ ಬಾಬು: ಕುತೂಹಲ ಮೂಡಿಸಿದ ಬಿಲ್ ಗೇಟ್ಸ್ ಭೇಟಿ

ಬಿಲ್ ಗೇಟ್ಸ್ ಭೇಟಿಯಾಗಿದ್ದ ಮಹೇಶ್ ಬಾಬು 

ಇತ್ತೀಚಿಗೆ ಯು ಎಸ್ ಹಾರಿದ್ದ ಮಹೇಶ್ ದಂಪತಿ  ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ, ಮೈಕ್ರೋಸಾಫ್ಟ್ ಸಂಸ್ಥಾಪಕ (Microsoft Founder) ಬಿಲ್ ಗೇಟ್ಸ್  ಭೇಟಿಯಾಗಿದ್ದರು. ಮಹೇಶ್ ಬಾಬು ದಂಪತಿ ಬಿಲ್ ಗೇಟ್ಸ್ ದಂಪತಿ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿತ್ತು. ಅಂದಹಾಗೆ ಬಿಲ್ ಗೇಟ್ಸ್ ಜೊತೆ ಮಹೇಶ್ ಬಾಬು ಮತ್ತು ಪತ್ನಿ ನಮ್ರತಾ ಇಬ್ಬರು ಅಕ್ಕಪಕ್ಕದಲ್ಲಿ ನಿಂತು ಕ್ಯಾಮರಾಗೆ ಪೋಸ್ ನೀಡಿದ್ದರು. ಈ ಫೋಟೋವನ್ನು ಮಹೇಶ್ ಬಾಬು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಸಂತಸ ವ್ಯಕ್ತಪಡಿಸಿದ್ದರು.

ರಿಮೇಕ್ ಸಿನಿಮಾದಲ್ಲಿ ನಟಿಸಿಲ್ಲ ಮಹೇಶ್ ಬಾಬು, ರೆಕಾರ್ಡ್ ಆಯ್ತು ಆ ದಾಖಲೆ!

'ಬಿಲ್ ಗೇಟ್ಸ್ ಭೇಟಿಯಾಗಿ ತುಂಬಾ ಸಂತೋಷವಾಯಿತು. ಈ ಜಗತ್ತು ಕಂಡ ಮಹಾನ್ ವ್ಯಕ್ತಿ. ಅತ್ಯಂತ ವಿನಮ್ರ ವ್ಯಕ್ತಿ. ನಿಜವಾಗಿಯೂ ಸ್ಫೂರ್ತಿ' ಎಂದು ಹೇಳಿದ್ದರು. ಮಹೇಶ್ ಬಾಬು ಪೋಸ್ಟ್2ಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಕಾಮೆಂಟ್ ಹರಿದುಬಂದಿತ್ತು. ನೆಚ್ಚಿನ ನಟನನ್ನು ವಿಶ್ವದ ಶ್ರೀಮಂತ ವ್ಯಕ್ತಿಯ ಜೊತೆ ನೋಡಿ ಅಭಿಮಾನಿಗಳು ಹಾರ್ಟ್ ಇಮೋಜಿ ಹಾಕಿ ಖುಷಿ ವ್ಯಕ್ತಪಡಿಸಿದ್ದರು.

Follow Us:
Download App:
  • android
  • ios