Asianet Suvarna News Asianet Suvarna News

ದುಬೈ 'ಮೇಣದ ಪ್ರತಿಮೆ' ಮುಂದೆ ಸ್ಟಾರ್ ಅಲ್ಲು ಅರ್ಜುನ್ ನಿಂತಾಗ...!

ನಟ ಅಲ್ಲು ಅರ್ಜುನ್ ಎಂದರೆ ಡಾನ್ಸ್ ಕಿಂಗ್ ಎಂದೇ ಖ್ಯಾತಿ ಪಡೆದವರು. ಅಲ್ಲು ಅರ್ಜುನ್ ಚಿತ್ರಗಳಲ್ಲಿ ಸಾಂಗ್ ಮತ್ತು ಡಾನ್ಸ್‌ಗೆ ವಿಶೇಷ ಮಹತ್ವ ಇರುತ್ತದೆ. ಸ್ಪೆಷಲ್ ಡಾನ್ಸ್ ಗಾಗಿಯೇ ಸ್ಪೆಷಲ್ ಸಾಂಗ್ ಎಂಬಷ್ಟು 'ರಾ' ಸಾಂಗ್‌ಗಳು ಅಲ್ಲು ಅರ್ಜುನ್ ಚಿತ್ರಗಳಲ್ಲಿ ಜಾಗ ಪಡೆದಿರುತ್ತವೆ. 

Telugu Star Allu Arjun wax twin at Madame Tussauds Dubai srb
Author
First Published Oct 6, 2023, 5:24 PM IST

ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಆಗಿದ್ದಾರೆ. ಗಾಬರಿ ಆಗಬೇಡಿ, ಅವರು ಮೇಣದ ಪ್ರತಿಮೆ ರೂಪ ತಾಳಿದ್ದಾರೆ. ಅಂದರೆ, ದುಬೈನಲ್ಲಿ ಈ ತೆಲುಗು ನಟನ ಮೇಣದ ಪ್ರತಿಮೆ ಅನಾವರಣ ಆಗಿದೆ. ಇತ್ತೀಚೆಗೆ ತಮ್ಮ ಸಿನಿಮಾ ಅಭಿನಯಕ್ಕಾಗಿ 'ರಾಷ್ಟ್ರೀಯ ಪ್ರಶಸ್ತಿ (National Award)'ಪಡೆದ ನಟ ಅಲ್ಲು ಅರ್ಜುನ್ ಇದೀಗ ದುಬೈನಲ್ಲಿ 'ಮೇಣದ ಪ್ರತಿಮೆ' ಹಿರಿಮೆ-ಗರಿಮೆಗೆ ಪಾತ್ರರಾಗಿದ್ದಾರೆ. 

ನಟ ಅಲ್ಲು ಅರ್ಜುನ್ ಎಂದರೆ ಡಾನ್ಸ್ ಕಿಂಗ್ ಎಂದೇ ಖ್ಯಾತಿ ಪಡೆದವರು. ಅಲ್ಲು ಅರ್ಜುನ್ ಚಿತ್ರಗಳಲ್ಲಿ ಸಾಂಗ್ ಮತ್ತು ಡಾನ್ಸ್‌ಗೆ ವಿಶೇಷ ಮಹತ್ವ ಇರುತ್ತದೆ. ಸ್ಪೆಷಲ್ ಡಾನ್ಸ್ ಗಾಗಿಯೇ ಸ್ಪೆಷಲ್ ಸಾಂಗ್ ಎಂಬಷ್ಟು 'ರಾ' ಸಾಂಗ್‌ಗಳು ಅಲ್ಲು ಅರ್ಜುನ್ ಚಿತ್ರಗಳಲ್ಲಿ ಜಾಗ ಪಡೆದಿರುತ್ತವೆ. ಕಳೆದ ವರ್ಷ ಬಿಡುಗಡೆಯಾಗಿ ಸೂಪರ್ ಹಿಟ್ 'ಬ್ಲಾಕ್ ಬಸ್ಟರ್' ಚಿತ್ರವೆಂದು ಕರೆಸಿಕೊಂಡ 'ಪುಷ್ಪಾ' ನಟ ಇದೇ ಅಲ್ಲು ಅರ್ಜುನ್. 

ಸೊಸೆ ಕಣ್ಣೀರಿಗೆ ಕರಗಿದಳಾ ಅತ್ತೆ; ಚಾರು ಬಳಿಗೆ ಬಂದ ರಾಮಚಾರಿ ಶಾಕ್ ಆಗ್ಬಿಟ್ಟ..!

ದುಬೈನಲ್ಲಿ 'ವ್ಯಾಕ್ಸ್ ಐಡೋಲ್' ಗೌರವಕ್ಕೆ ಪಾತ್ರರಾದ ನಟ ಅಲ್ಲು ಅರ್ಜುನ್ ಇದೀಗ ಇನ್ನೊಂದು ಹೆಜ್ಜೆ ಮುಂದಡಿ ಇಟ್ಟಿದ್ದಾರೆ ಎನ್ನಬಹುದು. ಏಕೆಂದರೆ, ಲಂಡನ್‌ ಅಥವಾ ದುಬೈನಲ್ಲಿ 'ವ್ಯಾಕ್ಸ್' ರೂಪ ಪಡೆಯುವುದು ಅಷ್ಟು ಸುಲಭವೇನೂ ಅಲ್ಲ. ಭಾರತದಲ್ಲಿ ಕೆಲವೇ ನಟನಟಿಯರಿಗೆ ಸಿಗುವ ಗೌರವ ಅದು. ನಟರಾದ ಅಮಿತಾಭ್ ಬಚ್ಚನ್, ಮಹೇಶ್ ಬಾಬು, ಹೃತಿಕ್ ರೋಶನ್, ಶಾರುಖ್ ಖಾನ್ ಜತೆಗೆ ನಟಿಯರಾದ ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಚೋಪ್ರಾ ಹೀಗೆ ಕೆಲವೇ ಸೆಲೆಬ್ರಿಟಿಗಳು 'ಮೇಣದ ಪ್ರತಿಮೆ' ರೂಪ ಪಡೆದಿದ್ದಾರೆ. 

ಬಿಗ್ ಬಾಸ್‌ ಸೀಸನ್ 10ಕ್ಕೆ ಕ್ಷಣಗಣನೆ; ಪರಮೇಶ್ವರ್ ಗುಂಡ್ಕಲ್ ಮಿಸ್ ಮಾಡಿಕೊಳ್ತಿರೋ ವೀಕ್ಷಕರು!

 

 

Follow Us:
Download App:
  • android
  • ios