ತೆಲುಗು ಚಿತ್ರರಂಗದಲ್ಲಿ ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಹಾಸ್ಯ ನಟ ನರಸಿಂಗ್ ಯಾದವ್‌ ಡಿಸೆಂಬರ್ 31ರಂದು ಇಹಲೋಕ ತ್ಯಜಿಸಿದ್ದಾರೆ.  52 ವರ್ಷದ ಈ ನಟನಿಗೆ ಹಲವು ತಿಂಗಳಿಂದ ಕಿಡ್ನಿ ವೈಫಲ್ಯವಾಗಿತ್ತು. ಆಸ್ಪತ್ರೆಯಲ್ಲಿ ದಾಖಲಾಗಿ. ಚಿಕಿತ್ಸೆ ಪಡೆಯುತ್ತಿದ್ದರು.

ಯಶೋದಾ ಆಸ್ಪತ್ರೆಯಲ್ಲಿ ಕಿಡ್ನಿ ಡಯಾಲಿಸಿಸ್‌ ಮಾಡಿಸುತ್ತಿದ್ದ ನರಸಿಂಗ್ ಸಕ್ಕರೆ ಹಾಗೂ ರಕ್ತದೊತ್ತಡದಲ್ಲಿ ವ್ಯತ್ಯಾಸವಾದ್ದರಿಂದ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಮೆದುಳಿನಲ್ಲಿ ಬ್ಲಾಕೇಜ್ ಆಗಿತ್ತು ಎಂದು ವೈದ್ಯರು ಹೇಳಿದ್ದರು. ಇದರಿಂದ ಕೆಲವು ದಿನಗಳ ಕಾಲ ಕೋಮಾಗೆ ಜಾರಿದ್ದರು. ಏಪ್ರಿಲ್‌ 9ರಿಂದ ಕೋಮಾದಲ್ಲಿದ್ದು, ಸಾವು ಬದುಕಿನ ನಡುವೆ ಹೋರಾಟ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚಿತ್ರರಂಗದ ಆಪ್ತರು ಹಾಗೂ ಕುಟುಂಬವರನ್ನ ಅಗಲಿದ್ದಾರೆ.

ಕೋಮಾಕ್ಕೆ ಜಾರಿದ ಹಾಸ್ಯ ನಟ; ಏನು ಮಾತನಾಡುತ್ತಿದ್ದೀರಾ ಎಂದು ಪತ್ನಿ ಗರಂ! 

ಸುಮಾರು 25 ವರ್ಷಗಳ ಕಾಲ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನರಸಿಂಗ್ ವಿಲನ್, ಕಾಮಿಡಿಯನ್ ಹಾಗೂ ಕ್ಯಾರೆಕ್ಟರ್‌ ಆರ್ಟಿಸ್ಟ್‌ ಆಗಿ ಅಭಿನಯಿಸಿದ್ದಾರೆ. ತಮ್ಮ ವಿಭಿನ್ನ ಮಾತಿನ ಶೈಲಿಯಿಂದ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದರು. ಅಲ್ಲದೇ ಹೆಚ್ಚಾಗಿ ರಾಮ್‌ ಗೋಪಾಲ್ ವರ್ಮಾ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.