Fraud Case: ನಟ ಹರ್ಷಗೆ ಮೂರು ಕೋಟಿ ಪಂಗನಾಮ, ನಿರ್ಮಾಪಕಿ ಬಣ್ಣದ ಮಾತು ಬಯಲು!

ತೆಲುಗು ಚಿತ್ರರಂಗದಲ್ಲಿ ನಡೆಯುತ್ತಿರುವ ದೊಡ್ಡ ವಂಚನೆ ಪ್ರಕರಣ ದಿನಕ್ಕೊಂದು  ಹೊಸ ತಿರುವು ಪಡೆದುಕೊಳ್ಳುತ್ತಿದೆ. ಲಿಸ್ಟ್‌ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ... 

Telugu Priyadarshini and Harsha files fraud complaint against producer Shilpa Chowdary vcs

ತೆಲುಗು ಚಿತ್ರರಂಗದ (Tollywood) ಜನಪ್ರಿಯ ಕಮ್ ಐಷಾರಾಮಿ ಜೀವನ (Luxurious Life) ನಡೆಸುತ್ತಿರುವ ನಿರ್ಮಾಪಕಿ ಟಿ ಶಿಲ್ಪಾ ಚೌಧರಿ (Shilpa Chowdary) ವಿರುದ್ಧ ಮಹೇಶ್ ಬಾಬು ಸಹೋದರಿ ಪ್ರಿಯದರ್ಶಿನಿ (Priyadarshini) ವಂಚನೆ(Cheating) ಆರೋಪ ಮಾಡಿದ್ದರು. ಹೈದರಾಬಾದ್‌ ಪೊಲೀಸ್ (Hyderabad Police) ಠಾಣೆಯಲ್ಲಿ ದೂರು ದಾಖಲಿಸಿ, ಕ್ರಮ ತೆಗೆದುಕೊಳ್ಳುವಂತೆ ಹಿರಿಯ ಅಧಿಕಾರಿಗಳಿಂದ ಒತ್ತಡ ಹಾಕುತ್ತಿದ್ದಾರೆ. ಈ ವೇಳೆ ಮತ್ತೊಬ್ಬ ಯುವ ನಟ ಹರ್ಷ (Harsha) ಕೂಡ ಈ ನಿರ್ಮಾಪಕಿ ವಿರುದ್ಧ ದೂರು ದಾಖಲಿಸಿದ್ದಾರೆ. 

ಹೌದು! ಇದೇನಪ್ಪ ಸಿನಿಮಾ ನಿರ್ಮಾಣ ಮಾಡುತ್ತಿಲ್ಲ. ಆದರೂ ನಿರ್ಮಾಪಕಿ ಎಂದು ಹೇಳಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದಾರೆ, ಎಂದು ಅನೇಕರು ಶಿಲ್ಪಾ ಚೌಧರಿ ಬಗ್ಗೆಈ ಹಿಂದೆಯೇ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಇವರ ವಿರುದ್ಧ ಒಂದೊಂದೇ ದೂರು ದಾಖಲಾಗುತ್ತಿರುವುದನ್ನು ನೋಡಿ ಶಾಕ್ ಆಗಿದ್ದಾರೆ. ತೆಲುಗು (Tollywood) ಚಿತ್ರರಂಗ ಸ್ಟಾರ್ ನಟ, ನಟಿಯರ ಜೊತೆ ತುಂಬಾನೇ ಕ್ಲೋಸ್ ಇರುವ ಶಿಲ್ಪಾ, ಅನೇಕರಿಂದ  ಕೋಟಿಯಲ್ಲಿ (Crores) ಹಣ ಪಡೆದುಕೊಂಡು, ಬಡ್ಡಿ ಅಥವಾ ಜಮೀನು ಕೊಡಿಸುವುದಾಗಿ ಹೇಳಿ ಪಂಗನಾಮ ಹಾಕಿದ್ದಾರೆನ್ನಲಾಗುತ್ತಿದೆ. 

ಸುಧೀರ್ ಬಾಬು ಪತ್ನಿ ಕಮ್ ಮಹೇಶ್ ಬಾಬು (Mahesh Babu) ಸಹೋದರಿಯೂ ಆಗಿರುವ ಪ್ರಿಯದರ್ಶಿನಿ ನಾಲ್ಕು ಕೋಟಿ ರೂ. ವಂಚನೆ ಕೇಸ್ ದಾಖಲು ಮಾಡಿದ್ದಾರೆ. ರಿಯಲ್ ಎಸ್ಟೇಟ್‌ನಲ್ಲಿ (Real Estate) ತುಂಬಾನೇ ದುಡ್ಡು ಮಾಡಬಹುದು ನಿಮಗೆ ಇಷ್ಟು ಅಂತ ಶೇರ್ ನೀಡುವೆ, ಎಂದು ಶಿಲ್ಪಾ ನಂಬಿಸಿದ್ದರಂತೆ. ಆದರೆ ಈವರೆಗೂ ಪ್ರಿಯಾದರ್ಶಿನಿಯವರಿಗೆ ಒಂದು ಒಂದು ರೂಪಾಯಿಯನ್ನೂ ಸೋ ಕಾಲಡ್ ನಿರ್ಮಾಪಕಿ, ವಂಚಕಿ ಶಿಲ್ಪಾ ಕೊಟ್ಟಿಲ್ಲವಂತೆ.  ಪ್ರಿಯದರ್ಶಿನಿ ದೂರು ನೀಡಿದ ವಿಚಾರ ದೊಡ್ಡ ಸುದ್ದಿ ಆಗುತ್ತಿದ್ದಂತೆ, ನಟ ಹರ್ಷ ಕೂಡ ದೂರು ನೀಡಿದ್ದಾರೆ. ಯಾರೆಲ್ಲಾ ವಂಚನೆಗೆ (Fraud) ಒಳಗಾಗಿದ್ದೀರಿ ದಯವಿಟ್ಟು ದೂರು ನೀಡಿ ಎಂದು ಕರೆ ನೀಡಿದ್ದಾರೆ. ಸಹಜವಾಗಿ ವಂಚಿತರು ಮತ್ತಷ್ಟು ದೂರ ಸಲ್ಲಿಸುವ ನಿರೀಕ್ಷೆಯಿದ್ದು, ಈ ಪ್ರಕರಣ ಎತ್ತ ಸಾಗುತ್ತದೋ ಎಂಬುದನ್ನು ಕಾದು ನೋಡಬೇಕಿದೆ. 

Telugu Priyadarshini and Harsha files fraud complaint against producer Shilpa Chowdary vcs

ಶಿಲ್ಪಾ ಚೌಧರಿ ತನ್ನಿಂದ ಮೂರು ಕೋಟಿ ಹಣವನ್ನು ಪಡೆದುಕೊಂಡು, ಕೊಡದೇ ಹೇಗೆ ಸತ್ತಾಯಿಸುತ್ತಿದ್ದಾರೆ, ಎಂದು ಹರ್ಷ ದೂರಿನಲ್ಲಿ ಬರೆದು ಕೊಟ್ಟಿದ್ದಾರೆ. ದೂರು ದಾಖಲಾಗುತ್ತಿದ್ದಂತೆ, ಪೊಲೀಸರು ತನಿಖೆ ಆರಂಭಿಸಿ ಶಿಲ್ಪಾ ಯಾರಿಗೆಲ್ಲಾ ವಂಚನೆ ಮಾಡಿದ್ದಾರೆಂಬುದನ್ನು ಬಯಲು ಮಾಡುತ್ತೇವೆ ಎಂದು ಶಪಥ ಮಾಡಿದ್ದಾರೆ.  ನರ್ಸಿಂಗಿ ಪೊಲೀಸರು (Narsingi Police) ಪಿಟಿಷನ್ ಸಹಿ ಮಾಡಿಸಿಕೊಂಡು, ಶಿಲ್ಪಾ ಚೌಧರಿ ಮತ್ತು ಅವರ ಪತಿ ಶ್ರೀನಿವಾಸ್ ಪ್ರಸಾದ್ ಅವರನ್ನು 7 ದಿನಗಳ ಕಾಲ ಕಸ್ಟಡಿಗೆ ಬೇಕೆಂದು ಕೋರ್ಟಿಗೆ ತಿಳಿಸಿದ್ದರು. ಆದರೆ ಪತಿ ಶ್ರೀನಿವಾಸ್ ಪ್ರಸಾದ್‌ ಅವರಿಗೆ ಕೋರ್ಟ್‌ ನಿರೀಕ್ಷಣಾ ಜಾಮೀನು (Anticipatory Bail) ನೀಡಿದೆ. ಆದರೆ ಶಿಲ್ಪಾಗೆ ಮಾತ್ರ ಬೇಲ್ ನಿರಾಕರಿಸಿದೆ. ಇದಾದ ನಂತರ ನಟಿ ದಿವ್ಯಾ ರೆಡ್ಡಿ (Divya Reddy) ಅವರಿಂದ 1.50 ಕೋಟಿ ಪಡೆದಿದ್ದಾರೆ  ಶಿಲ್ಪಾ, ಹಣ ಮರಳಿ ಕೊಡುವಂತೆ ಕೇಳಿದ್ದರೆ, ಬೌನ್ಸರ್‌ಗಳನ್ನು (Bouncer) ಬಿಟ್ಟು ಬೆದರಿಕೆ ಹಾಕಿಸಿದ್ದಾರೆ. ಹೀಗಾಗಿ ದಿವ್ಯಾ ಕೂಡ ಮತ್ತೊಂದು ದೂರು ದಾಖಲು ಮಾಡಿದ್ದಾರೆ. 

Job Fraud Busted: ನಕಲಿ ದಾಖಲೆ ಸೃಷ್ಟಿಸಿ ಸೇನೆಗೆ ನೇಮಕ: ಹತ್ತು ಮಂದಿ ಅರೆಸ್ಟ್‌

ಈವರೆಗೂ ಪೊಲೀಸರು ಮಾಹಿತಿ ಕಲೆ ಹಾಕಿರುವ ಪ್ರಕಾರ ಶಿಲ್ಪಾ 10 ಕೋಟಿ ರೂ.ಗೂ ಹೆಚ್ಚು ವಂಚನೆ ಮಾಡಿದ್ದಾರೆ. ಸಿನಿಮಾದವರಿಂದ ಮಾತ್ರವಲ್ಲದೇ ಬ್ಯುಸಿನೆಸ್‌ ಐಕಾನ್‌ಗಳನ್ನು (Business Icon) ತಮ್ಮ ಬಣ್ಣದ ಮಾತಿನಿಂದ ವಂಚಿಸಿದ್ದಾರೆ. ಹೇಗೆ ಹಣ ಪಡೆದುಕೊಂಡರು ಮತ್ತು ಹೇಗೆ ಮತ್ತೊಬ್ಬರಿಗೆ ವರ್ಗಾವಣೆ ಮಾಡತ್ತಿದ್ದರು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios