ಆಗಸ್ಟ್ 1ರಿಂದ ತೆಲುಗು ಸಿನಿಮಾ ಚಿತ್ರೀಕರಣ ಸಂಪೂರ್ಣ ಸ್ಥಗಿತಗೊಳಿಸಲು ನಿರ್ಮಾಪಕರ ಸಂಘ ನಿರ್ಧರಿಸಿದೆ. ಆಗಸ್ಟ್ 1 ರಿಂದ ಮುಂದಿನ ಘೋಷಣೆಯಾಗುವವರೆಗೂ ಚಿತ್ರೀಕರಣವನ್ನು ಸ್ಥಗಿತಗೊಳಿಸುವುದಾಗಿ ಬಹಿರಂಗ ಪಡಿಸಿದೆ. ಈ ದೃಢ ನಿರ್ಧಾರದ ಹಿಂದೆ ಉದ್ಯಮವನ್ನು ಪುನರ್ರಚಿಸುವ ಪ್ರಯತ್ನವಿದೆ ಎಂದು ನಿರ್ಮಾಪಕರ ಸಂಘ ಬಹಿರಂಗಪಡಿಸಿದೆ.
ಆಗಸ್ಟ್ 1ರಿಂದ ತೆಲುಗು ಸಿನಿಮಾ ಚಿತ್ರೀಕರಣ ಸಂಪೂರ್ಣ ಸ್ಥಗಿತಗೊಳಿಸಲು ನಿರ್ಮಾಪಕರ ಸಂಘ ನಿರ್ಧರಿಸಿದೆ. ಆಗಸ್ಟ್ 1 ರಿಂದ ಮುಂದಿನ ಘೋಷಣೆಯಾಗುವವರೆಗೂ ಚಿತ್ರೀಕರಣವನ್ನು ಸ್ಥಗಿತಗೊಳಿಸುವುದಾಗಿ ಬಹಿರಂಗ ಪಡಿಸಿದೆ. ತೆಲುಗು ಸಿನಿಮಾರಂಗದ ಈ ದೃಢ ನಿರ್ಧಾರದ ಹಿಂದೆ ಉದ್ಯಮವನ್ನು ಪುನರ್ರಚಿಸುವ ಪ್ರಯತ್ನವಿದೆ ಎಂದು ನಿರ್ಮಾಪಕರ ಸಂಘ ಬಹಿರಂಗಪಡಿಸಿದೆ. ಕೋವಿಡ್ ಬಳಿಕ ತೆಲುಗು ಸಿನಿಮಾರಂಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಆರ್ ಆರ್ ಆರ್, ಪುಷ್ಪ, ಕೆಜಿಎಫ್-2 ಸಿನಿಮಾಗಳು ಬಿಟ್ಟರೆ ಯಾವುದೇ ಸಿನಿಮಾಗಳು ಹಿಟ್ ಆಗಿಲ್ಲ. ನಿರ್ಮಾಪಕರ ಬಜೆಟ್ ಹೆಚ್ಚಾಗುತ್ತಿದೆ. ಆದರೆ ಸರಿಯಾದ ಲಾಭ ಅವರ ಕೈ ಸೇರುತ್ತಿಲ್ಲ. ಟಿಕೆಟ್ ಬೆಲೆ ಏರಿಕೆ, ಒಟಿಟಿ ಪ್ರಾಭಲ್ಯ, ನಟ ಸಂಭಾವನೆ ಏರಿಗೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ನಿರ್ಮಾಪಕರು ನಷ್ಟ ಅನುಭವಿಸುವಂತಾಗಿದೆ. ಹಾಗಾಗಿ ಚಿತ್ರೀಕರಣ ಸಂಪೂರ್ಣ ಸ್ಥಗಿತಗೊಳಿಸಿ ಈ ಸಮಸ್ಯೆಯಿಂದ ಹೊರಬರಲು ನಿರ್ಮಾಪಕರ ಸಂಘ ನಿರ್ಧಾರ ತೆಗೆದುಕೊಂಡಿದೆ.
ಈ ಬಗ್ಗೆ ಚರ್ಚಿಸಲು ತೆಲುಗು ಸಿನಿಮಾರಂಗದಲ್ಲಿ ಸರಣಿ ಸಭೆಗಳು ನಡೆಯುತ್ತಿವೆ. ಜುಲೈ 26 ರಂದು ನಡೆದ ನಿರ್ಮಾಪಕರ ಸಭೆಯಲ್ಲಿ ಚರ್ಚೆಯಾದ ವಿಚಾರವನ್ನು ಬಹಿರಂಗ ಪಡಿಸಲಾಗಿದೆ. 'ಕೊರೊನಾ ಆದಾಯ ಪರಿಸ್ಥಿತಿ ಬದಲಾಗಿದೆ ಹಾಗೂ ವೆಚ್ಚ ಹೆಚ್ಚುತ್ತಿದೆ. ನಿರ್ಮಾಪಕರ ಸಮುದಾಯವಾಗಿ ನಾವು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಚರ್ಚಿಸುವುದು ನಿರ್ಮಾಪಕರಿಗೆ ಮುಖ್ಯವಾಗಿದೆ. ಇದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ವ್ಯವಸ್ಥೆಯನ್ನು ಉತ್ತಮಗೊಳಿಸಲು ಮತ್ತು ನಾವು ನಮ್ಮ ಚಲನಚಿತ್ರಗಳನ್ನು ಆರೋಗ್ಯಕರ ವಾತಾವರಣದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು. ಈ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ಸ್ವಯಂಪ್ರೇರಣೆಯಿಂದ ಆಗಸ್ಟ್ 1, 2022 ರಿಂದ ಚಿತ್ರೀಕರಣವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ, ಇದು ಕಾರ್ಯಸಾಧ್ಯವಾದ ನಿರ್ಣಯಗಳನ್ನು ಕಂಡುಕೊಳ್ಳುವವರೆಗೆ ಮುಂದುವರೆಯಲಿದೆ' ಎಂದು ನಿರ್ಧಾರ ಕೈಗೊಳ್ಳಲಾಗಿದೆ.
ಸಿನಿಮಾರಂಗಕ್ಕೆ ಕೊರೊನಾ ಎಫೆಕ್ಟ್
2020 ರಲ್ಲಿ, ಕೊರೊನಾ ಕಾರಣದಿಂದ ಎಲ್ಲಾ ಚಲನಚಿತ್ರ ಉದ್ಯಮಗಳು ಹಲವಾರು ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದವು. ಟಾಲಿವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳಾದ ಆರ್‌ಆರ್‌ಆರ್ ಮತ್ತು ಪುಷ್ಪ ಸೇರಿದಂತೆ ಹಲವು ಚಿತ್ರಗಳು ಮುಂದೂಡಲ್ಪಟ್ಟಿದ್ದವು. ಚಿತ್ರಮಂದಿರಗಳಿಗೆ ದೊಡ್ಡ ಮಟ್ಟದ ಎಫೆಕ್ಟ್
ಆಯಿತು. ಬಳಿಕ ಪ್ರೇಕ್ಷಕರು ಚಿತ್ರಮಂದಿರದತ್ತ ಮರಳಲು ಸುಮಾರು ಎರಡು ವರ್ಷಗಳನ್ನು ತೆಗೆದುಕೊಂಡಿತು.
ಅಲ್ಲು ಅರ್ಜುನ್ ಅವರ ಪುಷ್ಪ: ದಿ ರೈಸ್, ಜೂನಿಯರ್ Jr.NTR ಮತ್ತು ರಾಮ್ ಚರಣ್ ಅವರ ಆರ್ ಆರ್ ಆರ್, ಯಶ್ ನಟನೆಯ ಕೆಜಿಎಫ್: ಅಧ್ಯಾಯ 2 ಮತ್ತು ಕಮಲ್ ಹಾಸನ್ ಅವರ ವಿಕ್ರಮ್ ಮುಂತಾದ ಸೂಪರ್ ಹಿಟ್ ಪ್ಯಾೀಂನ್ ಇಂಡಿಯಾ ಸಿನಿಮಾಗಳು ಬಿಟ್ಟರೆ ಬೇರೆ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸೋತಿವೆ. ಸ್ಟಾರ್ ನಟ ಎನ್ನುವ ಬ್ರಾಂಡ್ ನಲ್ಲಿ ಬರ್ತಿರುವ ಸಿನಿಮಾಗಳು ಸಹ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿವೆ. ಉದಾಹರಣೆಗೆ ಚಿರಂಜೀವಿಯವರ ಆಚಾರ್ಯರ ಸಿನಿಮಾ ಕೂಡ ಹೀನಾಯ ಸೋಲು ಕಂಡಿದೆ.
ಹೀನಾಯ ಸೋಲಿನ ಬಳಿಕ ಎಚ್ಚೆತ್ತುಕೊಂಡಿರುವ ತೆಲುಗು ಸಿನಿಮಾ ನಿರ್ಮಾಪಕರು ಇದರಿಂದ ಹೊರಬರಲು ಪ್ರಯತ್ನ ಪಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಸಿನಿಮಾರಂಗವನ್ನು ಆಕ್ರಮಿಸಿದ ಒಟಿಟಿ ಜಗತ್ತು ಹಾಗೂ ನಿರ್ಮಾಪಕರು ಅನಿರ್ವಾಯವಾಗಿ ಒಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿರುವುದು ಚಿತ್ರಮಂದಿರಕ್ಕೆ ದೊಡ್ಡ ಹೊಡೆತವಾಗಿದೆ. ಸದ್ಯ ಚಿತ್ರಮಂದಿರಗಳು ಸಕ್ರೀಯವಾಗುತ್ತಿವೆ. ಆದರೂ ಮೊದಲ ಸ್ಥಿತಿ ತಲುಪಿಲ್ಲ.
ಸೂಪರ್ ಸ್ಟಾರ್ ಧನುಷ್ ಅವರ 150 ಕೋಟಿ ಬೆಲೆಯ ಬಂಗಲೆ ಒಳಗೆ ಹೇಗಿದೆ ನೋಡಿ
ಕಿಟೆಕ್ ಬೆಲೆ ಹೆಚ್ಚಳದ ಪರಿಣಾಮ
ಕಳೆದ ಕೆಲವು ವಾರಗಳಿಂದ ತೆಲುಗು ನಿರ್ಮಾಪಕರು ಸಭೆಗಳನ್ನು ನಡೆಸುತ್ತಿದ್ದು ಉದ್ಯಮವನ್ನು ಕಾಡುತ್ತಿರುವ ಸಮಸ್ಯೆಗಳನ್ನು ವಿವರಿಸುತ್ತಿದ್ದಾರೆ. ಥಿಯೇಟರ್‌ಗಳಲ್ಲಿ ಹೆಚ್ಚುತ್ತಿರುವ ಟಿಕೆಟ್ ದರಗಳು ಒಂದು ಪ್ರಮುಖ ಚರ್ಚೆಯಾಗಿದೆ. ಇದು ನಿರ್ಮಾಪಕರಿಗೆ ಲಾಭದಾಯಕವಾಗಿದ್ದರೂ, ಪ್ರೇಕ್ಷಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೆಚ್ಚಿನ ಟಿಕೆಟ್ ದರಗಳ ಕಾರಣ, ಅದನ್ನು ಪಡೆಯಲು ಸಾಧ್ಯವಾಗದ ಪ್ರೇಕ್ಷಕರು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಅಥವಾ ಪೈರಸಿ ಸೈಟ್‌ಗಳ ಮೂಲಕ ವೀಕ್ಷಿಸಲು ಬಯಸುತ್ತಾರೆ. ಹಾಗಾಗಿ ಎಲ್ಲಾ ಆರ್ಥಿಕ ಹಿನ್ನೆಲೆಯ ಜನರಿಗೆ ಚಿತ್ರಮಂದಿರಗಳಿಗೆ ಬಂದು ಸುಲಭವಾಗಿ ಸಿಗುವಂತೆ ಟಿಕೆಟ್ ದರ ಇರಬೇಕು ಎಂದು ನಿರ್ಮಾಪಕರ ಸಂಘದ ಚರ್ಚೆಯಲ್ಲಿ ಪ್ರಮುಖವಾಗಿದೆ.
ಒಟಿಟಿ ರಿಲೀಸ್ ಬಗ್ಗೆ ಚರ್ಚೆ
ನಿರ್ಮಾಪಕರು, ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಬಳಿಕ ಕೆಲ ಸಮಯ ನೀಡಿ ನಂತರ ಒಟಿಟಿಯಲ್ಲಿ ರಿಲೀಸ್ ಮಾಡಲು ಒಪ್ಪಂದ ಮಾಡಿಕೊಳ್ಳಬೇಕು. ಆಗ ಒಟಿಟಿಯಲ್ಲಿ ಸಿನಿಮಾ ನೋಡುವ ಬದಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ ಎನ್ನುವುದನ್ನು ಪ್ರಸ್ತಾಪಿಸಲಾಗಿದೆ.
ನಾಗಚೈತನ್ಯ ಜೊತೆ ವಾಸವಿದ್ದ ಮನೆಯನ್ನು ದುಬಾರಿ ಬೆಲೆಗೆ ಮತ್ತೆ ಖರೀದಿಸಿದ ಸಮಂತಾ
ಕಲಾವಿದರ ಸಂಭಾವನೆ ಏರಿಕೆ
ಟಾಲಿವುಡ್‌ನ ಹಲವು ಪ್ರಮುಖ ನಾಯಕರು ಮತ್ತು ನಿರ್ದೇಶಕರು ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರೆ. ಇದು ಸಿನಿಮಾ ಬಜೆಟ್‌ಗಳನ್ನು ಹೆಚ್ಚಿಸುವ ಕಾರಣಗಳಲ್ಲಿ ಒಂದಾಗಿದೆ. ಇದು ಕೂಡ ನಿರ್ಮಾಪಕರ ನಷ್ಟದ ದೊಡ್ಡ ಭಾಗವಾಗಿದೆ. ಹಾಗಾಗಿ ನಟರ ವೇತನವನ್ನು ನಿಯಂತ್ರಿಸುವ ಬಗ್ಗೆ ನಿರ್ಮಾಪಕರ ಸಂಘದಲ್ಲಿ ಪ್ರಸ್ತಾಪಿಸಿಲಾಗಿದೆ.
ಇದೆಲ್ಲದರ ಬಗ್ಗೆ ಚರ್ಚೆ ನಡೆಸಿ, ಸೂಕ್ತ ಪರಿಹಾರಗಳೊಂದಿಗೆ ತೆಲುಗು ಸಿನಿಮಾರಂಗ ಮರಳು ನಿರ್ಮಾಪಕರ ಸಂಘ ನಿರ್ಧಾರ ತೆಗೆದುಕೊಂಡಿದೆ. ಹಾಗಾಗಿ ಸದ್ಯ ಚಿತ್ರೀಕರ ಸ್ಥಗಿತ ಗೊಳಿಸಲು ನಿರ್ಧರಿಸಿದೆ. ಇದರಿಂದ ಸದ್ಯ ತೆಲುಗಿನಲ್ಲಿ ನಡೆಯುತ್ತಿರುವ ದೊಡ್ಡ ಸಿನಿಮಾಗಳ ಚಿತ್ರೀಕರಣ ಕೂಡ ಸ್ಥಗಿತಗೊಳ್ಳಲಿದ್ದು ಮತ್ತೆ ರಿಲೀಸ್ ಡೇಟ್ ನಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ.
