ನಾಗಚೈತನ್ಯ ಜೊತೆ ವಾಸವಿದ್ದ ಮನೆಯನ್ನು ದುಬಾರಿ ಬೆಲೆಗೆ ಮತ್ತೆ ಖರೀದಿಸಿದ ಸಮಂತಾ
ಸಮಂತಾ ಮಾಜಿ ಪತಿ ನಾಗಚೈತನ್ಯ ಜೊತೆ ವಾಸವಿದ್ದ ಮನೆಯನ್ನು ದುಬಾರಿ ಮನೆಗೆ ಖರೀದಿ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಬಗ್ಗೆ ಹಿರಿಯ ನಟ ಮತ್ತು ನಿರ್ಮಾಪಕ ಮುರಳಿ ಮೋಹನ್ ಅವರು ಬಹಿರಂಗ ಪಡಿಸಿದ್ದಾರೆ.
ಟಾಲಿವುಡ್ ಸ್ಟಾರ್ ನಟಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಮಂತಾ ರುತ್ ಪ್ರಭು ಮತ್ತು ನಾಗಚೈತನ್ಯ ಅವರಿಂದ ದೂರ ಆಗಿ ಅನೇಕ ತಿಂಗಳೇ ಕಳೆದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಬ್ಬರೂ ವಿಚ್ಛೇದನ ಪಡೆದು ದೂರ ದೂರ ಆದರು. ಆದರೂ ಈ ಸ್ಟಾರ್ ಜೋಡಿ ಪದೇ ಪದೇ ಸುದ್ದಿಯಲ್ಲಿರುತ್ತಾರೆ. ಸಮಂತಾ ಮನೆ ಖರೀದಿ ವಿಚಾರವಾಗಿ ಸುದ್ದಿಯಾಗಿದ್ದಾರೆ. ಹೌದು, ಸಮಂತಾ ಮಾಜಿ ಪತಿ ನಾಗಚೈತನ್ಯ ಜೊತೆ ವಾಸವಿದ್ದ ಮನೆಯನ್ನು ದುಬಾರಿ ಮನೆಗೆ ಖರೀದಿ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಬಗ್ಗೆ ಹಿರಿಯ ನಟ ಮತ್ತು ನಿರ್ಮಾಪಕ ಮುರಳಿ ಮೋಹನ್ ಅವರು ಬಹಿರಂಗ ಪಡಿಸಿದ್ದಾರೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, 'ಸಮಂತಾ ಮತ್ತು ನಾಗ ಚೈತನ್ಯ ಇಬ್ಬರು ಮದುವೆಯಾದಾಗ ಒಟ್ಟಿಗೆ ಸ್ವತಂತ್ರ ಮನೆಯನ್ನು ಖರೀದಿಸಿ ಅದರಲ್ಲಿ ವಾಸಿಸುತ್ತಿದ್ದರು' ಎಂದು ಮುರಳಿ ಹೇಳಿದರು. 'ಬಳಿಕ ಇಬ್ಬರು ಬೇರೆಯಾಗಲು ಮುಂದಾದಾಗ, ಅವರು ಮನೆಯನ್ನು ಮಾರಿ ತಮ್ಮ ತಮ್ಮ ದಾರಿಯಲ್ಲಿ ಸಾಗಿದರು. ಆದರೆ ಸಮಂತಾ ಅಲ್ಲಿಯೇ ಉಳಿಯಲು ಬಯಸಿದ್ದರಿಂದ ಅದನ್ನು ಮರಳಿ ಖರೀದಿಸಲು ನಿರ್ಧರಿಸದರು. ಹಾಗಾಗಿ ಕಷ್ಟಪಟ್ಟು ದುಡಿದು, ಒಂದಿಷ್ಟು ಹಣ ಹೊಂದಿಸಿ ಅದೇ ಮನೆಯನ್ನು ಹೆಚ್ಚಿನ ಬೆಲೆಗೆ ಮರುಖರೀದಿಸಿದರು.ಇದೀಗ ಅವರ ತಾಯಿ ಜೊತೆ ಸಮಂತಾ ಅಲ್ಲಿಯೇ ಇದ್ದಾರೆ' ಎಂದು ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಮಂತಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರೊಚ್ಚಿಗೆದ್ದಿದ್ದಾರೆ. ವಿಚ್ಛೇದನ ಬಳಿಕ ಸ್ಯಾಮ್ ಬಗ್ಗೆ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ನಾಗಚೈತನ್ಯರಿಂ ವಿಚ್ಛೇದನ ಪಡೆಯಲು ಸಮಂತಾ 250 ಕೋಟಿ ಜೀವನಾಂಶ ಕೇಳಿದರು, ಅಲ್ಲದೇ ಸಮಂತಾಗೆ ವಾಸವಿದ್ದ ಮನೆಯನ್ನು ಬಿಟ್ಟುಕೊಟ್ಟರು ಎನ್ನುವ ಸುದ್ದಿ ಹಬ್ಬಿದೆ. ಈ ಎಲ್ಲದರ ಬಗ್ಗೆಯೂ ಸ್ಪಷ್ಟನೆ ಬೇಕು ಎಂದು ಪಟ್ಟುಹಿಡಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಸಮಂತಾ ಸ್ವಾವಾಲಂಬಿ, ಯಾರನ್ನು ಅವಲಿಂಬಿಸಿಲಿಲ್ಲ ಎನ್ನುತ್ತಿದ್ದಾರೆ.
ಡಿವೋರ್ಸ್ ಬಳಿಕ ತುಂಬಾ ಕಷ್ಟವಾಯ್ತು; ನಾಗಚೈತನ್ಯರಿಂದ ದೂರಾದ ಬಗ್ಗೆ ಸಮಂತಾ ಮಾತು
ಇತ್ತೀಚೆಗೆ ಸಮಂತಾ ಕಾಫಿ ವಿತ್ ಕರಣ್‌ನಲ್ಲಿ ಕಾಣಿಸಿಕೊಂಡಾಗ, 250 ಕೋಟಿ ರೂ. ಜೀವನಾಂಶ ಪಡೆದಿದ್ದಾರೆ ಎಂಬ ವದಂತಿ ಬಗ್ಗೆ ಬಹಿರಂಗ ಪಡಿಸಿ ಐಟಿ ಇಲಾಖೆ ಪ್ರಶ್ನಿಸಿದಾಗ ತನಗೆ ಏನೂ ಸಿಗಲಿಲ್ಲ ಎಂಬುದನ್ನು ತೋರಿಸುತ್ತೇನೆ ಎಂದು ತಮಾಷೆ ಮಾಡಿದರು. ತಾನು ಮತ್ತು ನಾಗ್ ಸದ್ಯ ಕಠಿಣ ಭಾವನೆಗಳನ್ನು ಹೊಂದಿದ್ದೇವೆ ಎಂದು ಮಂಮಂತಾ ಹೇಳಿದರು.
ದೀಪಿಕಾ, ಆಲಿಯಾ, ಕತ್ರಿನಾರನ್ನು ಹಿಂದಿಕ್ಕಿದ ಸಮಂತಾ ನಂ.1 ನಟಿ
ಸಮಂತಾ ಸದ್ಯಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಶಾಕುಂತಲಂ, ಯಶೋಧ ಸಿನಿಮಾಗಳನ್ನು ಮುಗಿಸಿದ್ದಾರೆ. ಮಹಿಳಾ ಪ್ರಧಾನ ಸಿನಿಮಾವಾಗಿದ್ದು ಸಮಂತಾ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ವಿಜಯ್ ದೇವರಕೊಂಡ ಜೊತೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಇನ್ನು ಹಿಂದಿಯಲ್ಲಿ ಸಮಂತಾ ವೆಬ್ ಸೀರಿಸ್ ಒಂದಕ್ಕೆ ಸಹಿ ಹಾಕಿದ್ದಾರೆ. ಇನ್ನು ಹಿಂದಿ ಸಿನಿಮಾದ ಬಗ್ಗೆ ಇನ್ನು ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.