Asianet Suvarna News Asianet Suvarna News

ನಟ ನಾಗಾರ್ಜುನ ಜೊತೆ ರೊಮ್ಯಾನ್ಸ್‌, ಲಿಪ್‌ಲಾಕ್‌ ಮಾಡಲು ಕೋಟಿಯಲ್ಲಿ ಹಣ ಡಿಮ್ಯಾಂಡ್ ಮಾಡಿದ ನಟಿ ?

ವರ್ಷಗಳ ನಂತರ ರೊಮ್ಯಾನ್ಸ್‌ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿರುವ ನಟ ನಾಗಾರ್ಜುನ. ಡಿಮ್ಯಾಂಡ್ ಮಾಡಿದ  ಸಂಭಾವನೆ ಎಷ್ಟು ಗೊತ್ತಾ? 

Telugu Amala paul demands more money to shoot an intimate scene with Nagarjuna vcs
Author
Bangalore, First Published Oct 24, 2021, 10:49 AM IST
  • Facebook
  • Twitter
  • Whatsapp

ತೆಲುಗು ಚಿತ್ರರಂಗದಲ್ಲಿ (Tollywood) ಸದ್ಯದ ಪರಿಸ್ಥಿತಿಗೆ ನಟ ನಾಗಾರ್ಜುನ (Nagarjuna) ಕುಟುಂಬ ಸುದ್ದಿಯಲ್ಲಿದೆ. ಮದುವೆ (Marriage), ಡಿವೋರ್ಸ್ (Divorce) ಅಂತ ಗಾಸಿಪ್‌ನಲ್ಲಿರುವಾಗ ಹೊಸ ಸಿನಿಮಾವೊಂದನ್ನು ಸಹಿ ಮಾಡಿದ್ದಾರೆ.  ಚಿತ್ರಕ್ಕೆ 'ಘೋಸ್ಟ್‌' (Ghost) ಎಂದು ಹೆಸರಿಡಲಾಗಿದೆ. 'ಘೋಸ್ಟ್' ಸಿನಿಮಾ ಚಿತ್ರೀಕರಣ ಆರಂಭವಾಗಿದೆ.  ಒಂದು ವಾರಗಳ ಕಾಲ ಚಿತ್ರೀಕರಣವೂ ನಡೆದಿದೆ. ಆದರೆ Intimate ದೃಶ್ಯಗಳಿದೆ  ಎಂದು ತಿಳಿಯುತ್ತಿದ್ದಂತೆ ನಾಯಕಿ ಸಿನಿಮಾ ಕೈ ಬಿಟ್ಟಿದ್ದಾರೆ. 

ಸೊಸೆ ಸಮಂತಾ ದಾಂಪತ್ಯ ಸರಿ ಮಾಡಲು ಮಾವ ನಾಗಾರ್ಜುನ ಪ್ರಯತ್ನ

ಹೌದು! ನಟಿ ಕಾಜಲ್ (Kajal Aggarwal) 'ಘೋಸ್ಟ್‌' ಚಿತ್ರಕ್ಕೆ ಸಹಿ ಮಾಡಿ, ಚಿತ್ರೀಕರಣ ಕೂಡ ಆರಂಭಿಸಿದ್ದರು. ಆದರೆ ಲಿಪ್‌ಲಾಕ್‌ (Liplock) ಮತ್ತು ರೊಮ್ಯಾನ್ಸ್ (Romance) ದೃಶ್ಯಗಳು ಹೆಚ್ಚಿದೆ ಎಂದು ತಿಳಿಯುತ್ತಿದ್ದಂತೆ ನನಗೆ ಮದುವೆ ಆಗಿದೆ ಈಗ ಇದೆಲ್ಲಾ ಬೇಡ ಅನಿಸುತ್ತಿದೆ ಎಂದು ಹೊರ ನಡೆದಿದ್ದಾರೆ. ಆಗಲೇ ಆರಂಭವಾಗಿರುವ ಸಿನಿಮಾ ತಡೆಯುವುದು ಬೇಡ ಎಂದು ನಿರ್ಮಾಪಕರು ಹೊಸ ನಾಯಕಿಗೆ ಹುಡುಕಾಟ ಶುರು ಮಾಡಿದ್ದಾರೆ. ಕೆಲವು ಮೂಲಗಳಿಂದ ತಿಳಿದು ಬರುತ್ತಿರುವ ಮಾಹಿತಿ ಪ್ರಕಾರ ಅಮಲಾ ಅವರನ್ನು ಸಂಪರ್ಕಿಸಿದ್ದಾರಂತೆ.

Telugu Amala paul demands more money to shoot an intimate scene with Nagarjuna vcs

ತೆರೆ ಮೇಲೆ ನಾಗಾರ್ಜುನ ಯುವತಿಯ ಜೊತೆ ರೊಮ್ಯಾನ್ಸ್ ಮಾಡಿರುವುದು ಬಹಳ ಕಡಿಮೆ. ಹೆಚ್ಚಾಗಿ ತಮ್ಮ ವಯಸ್ಸಿನ ಆಸುಪಾಸು ಇರುವ ಯುವತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಅವರಿಗೆ ಮಾತ್ರವಲ್ಲದೆ ನಟಿಯರಿಗೂ ರೊಮ್ಯಾನ್ಸ್ ಮಾಡಲು ಕೊಂಚ ಇರಿಸು ಮುರಿಸು. ಚಿತ್ರಕಥೆ ಕೇಳಿ ಅಮಲಾ ಪೌಲ್ (Amala Paul) ಕೋಟಿಯಲ್ಲಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರೆ. ಲಿಪ್‌ಲಾಕ್‌ ದೃಶ್ಯಗಳು ಮತ್ತೆ ಹೆಚ್ಚಾದರೆ ಮತ್ತೆ ಹಣ ಡಿಮ್ಯಾಂಡ್ ಮಾಡುವುದಾಗಿ ಹೇಳಿದ್ದಾರಂತೆ!

ನಟ ನಾಗರ್ಜುನ ಮತ್ತು ಎರಡನೇ ಪತ್ನಿ ಅಮಲಾರ ಲವ್‌ಸ್ಟೋರಿ!

ಕನ್ನಡದ ನಿರ್ದೇಶನಕ ಪವನ್ ಕುಮಾರ್ (Pavan Kumar) ತೆಲುಗಿನಲ್ಲಿ ವೆಬ್ ಸೀರಿಸ್‌ (Web Series) ನಿರ್ದೇಶನ ಮಾಡುತ್ತಿದ್ದಾರೆ. ನಟಿ ಅಮಲಾ ಪೌಲ್‌ ನಟಿಸುತ್ತಿದ್ದಾರೆ. ಇದೊಂದು ಸೈಂಟಿಫಿಕ್ ಥ್ರಿಲ್ಲರ್ ಕಥೆ ಆಗಿದ್ದು 8 ಭಾಗಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಹೈದರಾಬಾದ್‌ನಲ್ಲಿ (Hyderabad) ಚಿತ್ರೀಕರಣ ಆರಂಭವಾಗಿದ್ದು ಅಮಲಾ ಪೌಲ್ ಪೊಲೀಸ್ ಅಧಿಕಾರಿಯಾಗಿದ್ದರೆ ಮುಖ್ಯ ಪಾತ್ರದಲ್ಲಿ ರಾಹುಲ್ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿ ಮತ್ತೊಂದು ವಿಶೇಷತೆ ಅಂದರೆ ನಿರ್ದೇಶಕ ಪವನ್‌ ಕೂಡ ಸ್ಪೆಷಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow Us:
Download App:
  • android
  • ios