ತೆಲುಗು ನಟ ವರುಣ್ ತೇಜ್ ಕೊನಿಡೆಲಾ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ನಟ ಆರೋಗ್ಯದ ಕುರಿತು ತಮಗೆ ಕೊರೋನಾ ಪಾಸಿಟಿವ್ ಬಂದಿರೋದಾಗಿ ಇನ್ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ.

ಕೆಲವು ಸಣ್ಣ ಲಕ್ಷಣಗಳಿದ್ದಾಗಲೇ ನನಗೆ ಕೊರೋನಾ ಪಾಸಿಟಿವ್ ಇರೋದು ದೃಢಪಟ್ಟಿದೆ. ನಾನು ಈಗ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಮನೆಯಲ್ಲೇ ಕ್ವಾರೆಂಟೈನ್ ಆಗಿದ್ದೇನೆ. ನಾನು ಬೇಗ ಹುಶಾರಾಗಿ ಮರಳುತ್ತೇನೆ. ನಿಮ್ಮೆಲ್ಲರ ಪ್ರೀತಿಗೆ ಥ್ಯಾಂಕ್ಸ್ ಎಂದು ಬರೆದಿದ್ದಾರೆ.

ನಟ ರಾಮ್‌ ಚರಣ್‌ಗೆ ಕೊರೋನಾ ಪಾಸಿಟಿವ್; ಮನೆಯಲ್ಲಿಯೇ ಕ್ವಾರಂಟೈನ್!

ಮಂಗಳವಾರ, ವರುಣ್ ಅವರ ಸೋದರಸಂಬಂಧಿ ರಾಮ್ ಚರಣ್ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, "ನನಗೆ ಕೊರೋನಾ ಪಾಸಿಟಿವ್ ಬಂದಿದೆ. ನನಗೆ ಯಾವುದೇ ಲಕ್ಷಣ ಕಂಡು ಬಂದಿಲ್ಲ, ಮನೆಯಲ್ಲೇ ಕ್ವಾರೆಂಟೈನ್ ಆಗಿದ್ದೇನೆ. ಶೀಘ್ರದಲ್ಲೇ ಗುಣಮುಖವಾಗಿ ಮತ್ತಷ್ಟು ಸ್ಟ್ರಾಂಗ್ ಆಗಿ ಹೊರಬರುತ್ತೇನೆ. ಈ ಹಿಂದೆ ನನ್ನ ಜೊತೆಗೇ ಇದ್ದವರೆಲ್ಲರನ್ನು ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಲು ಸೂಚಿಸುತ್ತೇನೆ. ಶೀಘ್ರದಲ್ಲೇ ನನ್ನ ಚೇತರಿಕೆಯ ಕುರಿತು ಹೆಚ್ಚಿನ ಮಾಹಿತಿ ಕೊಡುತ್ತೇನೆ ಎಂದಿದ್ದಾರೆ.

ವಧು ನಿಹಾರಿಕಾ ಕೊನಿಡೆಲಾ ಅವರ ಕ್ರಿಸ್ಮಸ್ ಪಾರ್ಟಿಯಲ್ಲಿ ಇವರಿಬ್ಬರು ಒಟ್ಟಿಗೆ ಕ್ರಿಸ್‌ಮಸ್ ಆಚರಿಸಿದ್ದರು. ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಕ್ರಿಸ್‌ಮಸ್ ಆಚರಣೆಯಲ್ಲಿ ಭಾಗಿಯಾಗಿದ್ದರು.