Asianet Suvarna News Asianet Suvarna News

3 ತಿಂಗಳ ನಂತರ ಮೆಗಾ ಸ್ಟಾರ್ ಕುಟುಂಬದ ಜೊತೆ ಕಾಣಿಸಿಕೊಂಡ ಸಾಯಿ ಧರ್ಮ್ ತೇಜ್!

ಮೊದಲ ಬಾರಿ ಇಡೀ ಕುಟುಂಬಸ್ಥರ ಜೊತೆ ಕಾಣಿಸಿಕೊಂಡ ಸಾಯಿ ಧರ್ಮ್ ತೇಜ್. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್...
 

Telugu actor Sai Dharma Tej celebrates Diwali with Chiranjeevi family vcs
Author
Bangalore, First Published Nov 6, 2021, 12:21 PM IST
  • Facebook
  • Twitter
  • Whatsapp

ತೆಲುಗು ಚಿತ್ರರಂಗದ (Tollywood) ಯುವ ನಟ, ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಸಹೋದರಿಯ ಪುತ್ರ ಸಾಯಿ ಧರ್ಮ್ ತೇಜ್ (Sai Dharma Tej) ಸೆಪ್ಟೆಂಬರ್ 10ರಂದು ಬೈಕ್ ಅಪಘಾತದಿಂದ (Bike Accident) ಗಂಭೀರವಾಗಿ ಗಾಯಗೊಂಡಿದ್ದರು. ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಯಾವುದೇ ರೀತಿ ಚಿಕಿತ್ಸೆಗೆ ಸ್ಪಂದಿಸದೆ ಕೋಮಾಗೆ (Coma) ಜಾರಿದ್ದರು. ಅದು ಮೆಗಾ ಕುಟುಂಬಕ್ಕೆ ಕರಾಳ ದಿನವಾಗಿತ್ತು.

ಭೀಕರ ರಸ್ತೆ ಅಪಘಾತದ ನಂತರ ಮೊದಲ ಬಾರಿ ಪ್ರತಿಕ್ರಿಯಿಸಿದ ನಟ ಸಾಯಿ ಧರ್ಮ ತೇಜ್!

ಕೋಮಾದಿಂದ ಹೊರ ಬಂದ ಸಾಯಿ ತೇಜ್ ಚಿಕಿತ್ಸೆಗೆ ಸ್ಪಂದಿಸಲು ಶುರು ಮಾಡಿದಾಗ ಅವರ ಇಡೀ ಕುಟುಂಬಸ್ಥರಲ್ಲಿ ಸಂಭ್ರಮವೋ ಸಂಭ್ರಮ. ಅಲ್ಲದೆ ಸಾಯಿ ನಟನೆಯ ರಿಪಬ್ಲಿಕ್ (Republic) ಸಿನಿಮಾ ಕೂಡ ಬಿಡುಗಡೆ ಮಾಡಲಾಗಿತ್ತು. ಸಿನಿಮಾ ಸೂಪರ್ ಹಿಟ್ ಆಗಿ ತೇಜ್ ನಟನೆ ಮೆಚ್ಚಿದ ಕಾರಣ ಆಸ್ಪತ್ರೆಯಿಂದಲೇ ಅಭಿಮಾನಿಗಳಿಗೆ ಧನ್ಯವಾಗಳನ್ನು ತಿಳಿಸಿದ್ದಾರೆ. ಅನಂತರ ಕೆಲ ದಿನಗಳಲ್ಲೇ ಡಿಸ್ಚಾರ್ಜ್ ಆಗಿ ಸಂಪೂರ್ಣವಾಗಿ ಗುಣ ಮುಖರಾಗುವವರೆಗೂ ಮನೆಯಲ್ಲಿಯೇ ಇದ್ದರು. 

Telugu actor Sai Dharma Tej celebrates Diwali with Chiranjeevi family vcs

ಎರಡು ಕಾರಣಗಳಿಂದ ಈ ವರ್ಷ ಮೆಗಾ ಕುಟುಂಬದಲ್ಲಿ ದೀಪಾವಳಿ (Diwali 2021) ಸಂಭ್ರಮ ಜೋರಾಗಿದೆ. ಮೊದಲ ಕಾರಣ ನಾಗ ಬಾಬು (Naga Babu) ಅವರ ಪುತ್ರಿ ನಿಹಾರಿಕಾ (Niharika Konidela) ಮತ್ತು ಚೈತನ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಆಚರಿಸಿಕೊಳ್ಳುತ್ತಿರುವ ಮೊದಲ ಹಬ್ಬವಿದು. ಮತ್ತೊಂದು ಕಾರಣ ಈ ವರ್ಷ ಆಚರಣೆಯಲ್ಲಿ ಸಾಯಿ ಧರ್ಮ್ ತೇಜ್ ಕೂಡ ಭಾಗಿಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ (Social Media) ಫೋಟೋ ಹಂಚಿಕೊಂಡು ಅವರು ತಮ್ಮ ಅಭಿಮಾನಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. 

ಬೈಕ್ ಅಪಘಾತ: 16 ದಿನವಾದರೂ ಕೋಮಾದಿಂದ ಹೊರ ಬಂದಿಲ್ಲ ಸಾಯಿ ಧರ್ಮ್ ತೇಜ್!

ಫೋಟೋದಲ್ಲಿ ಸಾಯಿ ಧರ್ಮ್ ತೇಜ್ ಜೊತೆ ಪವನ್ ಕಲ್ಯಾಣ್ (Pawan Kalyan), ನಾಗ ಬಾಬು, ವರುಣ್ ತೇಜ್ (Varun Tej), ರಾಮ್ ಚರಣ್ (Ram Charan), ಅಲ್ಲು ಅರ್ಜುನ್ (Allu Arjun), ವೈಷ್ಣವ್ ತೇಜ್ (Vaishnavi Tej) ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚಿರಂಜೀವಿ ಕೂಡ ಫೋಟೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. 'ನೀವು ತೋರಿಸುತ್ತಿರುವ ಪ್ರೀತಿಗೆ ನಾನು ಹೇಗೆ ಧನ್ಯವಾದಗಳನ್ನು ತಿಳಿಸಲಿ? ನಿಮ್ಮ ಪಾರ್ಥನೆ ನನಗೆ ಮತ್ತೆ ಜೀವ ಕೊಟ್ಟಿದೆ. ನಿಮ್ಮ ಪ್ರೀತಿಯ ಋಣ ನನ್ನ ಮೇಲಿದೆ' ಎಂದು ಸಾಯಿ ಧರ್ಮ್ ಟ್ಟೀಟ್ (Tweet) ಮಾಡಿದ್ದಾರೆ.

"

Follow Us:
Download App:
  • android
  • ios