ಟಾಲಿವುಡ್‌ ಮ್ಯಾನ್‌ ಆಫ್‌ ಬ್ರಿಲಿಯನ್ಸ್‌ ಎಂದೇ ಖ್ಯಾತರಾದ ನಟ ವಿಶಾಲ್ ಜೀವನ ದಾರ ಹರಿದ ಗಾಳಿಪಟದಂತಾಗಿದೆ. ವರ್ಷದ ಹಿಂದೆಯೇ ಕುಟುಂಬಸ್ಥರ ಸಮ್ಮುಖದಲ್ಲಿ ಪ್ರೀತಿಸಿದ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಅಕ್ಟೋಬರ್‌ನಲ್ಲಿ ದಾಂಪತ್ಯ ಜೇವನಕ್ಕೆ ಕಾಲಿಡುವುದಾಗಿ ತಿಳಿಸಿದ್ದರು. ಆದರೆ ಅದು ಮನಸ್ತಾಪಗಳಿಂದ ಮುರಿದು ಬಿದ್ದಿತ್ತು.

 

ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಇರುವ ಅನಿಶಾ ತಮ್ಮ ಪ್ರೀತಿಯ ವಿಚಾರವನ್ನು ಎಂದಿಗೂ ಬಹಿರಂಗವಾಗಿಯೇ ಇಡುತ್ತಿದ್ದರು. ಮನಸ್ತಾಪಗಳಿಂದ ನಿಶ್ಚಿತಾರ್ಥ ಮುರಿದ ನಂತರ ಆ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಮಾಡಿದ್ದಾರೆ.

ಮದುವೆಗೆ ಒಂದು ತಿಂಗಳಿರುವಾಗಲೇ ಖ್ಯಾತ ನಟನ ಬಾಳಲ್ಲಿ ಬಿರುಕು!

ಅಷ್ಟೇ ಅಲ್ಲದೇ ನಿಶ್ಚಿತಾರ್ಥ ಆದ ಕೆಲ ದಿನಗಳಲ್ಲೇ ಶೂಟಿಂಗ್ ಶುರು ಮಾಡಿ ಸಾಹಸ ದೃಶ್ಯಕ್ಕೆ ಕೈ ಹಾಕಿದ ವಿಶಾಲ್ ಗಂಭೀರವಾಗಿ ಕೈ-ಕಾಲುಗಳನ್ನು ಪೆಟ್ಟು ಮಾಡಿಕೊಂಡಿದ್ದರು. ಫಿಕ್ಸ್ ಆದ ಮದುವೆಯಿಂದಲೇ ವಿಶಾಲ್ ಲೈಫ್‌ನಲ್ಲಿ ಇಂತಹದ್ದೆಲ್ಲಾ ಆಗುತ್ತಿರುವುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಇದನ್ನೆಲ್ಲ ಕೇಳಲಾಗದೆ ವಿಶಾಲ್ ತಂದೆ ಜೆಕೆ ರೆಡ್ಡಿ ಸದ್ಯದಲ್ಲೇ ವಿಶಾಲ್ ಮದುವೆ ದಿನಾಂಕ ನಿಗದಿಪಡಿಸುತ್ತೇನೆ ಎಂದು ಹೇಳಿದ್ದಾರೆ.