Asianet Suvarna News Asianet Suvarna News

ತೆಲುಗು ಹಾಸ್ಯ ನಟ ಪೊಸಾನಿ ಕೃಷ್ಣಗೆ ಕೊರೋನಾ ಪಾಸಿಟಿವ್!

ಹಿರಿಯ ಕಲಾವಿದ ಪೊಸಾನಿ ಕೃಷ್ಣ ಮುರುಳಿ ಅವರಿಗೆ ಕೊರೋನಾ ಪಾಸಿಟಿವ್ ಆಗಿದೆ. 

Telugu Actor Posani Krishna murali tests positive for covid19 vcs
Author
Bangalore, First Published Aug 1, 2021, 11:03 AM IST
  • Facebook
  • Twitter
  • Whatsapp

ಟಾಲಿವುಡ್ ಹಿರಿಯ ಹಾಸ್ಯ ನಟ ಪೊಸಾನಿ ಕೃಷ್ಣ ಮುರಳಿ ಹಾಗೂ ಅವರ ಕುಟುಂಬದವರಿಗೆ ಕೊರೋನಾ ಸೋಂಕು ತಗುಲಿದೆ. ಇಡೀ ಕುಟುಂಬ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

'ನಾನು ಮತ್ತು ನನ್ನ ಕುಟುಂಬದವರಿಗೆ ಕೊರೋನಾ ಸೋಂಕು ತಗುಲಿದೆ. ದಯವಿಟ್ಟು ಕಲಾವಿದರು, ನಿರ್ದೇಶಕರು ಹಾಗೂ ನಿರ್ಮಾಪಕರು ನನ್ನನ್ನು ಕ್ಷಮಿಸಬೇಕು. ನನ್ನ ಆರೋಗ್ಯ ಪರಿಸ್ಥಿತಿಯಿಂದ ಸಿನಿಮಾ ಚಿತ್ರೀಕರಣ ಮುಂದೂಡಬೇಕಾಗಿದೆ. ನಮ್ಮ ವೀಕ್ಷಕರು, ಚಿತ್ರರಂಗದವರು ಮತ್ತು ಸ್ನೇಹಿತರು ಪ್ರೀತಿ ಮತ್ತು ಪ್ರಾರ್ಥನೆಯಿಂದ ಆದಷ್ಟು ಬೇಗ ಗುಣಮುಖನಾಗಿ ಚಿತ್ರೀಕರಣಕ್ಕೆ ಮರಳುವೆ' ಎಂದು ಪೊಸಾನಿ ಕೃಷ್ಣ ಹೇಳಿದ್ದಾರೆ. 

Telugu Actor Posani Krishna murali tests positive for covid19 vcs

'ಕೋವಿಡ್‌ ಸಾವು ಸಂಖ್ಯೆ ಶೇ.21ರಷ್ಟು ಏರಿಕೆ: ಇದು ಎಚ್ಚರಿಕೆ ಗಂಟೆ!'

ಸುಮಾರು 150ಕ್ಕೂ ಸಿನಿಮಾಗಳಲ್ಲಿ ಅಭಿನಯಿಸಿರುವ ಪೊಸಾನಿ ಪ್ರತಿ ಚಿತ್ರದಲ್ಲಿ ಆಯ್ಕೆ ಮಾಡಿಕೊಂಡಿರುವ ಪಾತ್ರಗಳು ಅಭಿಮಾನಿಗಳ ಮನಸ್ಸಿಗೆ ಹತ್ತಿರವಾಗಿದೆ. ಸುಮಾರು 100 ಚಿತ್ರಗಳಿಗೆ ಚಿತ್ರಕಥೆಗಾರನಾಗಿ ಕೆಲಸ ಮಾಡಿದ್ದಾರೆ. ಹೆಲ್ಮೆಡಾ ಮತ್ತು ಶ್ರಾವಣ ಮಾಸ  ಚಿತ್ರದ ಮೂಲಕ ನಿರ್ದೇಶಕನಾಗಿ ಗುರುತಿಸಿಕೊಂಡು.

Follow Us:
Download App:
  • android
  • ios