Asianet Suvarna News Asianet Suvarna News

'ಕೋವಿಡ್‌ ಸಾವು ಸಂಖ್ಯೆ ಶೇ.21ರಷ್ಟು ಏರಿಕೆ: ಇದು ಎಚ್ಚರಿಕೆ ಗಂಟೆ!'

* ಒಂದೇ ವಾರದಲ್ಲಿ ಸಾವು ಏರಿಕೆಗೆ ಕಳವಳ

* ಕೋವಿಡ್‌ ಸಾವು ಸಂಖ್ಯೆ ಶೇ.21ರಷ್ಟು ಏರಿಕೆ

* ಇದು ಎಚ್ಚರಿಕೆ ಗಂಟೆ: ಡಬ್ಲ್ಯುಎಚ್‌ಒ

WHO says global Covid deaths up by 21pc cases could exceed 200 mn in two weeks pod
Author
Bangalore, First Published Jul 30, 2021, 1:42 PM IST
  • Facebook
  • Twitter
  • Whatsapp

ಜಿನೇವಾ(ಜು.30): ಜಾಗತಿಕವಾಗಿ ಕೊವಿಡ್‌ ಸಾವಿನ ಸಂಖ್ಯೆ ಕಳೆದ ವಾರ ತೀಕ್ಷ$್ಣವಾಗಿ ಹೆಚ್ಚಾಗಿದೆ. ಜುಲೈ 19 ರಿಂದ 25ರವರೆಗೆ ಸಾವಿನ ಸಂಖ್ಯೆಯಲ್ಲಿ ಶೇ.21ರಷ್ಟುಹೆಚ್ಚಾಗಿದೆ. ಇದು ಪ್ರಪಂಚದ ಎಲ್ಲಾ ದೇಶಗಳಿಗೂ ಎಚ್ಚರಿಕೆಯ ಗಂಟೆಯಾಗಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್‌ನಿಂದಾಗಿ 69 ಸಾವಿರಕ್ಕೂ ಅಧಿಕ ಸಾವುನೋವುಗಳು ಜಗತ್ತಿನಾದ್ಯಂತ ಸಂಭವಿಸಿದೆ. ಇದು ಹಿಂದಿನ ವಾರಕ್ಕಿಂತ ಶೇ.21 ಅಧಿಕ. ಹೆಚ್ಚಿನ ಸಂಖ್ಯೆಯಲ್ಲಿ ಸಾವು ಅಮೆರಿಕ ಮತ್ತು ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಸಂಭವಿಸಿವೆ ಎಂದಿದೆ.

ಇದೇ ವೇಳೆ, ಜಾಗತಿಕವಾಗಿ ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ 19,58,65,047ಕ್ಕೆ ಹೆಚ್ಚಿದ್ದು 41,85,754 ಲಕ್ಷ ಜನ ಸಾವನ್ನಪ್ಪಿದ್ದಾರೆ.

Follow Us:
Download App:
  • android
  • ios