ಮದುವೆ ಬಳಿಕ ಪಾಲಕರನ್ನು ಬಿಟ್ಟು ಬೇರೆ ಮನೆ ಮಾಡಿದ ನಟ; ನಾಗಶೌರ್ಯ ಪತ್ನಿಯೂ ಆದ ಆ ಕನ್ನಡತಿ ಯಾರು?

ತೆಲುಗು ನಟ ನಾಗಶೌರ್ಯ ಅವರು ಅನುಷಾರನ್ನು ಮದುವೆಯಾಗಿದ್ದಾರೆ. ಮಂಗಳೂರು ಮೂಲದ ಅನುಷಾ ಪಕ್ಕಾ ಕನ್ನಡತಿ. ಮದುವೆಯಾದಬಳಿಕ ನಾಗಶೌರ್ಯ ಬೇರೆ ಮನೆ ಮಾಡಿಕೊಂಡಿದ್ದಾರೆ. 
 

telugu actor Naga Shaurya lives separately from his father mother after marrying kannada girl Anusha Shetty

ಮಂಗಳೂರು ಮೂಲದ ಅನುಷಾ ಶೆಟ್ಟಿ ಅವರನ್ನು ನಾಗಶೌರ್ಯ ಮದುವೆಯಾಗಿದ್ದಾರೆ. ಮದುವೆ ಬಳಿಕ ಅವರು ತಂದೆ-ತಾಯಿ ಮನೆಯಿಂದ ಹೊರಗಡೆ ಬಂದು ಬೇರೆ ಮನೆ ಮಾಡಿದ್ದಾರಂತೆ. ಈ ಬಗ್ಗೆ ನಾಗಶೌರ್ಯ ತಾಯಿ ಉಷಾ ಹೇಳಿದ್ದಾರೆ. 

ಉಷಾ ಹೇಳಿದ್ದೇನು? 
" ʼಸಂಸಾರಂ ಚದುರಂಗಂʼ ಸಿನಿಮಾದಲ್ಲಿ ಸುಹಾಸಿನಿ ಹೇಳಿದ ಮಾತು ನನಗೆ ತುಂಬ ಇಷ್ಟ ಆಯ್ತು. "ನಿತ್ಯ ಒಟ್ಟಿಗೆ ಇದ್ದುಕೊಂಡು ಬೇಸರದಲ್ಲಿ ಇರೋದಕ್ಕಿಂತ, ವಾರಕ್ಕೊಮ್ಮೆ ಭೇಟಿಯಾದರೂ ಕೂಡ ಖುಷಿಯಾಗಿ ಆರಾಮಾಗಿರಬೇಕು" ಎಂದು ಸುಹಾಸಿನಿ ಹೇಳುತ್ತಾರೆ. ನಾಗಶೌರ್ಯ ಎರಡನೇ ಕ್ಲಾಸ್‌ನಲ್ಲಿದ್ದಾಗಲೇ ನನಗೆ ಅಮ್ಮ, ನಾನು ಮದುವೆಯಾದಮೇಲೆ ನಿನ್ನ ಜೊತೆಗೆ ಇರೋದಿಲ್ಲ ಎಂದು ಹೇಳಿದ್ದನು. ಯಾಕೆ ಅಂತ ನಾನು ಪ್ರಶ್ನೆ ಮಾಡಿದಾಗ "ಒಂದೇ ಮನೆಯಲ್ಲಿ ಇಬ್ಬರು ಒಳ್ಳೆಯ ವ್ಯಕ್ತಿಗಳು ಇರಬಾರದು" ಎಂದು ಹೇಳಿದ್ದನು. ನಾನು ಒಳ್ಳೆಯವನು, ನಿನ್ನ ಹೆಂಡ್ತಿ ಒಳ್ಳೆಯವಳು ಅಂತ ಹೇಗೆ ಗೊತ್ತು ಅಂತ ತಮಾಷೆಗೆ ಹೇಳಿದ್ದೆ. ಈಗ ನಾಗಶೌರ್ಯ ಮದುವೆಯಾದಮೇಲೆ ಅವನು ಬೇರೆ ಮನೆ ಮಾಡಿಕೊಂಡಿದ್ದಾನೆ. ಅದು ಬಿಟ್ಟರೆ ಬೇರೆ ಏನೂ ಇಲ್ಲ” ಎಂದಿದ್ದಾರೆ ಉಷಾ. 

8 ವರ್ಷ, 24 ಸ್ಟಾರ್ ಸಿನಿಮಾ; Rashmika Mandanna ಹೇಳೋ ಆ ಧಾರ್ಮಿಕ ಮಂತ್ರದಿಂದಲೇ ಇಷ್ಟು ಯಶಸ್ಸು ಸಿಕ್ತಾ?

ಉಷಾ ಹೇಳಿದ್ದೇನು? 
“ಎಲ್ಲರಿಗೂ ಅವರ ಪ್ರೈವೆಸಿ ಇರಬೇಕು. ಈಗ ನಾಗಶೌರ್ಯ ಸ್ನೇಹಿತರು ಬರಬಹುದು, ಆಗ ಕಂಫರ್ಟ್‌ ಆಗಿರಬೇಕು. ನಮ್ಮ ಮನೆಯಲ್ಲಿ ಎಲ್ಲರೂ ಇದ್ದಾರೆ ಅಂತ ನನ್ನ ಸ್ನೇಹಿತರು ಬರದೆ ಇರಬಹುದು. ನನ್ನ ಇಬ್ಬರೂ ಸೊಸೆ ನಿಜಕ್ಕೂ ಬಂಗಾರ. ಒಂದು ಸೊಸೆ ಮಮ್ಮ, ಇನ್ನೊಂದು ಮಮ್ಮ ಅಂತಲೇ ಕರೆಯುತ್ತಾರೆ. ಮೊದಲಿನಿಂದಲೂ ಅವರು ಹೀಗೆ ಕರೆಯುತ್ತಿದ್ದಾರೆ. ಸೊಸೆಯಂದಿರು ನಮ್ಮ ಪ್ರೀತಿ ಮಾಡುತ್ತಿರುವಂತೆ ನಾವು ಇರಬೇಕು ಎಂದು ಬಯಸುತ್ತೇವೆ" ಎಂದು ನಾಗಶೌರ್ಯ ತಾಯಿ ಹೇಳಿದ್ದಾರೆ. 

ಉಷಾ ಹೇಳಿದ್ದೇನು? 
"ಬೆಂಗಳೂರಿನಲ್ಲಿ ನಾಗಶೌರ್ಯ ಮದುವೆ ನಡೆಯಿತು. ನಾಗಶೌರ್ಯ ಪತ್ನಿಯೇ ಎಲ್ಲವನ್ನು ನಿಭಾಯಿಸಿದಳು. ಬೆಂಗಳೂರಿನಲ್ಲಿ ಉದ್ಯಮ ಮಾಡಿಕೊಂಡು, ನಾಗಶೌರ್ಯನನ್ನು ನೋಡಿಕೊಳ್ಳುತ್ತಿದ್ದಾಳೆ. ನಾನು ಸಹಾಯ ಏನಾದರೂ ಬೇಕಾ ಅಂತ ಕೇಳಿದ್ರೆ ಅವಳು ಬೇಡ, ನೀವೂ ಬ್ಯುಸಿ ಇರ್ತೀರಾ ಅಂತ ಹೇಳುತ್ತಾಳೆ. ನನ್ನ ಮಗ ಹೀರೋ ಆಗಿದ್ದಾನೆ, ಸೆಲೆಬ್ರಿಟಿ ಎನ್ನುವ ಮನೋಭಾವ ಇಲ್ಲ. ನನ್ನ ದೊಡ್ಡ ಮಗನೇ ತರಲೆ, ನಾಗಶೌರ್ಯ ತುಂಬ ಡೀಸೆಂಟ್‌ ವ್ಯಕ್ತಿ. ನನ್ನ ಮೊದಲನೇ ಮಗನ ಮೊಮ್ಮಗಳು ಕೂಡ ಸಿಕ್ಕಾಪಟ್ಟೆ ಕೋಪ, ಹಠ" ಎಂದು ನಾಗಶೌರ್ಯ ತಾಯಿ ಹೇಳಿದ್ದಾರೆ. 

ಸದ್ದಿಲ್ಲದೆ ದರ್ಶನ್ ಭೇಟಿ ಮಾಡಿದ ತೆಲುಗಿನ ಖ್ಯಾತ ನಟ ನಾಗಶೌರ್ಯ: ಜೈಲಿನಲ್ಲಿ ನಡೆದ ಮಾತುಕತೆಯೇನು?

ನಾಗಶೌರ್ಯ ತಾಯಿ ಹೇಳಿದ್ದೇನು? 
"ನನ್ನ ಮೊದಲ ಮಗ ಅಮೆರಿಕದಲ್ಲಿದ್ದಾನೆ. ಇಲ್ಲಿಯೇ ಉದ್ಯಮ ಇರೋದರಿಂದ ಹೆಚ್ಚು ಕಾಲ ಅಲ್ಲಿಗೆ ಹೋಗೋದಿಲ್ಲ. ನಿತ್ಯವೂ ವಿದೇಶದಿಂದ ಯಾರಾದರೂ ಬಂದು ನಮ್ಮ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಾರೆ. ಅಮೆರಿಕದಲ್ಲಿಯೂ ನಮಗೆ ಈ ಉದ್ಯಮ ಮಾಡುವ ಅವಶ್ಯಕತೆ ಇದೆ" ಎಂದು ನಾಗಶೌರ್ಯ ತಾಯಿ ಹೇಳಿದ್ದಾರೆ. 

2022ರಲ್ಲಿ ನಾಗಶೌರ್ಯ ಅವರು ಅನುಷಾ ಜೊತೆಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮದುವೆಯಾಗಿದ್ದರು. ಖಾಸಗಿಯಾಗಿ ಈ ಮದುವೆ ನಡೆದಿತ್ತು. ಈ ಮದುವೆಯಲ್ಲಿ ಎರಡು ಕುಟುಂಬದವರು, ಸ್ನೇಹಿತರು ಭಾಗಿಯಾಗಿದ್ದರು. 

36 ವರ್ಷದ ನಾಗಶೌರ್ಯ ಅವರು ಹೆಚ್ಚು ರೊಮ್ಯಾಂಟಿಕ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ಇವರ ಪತ್ನಿ ಅನುಷಾ ಇಂಟಿರಿಯರ್‌ ಡಿಸೈನರ್‌ ಆಗಿದ್ದಾರೆ.


 

Latest Videos
Follow Us:
Download App:
  • android
  • ios