8 ವರ್ಷ, 24 ಸ್ಟಾರ್ ಸಿನಿಮಾ; Rashmika Mandanna ಹೇಳೋ ಆ ಧಾರ್ಮಿಕ ಮಂತ್ರದಿಂದಲೇ ಇಷ್ಟು ಯಶಸ್ಸು ಸಿಕ್ತಾ?
ನಟಿ ರಶ್ಮಿಕಾ ಮಂದಣ್ಣ ಅವರು 8 ವರ್ಷಗಳಲ್ಲಿ 24 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಷ್ಟು ಬೇಗ ಅವರು ಸ್ಟಾರ್ ನಟರ ಸಿನಿಮಾಗಳಲ್ಲಿ ಹೀರೋಯಿನ್ ಆದರು. ರಶ್ಮಿಕಾ ಮಂದಣ್ಣ ಹೇಳುವ ಮಂತ್ರದಿಂದಲೇ ಈ ಯಶಸ್ಸು ಸಿಕ್ಕಿತಾ?

2016ರಲ್ಲಿ ʼಕಿರಿಕ್ ಪಾರ್ಟಿʼ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣಗೆ ಸಿಕ್ಕಿರೋ ಯಶಸ್ಸು ಎಂಥದ್ದು ಎನ್ನೋದನ್ನು ಇಂದು ಇಡೀ ಭಾರತವೇ ನೋಡಿದೆ. ಅತೀ ಶೀಘ್ರದಲ್ಲಿ ಇಷ್ಟು ಯಶಸ್ಸು ಸಿಗಲು ರಶ್ಮಿಕಾ ಮಂದಣ್ಣ ಅದೃಷ್ಟವಂತೆ ಅಂತ ಕೆಲವರು ಅಂದುಕೊಂಡರೆ, ಇನ್ನೂ ಕೆಲವರು ಅವರ ಪ್ರಯತ್ನ, ಕಠಿಣ ಪರಿಶ್ರಮ ಎನ್ನುತ್ತಾರೆ. ಈಗ ರಶ್ಮಿಕಾ ಅವರು ಮಂತ್ರದ ಬಗ್ಗೆ ಹೇಳಿದ್ದು, ಇದು ಕೂಡ ಅವರ ಯಶಸ್ಸಿನ ಸೂತ್ರ ಆಗಿರಬಹುದಾ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.
ಧಾರ್ಮಿಕ ಪ್ರಕ್ರಿಯೆ!
ನಟ ವಿಕ್ಕಿ ಕೌಶಲ್ ಜೊತೆಗೆ ರಶ್ಮಿಕಾ ಅವರು Chhaava ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಚಾರದ ವೇಳೆ ಸಿನಿಮಾ ರಿಲೀಸ್‌ಗೂ ಮುನ್ನ ನೀವು ಯಾವುದಾದರೂ ಧಾರ್ಮಿಕ ಕ್ರಿಯೆ ಅಥವಾ ನಿಯಮವನ್ನು ಪಾಲಿಸುತ್ತೀರಾ ಎಂದು ಪ್ರಶ್ನೆ ಕೇಳಲಾಗಿತ್ತು. ಆಗ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಅವರು ತಾವು ಪಾಲಿಸುವ ಧಾರ್ಮಿಕ ಪ್ರಕ್ರಿಯೆ ಬಗ್ಗೆ ಮಾತನಾಡಿದ್ದಾರೆ.
ರಶ್ಮಿಕಾ ಮಂದಣ್ಣ ಚಿತ್ರರಂಗದ ಪಯಣ; ಸಕ್ಸಸ್ ಸಿನಿಮಾ ಎಷ್ಟು ಫ್ಲಾಫ್ ಸಿನಿಮಾ ಎಷ್ಟು?
ರಶ್ಮಿಕಾ ಮಂದಣ್ಣ ಏನಂದ್ರು?
"ನಾನು ತುಂಬ ಆಧ್ಯಾತ್ಮಿಕವನ್ನು ನಂಬುತ್ತೇನೆ. ನಾನು ದೇವರು, ಕರ್ಮ, ಹಣೆಬರಹವನ್ನು ನಂಬುತ್ತೇನೆ. ನಾನು ನಿತ್ಯವೂ ಒಂದು ಮಂತ್ರವನ್ನು ಹೇಳುತ್ತೇನೆ. ನನ್ನ ಜೀವನದಲ್ಲಿ ಒಂದು ಶಕ್ತಿ ಮುನ್ನಡೆಸುತ್ತಿದೆ ಎಂದು ನಂಬಿದ್ದೇನೆ. ಅದೇ ನನ್ನನ್ನು ಮುಂದೆ ಹೋಗುವಂತೆ ಮಾಡಿದೆ ಎಂದುಕೊಂಡಿರುವೆ” ಎಂದು ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ.
ಛಾವಾ ನಿರ್ದೇಶಕರಿಗೆ ರಶ್ಮಿಕಾ ಮಂದಣ್ಣ ಏನಂದ್ರು?: ಸಿನಿಮಾ ಸೆಟ್‌ನ ಫೋಟೋಗಳನ್ನು ಶೇರ್ ಮಾಡಿದ್ಯಾಕೆ?
8 ವರ್ಷಗಳಲ್ಲಿ ಇಪ್ಪತ್ನಾಲ್ಕು ಸಿನಿಮಾ!
ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ʼಕಿರಿಕ್ ಪಾರ್ಟಿʼ, ಪುನೀತ್ ರಾಜ್‌ಕುಮಾರ್ ಜೊತೆಗೆ ʼಅಂಜನಿ ಪುತ್ರʼ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ʼಚಮಕ್ʼ, ದರ್ಶನ್ ಜೊತೆಗೆ ʼಯಜಮಾನʼ, ಧ್ರುವ ಸರ್ಜಾ ಜೊತೆಗೆ ʼಪೊಗರುʼ ಸಿನಿಮಾದಲ್ಲಿ ನಟಿಸಿದರು. ಇದರ ಜೊತೆಗೆ ನಾಗಶೌರ್ಯ ಜೊತೆಗೆ ʼಚಲೋʼ, ವಿಜಯ್ ದೇವರಕೊಂಡ ಜೊತೆಗೆ ʼಗೀತಾ ಗೋವಿಂದಂʼ, ʼಡಿಯರ್ ಕಾಮ್ರೇಡ್ʼ, ಅಮಿತಾಭ್ ಬಚ್ಚನ್ ಜೊತೆಗೆ ʼಗುಡ್ ಬಾಯ್ʼ ಸೇರಿದಂತೆ ʼಸೀತಾರಾಮಂʼ, ‘ವಾರಿಸುʼ, ʼಪುಷ್ಪʼ, ʼಪುಷ್ಪ 2ʼ, ರಣಬೀರ್ ಕಪೂರ್ ಜೊತೆಗೆ ‘Animal’, ಮಿಷನ್ ಮಜ್ನು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದರೆ ಕಳೆದ ಎಂಟು ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ಅವರು ನಾಲ್ಕು ಭಾಷೆಗಳಲ್ಲಿ ಒಟ್ಟೂ ಇಪ್ಪತ್ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ.
'ಬ್ರೇಕಪ್ ಆದ ಬೇಸರಕ್ಕೆ ಬಿಕಿನಿ ಬಾಡಿ ಮಾಡಿದೆ, ಬ್ರೇಕ್ ಬೇಕು ಅಂತ ಬಾಲಿಗೆ ಹೋದೆ': Actress Namratha Gowda
ರಶ್ಮಿಕಾ ಮಂದಣ್ಣ ಅವರು ʼಪೊಗರುʼ ನಂತರದಲ್ಲಿ ಕನ್ನಡ ಸಿನಿಮಾಗಳತ್ತ ಮುಖ ಮಾಡಲೇ ಇಲ್ಲ. ಆರಂಭದಲ್ಲಿ ಒಪ್ಪಿಕೊಂಡ ಸಿನಿಮಾಗಳಿಂದಲೂ ಅವರು ಹೊರಗಡೆ ಬಂದರು. ಇನ್ನೊಂದು ಕಡೆ ಅವರು ಕನ್ನಡ ಚಿತ್ರರಂಗದ ಜೊತೆ ಅಷ್ಟು ಸಂಪರ್ಕದಲ್ಲಿಯೂ ಇಲ್ಲ ಎನ್ನಲಾಗಿದೆ.
ರಶ್ಮಿಕಾ ಮಂದಣ್ಣರನ್ನು ಹೊಗಳಿದ ವಿಕ್ಕಿ ಕೌಶಲ್!
ರಶ್ಮಿಕಾ ಮಂದಣ್ಣ ಬಗ್ಗೆ ವಿಕ್ಕಿ ಕೌಶಲ್ ಅವರು ಮಾತನಾಡಿ, “ರಶ್ಮಿಕಾ ತುಂಬ ಪ್ರೊಫೆಶನಲ್. ಸರಿಯಾದ ಟೈಮ್‌ಗೆ ಸೆಟ್‌ಗೆ ಬರುತ್ತಾರೆ, ಅಷ್ಟೇ ಅಲ್ಲದೆ ಮನಸ್ಸಿನಲ್ಲಿ ಎಷ್ಟೇ ಬೇಸರ ಇದ್ದರೂ ಕೂಡ ಅವರು ತೋರಿಸಿಕೊಳ್ಳೋದಿಲ್ಲ. ಇನ್ನೊಂದು ಕಡೆ ಯಾವಾಗಲೂ ಅವರು ನಗುತ್ತಾರೆ” ಎಂದು ಹೊಗಳಿದ್ದರು.