'ದೊಂಗ ದೊಂಗಾಡಿ' ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ಖ್ಯಾತ ನಟ ಮೋಹನ್ ಬಾಬು ಹಾಗೂ ನಿರ್ಮಲಾ ದೇವಿ ಪುತ್ರ ಮಂಚು ಮನೋಜ್ ಹಿಟ್ ಚಿತ್ರಗಳನ್ನು ನೀಡುತ್ತಾ ಪ್ರೇಕ್ಷಕರನ್ನು ಅದ್ಭುತವಾಗಿ ಮನೋರಂಜಿಸುವ ನಟನ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ.

2015 ರಂದು ತನ್ನ ಹುಟ್ಟುಹಬ್ಬದಂದೇ ಪ್ರೀತಿಸುತ್ತಿದ್ದ ಹುಡುಗಿ ಪ್ರಣತಿ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರ ಮದುವೆಗೆ ಟಾಲಿವುಡ್ ಹಾಗೂ ಕಾಲಿವುಡ್ ಸ್ಟಾರ್ ನಟ-ನಟಿಯರು ಸಾಕ್ಷಿಯಾಗಿದ್ದರು. ಕಾರಣಾಂತರಗಳಿಂದ ತಮ್ಮ ವೈವಾಹಿಕ ಜೀವನ ಸರಿ ಹೋಗದ ಕಾರಣ ಇಬ್ಬರು ಒಪ್ಪಿಗೆ ಮೇಲೆ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ. ಇದರ ಬಗ್ಗೆ ಮಂಚು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಮುರಿದುಬಿದ್ದ ನಟನ ಮದುವೆ; ವದಂತಿಗೆ ಬ್ರೇಕ್ ಹಾಕಿದ ತಂದೆ!

'Hello everyone, ನಿಮ್ಮ ಜೊತೆ ನನ್ನ ವೈಯಕ್ತಿಕ ಹಾಗೂ ವೃತಿಜೀವನದ ಬಗ್ಗೆ ಒಂದು ವಿಚಾರ ಹಂಚಿಕೊಳ್ಳಬೇಕಿದೆ. ನನ್ನ ವೈಯಕ್ತಿಕ ಜೀವನ ಅಂತ್ಯಗೊಂಡಿದೆ. ನಮಗೆ ಡಿವೋರ್ಸ್ ಸಿಕ್ಕಿದೆ. ನಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದು ಆದಷ್ಟು ಅರ್ಥ ಮಾಡಿಕೊಂಡು ಸರಿ ಮಾಡಲು ಪ್ರಯತ್ನಿಸಿದೆವು. ಯಾವುದೇ ರೀತಿಯ ಬದಲಾವಣೆ ಕಾಣದ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಮನಸ್ಸು ಸರಿ ಇಲ್ಲದ ಕಾರಣ ಸಿನಿಮಾಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ನನ್ನ ಕಷ್ಟ ಸಮಯದಲ್ಲಿ ನನ್ನ ನಂಬಿ ಕೈಹಿಡಿದ ಜನರಿಗೆ ಧನ್ಯವಾದಗಳು. ಇನ್ನು ಮುಂದೆ ನಿಮ್ಮನ್ನು ರಂಜಿಸಲು ನಾನು ರೆಡಿಯಾಗಿರುವೆ ' ಎಂದು ಒಂದು ಪುಟ ಪತ್ರ ಬರೆದಿದ್ದಾರೆ.