Asianet Suvarna News Asianet Suvarna News

ವಿಷ ಹಾಕಿದ್ರು, ಕಾರಿನ ಬ್ರೇಕ್ ಫೇಲ್ ಮಾಡಿದ್ರು; ಕೊಲೆ ಪ್ರಯತ್ನದ ಬಗ್ಗೆ ಶಾಕಿಂಗ್ ವಿಚಾರ ಬಿಚ್ಚಿಟ್ಟ ತನುಶ್ರೀ ದತ್ತ

ಭಾರತೀಯ ಸಿನಿಮಾರಂಗದಲ್ಲಿ ಮೀ ಟೂ ಭಯ ಹುಟ್ಟಿಸಿದ್ದ ನಟಿ ತನುಶ್ರೀ ದತ್ತ ಮತ್ತೆ ಸುದ್ದಿಯಾಗಿದ್ದಾರೆ. ಬಾಲಿವುಡ್ ಖ್ಯಾತ ನಟ ನಾನಾ ಪಟೇಕರ್ ವಿರುದ್ಧ ಮೀಟೂ ಆರೋಪ ಮಾಡಿದ್ದ ತನುಶ್ರೀ ದತ್ತ ಇದೀಗ ಮೀ ಟೂ ಆರೋಪದ ಬಳಿಕ ಏನಾಯಿತು, ಏನೆಲ್ಲ ಸಮಸ್ಯೆ ಎದುರಿಸದರು ಎಂದು ಬಹಿರಂಗಪಡಿಸಿದ್ದಾರೆ.

Tanushree Dutta says many times murder attempt on her after MeToo movement sgk
Author
First Published Sep 23, 2022, 10:30 AM IST

ಭಾರತೀಯ ಸಿನಿಮಾರಂಗದಲ್ಲಿ ಮೀ ಟೂ ಭಯ ಹುಟ್ಟಿಸಿದ್ದ ನಟಿ ತನುಶ್ರೀ ದತ್ತ ಮತ್ತೆ ಸುದ್ದಿಯಾಗಿದ್ದಾರೆ. ಬಾಲಿವುಡ್ ಖ್ಯಾತ ನಟ ನಾನಾ ಪಟೇಕರ್ ವಿರುದ್ಧ ಮೀಟೂ ಆರೋಪ ಮಾಡಿದ್ದ ತನುಶ್ರೀ ದತ್ತ ಇದೀಗ ಮೀ ಟೂ ಆರೋಪದ ಬಳಿಕ ಏನಾಯಿತು, ಏನೆಲ್ಲ ಸಮಸ್ಯೆ ಎದುರಿಸದರು ಎಂದು ಬಹಿರಂಗಪಡಿಸಿದ್ದಾರೆ. ಭಾರತದಲ್ಲಿ ಮೀ ಟೂ ಅಭಿಯಾನ ಹೆಚ್ಚಾಗಲು ಕಾರಣರಾಗಿದ್ದವರಲ್ಲಿ ತನುಶ್ರೀ ದತ್ತ ಕೂಡ ಒಬ್ಬರು. ತನಗಾದ ಶೋಷಣೆಯ ಬಗ್ಗೆ ಬಾಯಿ ಬಿಟ್ಟ ನಂತರ ಅವರ ಮೇಲೆ ಕೊಲೆ ಪ್ರಯತ್ನಗಳು ನಡೆದಿದ್ದ ವಿಚಾರವನ್ನು ತನುಶ್ರೀ ದತ್ತ ಬಹಿರಂಗಪಡಿಸಿದ್ದಾರೆ. ತನಗೇನಾದರೆ ಅದು ನಾನಾ ಪಾಟೇಕರ್, ಅವರ ಲೀಗಲ್ ಟೀಂ ಮತ್ತು ಬಾಲಿವುಡ್ ಮಾಫಿಯಾ ಫ್ರೆಂಡ್ಸ್ ಕಾರಣ ಎಂದು ಹೇಳಿದ್ದರು. 

ಇದೀಗ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ತನುಶ್ರೀ ದತ್ತ ತನ್ನ ಮೇಲೆ ಹಲವು ಬಾರಿ ಕೊಲೆ ಪ್ರಯತ್ನ ಮಾಡಲಾಗಿತ್ತು ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ತನ್ನ ಕಾರಿನ ಬ್ರೇಕ್ ಫೇಲ್ ಮಾಡಲಾಗಿತ್ತು, ಕುಡಿಯುವ ನೀರಿಗೆ ವಿಷ ಹಾಕಲಾಗಿತ್ತು ಎಂದು ಬಹಿರಂಗ ಪಡಿಸಿದ್ದಾರೆ. 'ಒಂದೆರಡು ಬಾರಿ ನನ್ನ ಕಾರಿನ ಬ್ರೇಕ್​ ಫೇಲ್​ ಮಾಡಿಸಿದರು. ಅದರಿಂದ ನನಗೆ ಒಮ್ಮೆ ಅಪಘಾತವಾಯಿತು. ನನ್ನ ಮೂಳೆ ಮುರಿಯಿತು. ಇದರಿಂದ ಚೇತರಿಸಿಕೊಳ್ಳಲು ನನಗೆ ಹಲವು ತಿಂಗಳುಗಳೇ ಬೇಕಾದವು. ನಮ್ಮ ಮನೆಯಲ್ಲಿ ಓರ್ವ ಕೆಲಸದವಳು ಇದ್ದಳು. ಆಕೆಯನ್ನು ಯಾರೋ ನಮ್ಮ ಮನೆಗೆ ಬೇಕಂತಲೇ ಕಳಿಸಿದ್ದರು ಎನಿಸುತ್ತದೆ. ಕುಡಿಯುವ ನೀರಿನಲ್ಲಿ ಆಕೆ ಏನೋ ಬೆರೆಸುತ್ತಿದ್ದಳು ಎಂಬುದು ನನ್ನ ಅನುಮಾನ. ಯಾಕೆಂದರೆ ನನ್ನ ಆರೋಗ್ಯ ಹದಗೆಟ್ಟಿತು' ಎಂದು ತನುಶ್ರೀ ದತ್ತಾ ಆರೋಪ ಮಾಡಿದ್ದಾರೆ. 

ಈ ಹಿಂದೆ ತನುಶ್ರೀ ದತ್ತ ಸಾಮಾಜಿಕ ಜಾಲತಾಣದಲ್ಲಿ, ತಾನು ಮತ್ತೆ ಬಾಲಿವುಡ್‌ಗೆ ಹಿಂದಿರುಗಬೇಕೆಂದುಕೊಂಡಿದ್ದೀನಿ ಆದರೆ ಕೆಲವರು ತನ್ನ ಜೊತೆ ಕೆಲಸ ಮಾಡದಂತೆ ತಡೆಯುತ್ತಿದ್ದಾರೆ ಎಂದು ಹೇಳಿದ್ದರು. ಅನೇಕ ಪ್ರಾಜೆಕ್ಟ್ ಗಳ ಬಗ್ಗೆ ಮಾತಕತೆ ನಡೆದಿತ್ತು, ಆದರೆ ಅನೇಕರು ಬಿಟ್ಟಿಲ್ಲ ಎಂದು ಹೇಳಿದ್ದರು. 

ನನಗೇನೇ ಆದ್ರೂ ನಾನಾ ಪಟೇಕರ್, ಬಾಲಿವುಡ್ ಮಾಫಿಯಾ ಕಾರಣ; ಮತ್ತೆ ಸಿಡಿದೆದ್ದ ತನುಶ್ರೀ ದತ್ತ

ಮೀ ಟೂ ಅಭಿಯಾನದ ಬಗ್ಗೆ

2008 ರಲ್ಲಿ ತನುಶ್ರೀ ದತ್ತ ಹಾರ್ನ್ ಓಕೆ ಪ್ಲೀಸ್‌ ಸಿನಿಮಾ ಸೆಟ್‌ನಲ್ಲಿ ನಾನಾ ಪಾಟೇಕರ್ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ಬಳಿಕ ಅದೇ ವರ್ಷ CINTAAಗೆ ದೂರು ನೀಡಿದ್ದರು. 2018 ರಲ್ಲಿ ಈ ಪ್ರಕರಣವನ್ನು ಪುನಃ ತೆರೆಯಲಾಯಿತು. ಆದರೆ ನಾನಾ ಪಾಟೇಕರ್ ಆರೋಪಗಳನ್ನು ನಿರಾಕರಿಸಿದರು ಮತ್ತು 2019ರಲ್ಲಿ ಕ್ಲೀನ್ ಚಿಟ್ ಪಡೆದರು ಎನ್ನಲಾಗಿದೆ. ಆದರೂ ನಟಿ ತಾನು ಅನೇಕ ವರ್ಷಗಳಿಂದ ಉದ್ಯಮದಲ್ಲಿ ಎದುರಿಸಿದ ಕಷ್ಟ ಮತ್ತು ಹೋರಾಟಗಳ ಬಗ್ಗೆ ಬಹಿರಂಗ ಪಡಿಸಿದ್ದರು. ಭಾರತದಲ್ಲಿ MeToo ಆಂದೋಲನವನ್ನು ಮುನ್ನಡೆಸಿದ ಮೊದಲ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ. 

ಆತ್ಮಹತ್ಯೆಗೆ ಯತ್ನಿಸಿಲ್ಲವಷ್ಟೇ ಬಾಲಿವುಡ್ ಮಾಫಿಯಾದಿಂದ ತೀವ್ರ ಕಿರುಕುಳ

ಆಶಿಕ್​ ಬನಾಯಾ ಆಪ್ನೆ ಮೂಲಕ ಎಂಟ್ರಿ

ತನುಶ್ರೀ ಮೊದಲ ಬಾರಿ ನಟಿಸಿದ್ದು 2005ರಲ್ಲಿ ತೆರೆಕಂಡ ‘ಆಶಿಕ್​ ಬನಾಯಾ ಆಪ್ನೆ’ ಸಿನಿಮಾದಲ್ಲಿ. ಆ ಚಿತ್ರದಲ್ಲಿ ಅವರು ಸಖತ್ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದರು. ನಂತರ ಅವರಿಗೆ ತುಂಬ ಜನಪ್ರಿಯತೆ ಸಿಕ್ಕಿತು. 2010ರ ಬಳಿಕ ಅವರು ಯಾವುದೇ ಚಿತ್ರದಲ್ಲಿ ನಟಿಸಿಲ್ಲ.

 

Follow Us:
Download App:
  • android
  • ios