ತನಿಷಾ ಕುಪ್ಪಂಡ ನಿರ್ಮಾಣದ ಕೋಣ ಸಿನಿಮಾ ಥಿಯೇಟರ್ ನಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಆದ್ರೆ ಸಿನಿಮಾ ಬಗ್ಗೆ ಸಾಕಷ್ಟು ನೆಗೆಟಿವ್ ಕಮೆಂಟ್ ಕೂಡ ಬಂದಿದೆ. ಈ ನೆಗೆಟಿವ್ ಕಮೆಂಟ್ ಗೆ ನಟಿ ತನಿಷಾ ಕುಪ್ಪಂಡ ಉತ್ತರ ನೀಡಿದ್ದಾರೆ.
ಕನ್ನಡ ಬಿಗ್ ಬಾಸ್ ಮಾಜಿ ಸ್ಪರ್ಧಿ ತನಿಷಾ ಕುಪ್ಪಂಡ (Tanisha Kuppanda) ಕೋಣ ಮೂಲಕ ನಿರ್ಮಾಪಕರಾಗಿ ಹೊಸ ಜವಾಬ್ದಾರಿ ನಿಭಾಯಿಸಿದ್ದಾರೆ. ಹಿಂದಿನ ವಾರ ಬಿಡುಗಡೆಯಾದ ಕೋಣ ಸಿನಿಮಾಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ. ಕೋಮಲ್ ನಾಯಕ ನಟನಾಗಿ ಅಭಿನಯಿಸಿರುವ ಕೋಣ ಸಿನಿಮಾಕ್ಕೆ ಸಾಕಷ್ಟು ನೆಗೆಟಿವ್ ಕಮೆಂಟ್ ಕೂಡ ಬಂದಿದೆ. ಈ ನೆಗೆಟಿವ್ ಕಮೆಂಟ್ ಗೆ ತನಿಷಾ ಕುಪ್ಪಂಡ ನೇರವಾಗಿ ಉತ್ತರ ನೀಡಿದ್ದಾರೆ.
ಬಿಗ್ ಬಾಸ್ (Bigg Boss) ಮಾಜಿ ಸ್ಪರ್ಧಿಗಳಿದ್ರೆ ಸಿನಿಮಾ ನೋಡಲ್ವ ವೀಕ್ಷಕರು? :
ಕೋಣ ಸಿನಿಮಾದಲ್ಲಿ ಕೋಮಲ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕೋಮಲ್ ಗೆ ನಾಯಕಿಯಾಗಿ ತನಿಷಾ ಕುಪ್ಪಂಡ ನಟಿಸಿದ್ದಾರೆ. ಇದಲ್ದೆ ಬಿಗ್ ಬಾಸ್ 11ರ ಸ್ಪರ್ಧಿಗಳಾಗಿದ್ದ ನಟ ಶಿಶಿರ್ ಶಾಸ್ತ್ರಿ, ನಟಿ ನಮ್ರತಾ ಗೌಡ, ಕೀರ್ತಿರಾಜ್, ರಂಜಿತ್, ತುಕಾಲಿ ಸಂತೋಷ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಸಿನಿಮಾ ನೋಡಿದ ಅನೇಕರು, ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಕಮೆಂಟ್ ಮಾಡಿದ್ದಾರೆ. ಕೋಣ ಸಿನಿಮಾ ಹೇಗಿದೆ ಅನ್ನೋದಕ್ಕಿಂತ ಕೋಣ ಸಿನಿಮಾದಲ್ಲಿರುವ ಕಲಾವಿದರೇ ಅವರ ಟಾರ್ಗೆಟ್. ಕೋಣ ಸಿನಿಮಾದಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿದ್ದು, ಅದಕ್ಕೇ ಸಿನಿಮಾ ನೋಡೋದಿಲ್ಲ ಅಂತ ಕಮೆಂಟ್ ಮಾಡಿದ್ದಾರೆ.
'ಬೆಳದಿಂಗಳ ಬಾಲೆ' ನಿವೇದಿತಾ ಗೌಡಗೆ ಮತ್ತೆಮತ್ತೆ ನೆಟ್ಟಿಗರು ಕೇಳೋ ಪ್ರಶ್ನೆ ಇದು.. ಉತ್ತರ ಕೊಡ್ತಾರಾ?
ನೆಟ್ಟಿಗರಿಗೆ ಉತ್ತರ ನೀಡಿದ ತನಿಷಾ ಕುಪ್ಪಂಡ :
ಮೀಡಿಯಾ ಜೊತೆ ಮಾತನಾಡಿದ ತನಿಷಾ ಕುಪ್ಪಂಡ, ಒಬ್ಬ ಹುಡುಗಿ ನಿರ್ಮಾಪಕರಾದ್ರೆ ಜನ ಸಹಿಸೋದಿಲ್ಲ ಅನ್ನೋದು ನನಗೆ ಈಗ ಗೊತ್ತಾಗಿದೆ. ಜನರು ಬಿಗ್ ಬಾಸ್ ಸ್ಪರ್ಧಿಗಳಿರೋದ್ರಿಂದ ಸಿನಿಮಾ ನೋಡೋದಿಲ್ಲ ಎನ್ನುತ್ತಿದ್ದಾರೆ, ಅವರು ಬಿಗ್ ಬಾಸ್ ಸ್ಪರ್ಧಿಗಳು ಮಾತ್ರವಲ್ಲ ಅವರು ಉತ್ತಮ ಕಲಾವಿದರು. ಬಿಗ್ ಬಾಸ್ ಮನೆಗೆ ಬರುವ ಮೊದಲೇ ಅವರು ನನಗೆ ಪರಿಚಿತರು. ಅವರ ಆಕ್ಟಿಂಗ್ ನೋಡಿ ನಾನವರನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿದ್ದೇನೆ. ಬಿಗ್ ಬಾಸ್ ನಲ್ಲಿ ಅವರನ್ನು ನೋಡಿ ಖುಷಿಪಟ್ಟಿದ್ದೀರಿ ಆದ್ರೆ ಕೋಣ ಸಿನಿಮಾ ನೋಡೋವಾಗ ಅವರು ಬಿಗ್ ಬಾಸ್ ಸ್ಪರ್ಧಿ, ನೋಡೋಕೆ ಮನಸ್ಸಿಲ್ಲ ಅಂತ ಏಕೆ ಹೇಳ್ತೀರಿ. ಕಲಾವಿದರನ್ನು ಕೇವಲವಾಗಿ ನೋಡಬೇಡಿ. ಎಲ್ಲರೂ ಕಷ್ಟಪಟ್ಟು ಕಲಾವಿದರಾಗಿದ್ದಾರೆ. ನಾನೂ ಕಷ್ಟಪಟ್ಟು ಕಲಾವಿದೆಯಾಗಿದ್ದೇನೆ. ಈಗ ನಿರ್ಮಾಪಕರಾಗಿಯೂ ಸಾಕಷ್ಟು ಸವಾಲು ಎದುರಿಸಿದ್ದೇನೆ. ಅರ್ಧದಲ್ಲಿ ಬಿಟ್ಟು ಹೋದವರ ಕೆಲ್ಸ ಮಾಡಿದ್ದೇನೆ. ನಮ್ಮನ್ನು ಕೆಳಮಟ್ಟದಲ್ಲಿ ನೋಡಬೇಡಿ. ಒಳ್ಳೆ ಸಿನಿಮಾ ನೀಡುವುದು ನನ್ನ ಉದ್ದೇಶವಾಗಿತ್ತು. ಅದನ್ನು ಮಾಡಿ ತೋರಿಸಿದ್ದೇನೆ. ಕಲಾವಿದರಾಗಿ ನೀವು ಎಷ್ಟೇ ಕಾಲೆಳೆದ್ರೂ ನಾನು ಅದನ್ನು ಸಹಿಸುತ್ತೇನೆ. ಕಷ್ಟಪಟ್ಟು, ಹಣ ಹಾಕಿ ಸಿನಿಮಾ ಮಾಡಿದ್ದೇನೆ, ದಯವಿಟ್ಟು ಅದ್ರ ಬಗ್ಗೆ ಏನೇನೋ ಮಾತನಾಡಬೇಡಿ ಎಂದು ತನಿಷಾ ವಿನಂತಿ ಮಾಡಿಕೊಂಡಿದ್ದಾರೆ. ಹಾಗೆಯೇ ಸಿನಿಮಾಕ್ಕೆ ಸಿಕ್ಕ ಉತ್ತಮ ರೆಸ್ಪಾನ್ಸ್ ಗೆ ಖುಷಿಯಾಗಿರುವ ತನಿಷಾ, ಸಿನಿಮಾ ನೋಡಿ ಒಳ್ಳೆ ಕಮೆಂಟ್ ಮಾಡಿದ ವೀಕ್ಷಕರಿಗೆ ಧನ್ಯವಾದ ಹೇಳಿದ್ದಾರೆ.
ನಟ ದರ್ಶನ್‌ಗೆ ಜೀವಾವಧಿ ಶಿಕ್ಷೆ ಆಗುತ್ತಾ? ಯಾವುದಕ್ಕೂ ಇರಲಿ, ಈ ಮುದ್ದಾದ ಫ್ಯಾಮಿಲಿ ಫೋಟೋವನ್ನೊಮ್ಮೆ ನೋಡಿ!
ಕೋಣ ಸಿನಿಮಾ ಅಕ್ಟೋಬರ್ 31 ರಂದು ರಾಜ್ಯಾದ್ಯಂತ ತೆರೆಗೆ ಬಂದಿದೆ. ಸಿನಿಮಾ ಬಿಡುಗಡೆಯಾಗಿ ನಾಲ್ಕು ದಿನಗಳಾಗಿದ್ದು, ಸಿನಿಮಾಕ್ಕೆ ಉತ್ತಮ ರಿವ್ಯೂ ಸಿಕ್ಕಿದೆ. ಕಾಮಿಡಿ, ಹಾರರ್, ಥ್ರಿಲ್ಲರ್ ಮೂವಿ ಇದಾಗಿದ್ದು, ಹರಿಕೃಷ್ಣ ನಿರ್ದೇಶನ ಮಾಡಿದ್ದಾರೆ. ತನಿಷಾ ಕುಪ್ಪಂಡ ಜೊತೆ ಅವರ ಕೆಲ ಸ್ನೇಹಿತರು ನಿರ್ಮಾಣದ ಹೊಣೆ ಹೊತ್ತಿದ್ದರು. ಕೋಣನ ಬಲಿಗೆ ಗ್ರಾಮಸ್ಥರು ಮುಂದಾದಾಗ ನಡೆಯುವ ಘಟನೆಗಳೇ ಸಿನಿಮಾ ಕಥೆಯಾಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಜಗ್ಗಪ್ಪ, ಸುಶ್ಮಿತಾ, ಮಂಜು ಪಾವಗಡ ಸೇರಿದಂತೆ ಅನೇಕ ಕಾಮಿಡಿ ಕಲಾವಿರದು ಪಾತ್ರಕ್ಕೆ ಜೀವ ತುಂಬಿದ್ದಾರೆ.
