ಯುವ ನಟಿ ಆನಂದ ಕಣ್ಣನ್ (48) ಕ್ಯಾನ್ಸರ್‌ನಿಂದಾಗಿ ಕೊನೆ ಯುಸಿರೆಳೆದಿದ್ದಾರೆ. ಆಪ್ತರ ಟ್ಟೀಟ್‌ ನೋಡಿ ಇಡೀ ತಮಿಳು ಚಿತ್ರರಂಗವೇ ಶಾಕ್. 

ತಮಿಳು ಕಿರುತೆರೆ ಜನಪ್ರಿಯ ನಟ ಹಾಗೂ ಅದ್ಭುತ ನಿರೂಪಕ ಆನಂದ್ ಕಣ್ಣನ್ ಆಗಸ್ಟ್‌ 16ರಂದು ಮಧ್ಯರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಕೆಲವು ವರ್ಷಗಳಿಂದ ಆನಂದ bile-duct cancer ಅಂದ್ರೆ ಪಿತ್ತರಸ ನಾಳದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. 

ನಿರ್ದೇಶಕ ವೆಂಕಟ್ ಪ್ರಭು ಈ ವಿಚಾರವನ್ನು ಟ್ಟಿಟರ್‌ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. 'ನನ್ನ ಗ್ರೇಟ್ ಫ್ರೆಂಡ್, ಒಳ್ಳೆಯ ವ್ಯಕ್ತಿ ಆನಂದ್ ಕಣ್ಣನ್ ಇನ್ನಿಲ್ಲ' ಎಂದು ಬರೆದುಕೊಂಡಿದ್ದಾರೆ. ಆರಂಭದಲ್ಲಿ ವೆಂಕಟ್‌ ಟ್ಟೀಟ್‌ ನೋಡಿ ಹಲವರು ಶಾಕ್ ಆಗಿದ್ದಾರೆ. ಆನಂದ ಅವರಿಗೆ ಕ್ಯಾನ್ಸರ್ ಇತ್ತೆಂದು ಕೆಲವೇ ಕೆಲವು ಆಪ್ತರಿಗೆ ಮಾತ್ರ ತಿಳಿದಿತ್ತು. 

ಆನಂದ್ ಕಣ್ಣನ್ ಸಿಂಹಪೂರ್‌ದಲ್ಲಿ ವಸಂತಮ್ ಟಿವಿಯಲ್ಲಿ ಕೆಲಸ ಮಾಡುವ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು. ಆನಂತರ ಚಿನ್ನೈಗೆ ಆಗಮಿಸಿ ಸನ್‌ ಮ್ಯೂಸಿಕ್‌ ಚಾನೆಲ್‌ನಲ್ಲಿ ವಿಡಿಯೋ ಜಾಕಿಯಾಗಿ ಸೇರಿಕೊಂಡರು. ವೆಂಕಟ್ ನಿರ್ದೇಶನ 'ಸರೋಜಾ' ಚಿತ್ರದಲ್ಲಿ ಆನಂದ್ ಅಭಿನಯಿಸಿದ್ದಾರೆ ಹಾಗೂ 2012ರಲ್ಲಿ ಬಿಡುಗಡೆಯಾದ ' ಆದಿಸಾಯ ಉಳಗಂ' ಚಿತ್ರದಲ್ಲೂ ಅಭಿನಯಿಸಿದ್ದಾರೆ. 

35ರ ಉದಯೋನ್ಮುಖ ನಟಿ ಬಲಿ ಪಡೆದ ಬ್ರೈನ್ ಟ್ಯೂಮರ್

ಆನಂದ ಕಣ್ಣನ್ ಅವರಿಗೆ 2013ರಲ್ಲಿ ವಿಶ್ವ ವಿಶ್ವವಿದ್ಯಾಲಯ ತಮಿಳು ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಯೂತ್ ಐಕಾನ್ ಮತ್ತು ದೂರದರ್ಶನ ನಟರ ಸಂಘದ (ದಕ್ಷಿಣ ಭಾರತ) 'ಅತ್ಯುತ್ತಮ ನಟ' ಪ್ರಶಸ್ತಿ ನೀಡಲಾಗಿತ್ತು. ಸವಾಲ್ ಸಿಂಗಾಪುರ್‌ಗಾಗಿ ಅವರನ್ನು 'ಅತ್ಯುತ್ತಮ ಹೋಸ್ಟ್' ಎಂದು ಗೌರವಿಸಲಾಗಿತ್ತು.

ಕಿರುತೆರೆ ಹಾಗೂ ಚಿತ್ರರಂಗದ ಆಪ್ತರು ಇವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಆನಂದ್ ಕಣ್ಣನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.