ಚೆನ್ನೈ: ಜನಪ್ರಿಯ ತಮಿಳು ಕಿರುತೆರೆ ನಟಿ ಕೆ.  ಚಿತ್ರಾ ಅವರ ಮೃತ ದೇಹವು ಅನುಮಾನಸ್ಪದ ರೀತಿಯಲ್ಲಿ, ನಗರದ ಹೊರವಯಲಯದ ನಜರತ್‌ಪೇಟ್‌ನಲ್ಲಿರುವ ಹೊಟೇಲ್‌ವೊಂದರ ಕೋಣೆಯೊಂದರಲ್ಲಿ ಪತ್ತೆಯಾಗಿದೆ. ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. 

ಕುಂದಾಪುರ; ಕಾರಿದೆ, ಬಂಗಲೆ ಇದೆ.. ಗೋವರ್ಧನನ ಗೋಟಾವಳಿಗೆ ಬಲಿಯಾದ ಮುಗ್ಧೆ! 

ತಮ್ಮ ಸೀರೆಯನ್ನು ಫ್ಯಾನಿಗೆ ಬಿಗಿದು, ನೇಣು ಬಿಗಿದುಕೊಂಡ ಸಾವನ್ನಪ್ಪಿದ ಮೃತದೇಹ ಪತ್ತೆಯಾಗಿದೆ. ಅವರ ಸಾವಿಗೂ ಮುನ್ನ  ಚಿತ್ರಾರ ಜೊತೆಗಿದ್ದ ಅವರ ಭಾವಿ ಪತಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.   ಚಿತ್ರಾ ಅವರು ಬೈಪಾಸ್‌ನಲ್ಲಿರುವ ಹೊಟೇಲ್‌ನಲ್ಲಿ ಭಾವೀ ಪತಿಯೊಂದಿಗೆ ತಂಗಿದ್ದರು. ಸಮೀಪದಲ್ಲೇ ಚಿತ್ರೀಕರಣ ಮುಗಿಸಿ ವಾಪಸ್‌ ಬಂದಿದ್ದ  ಚಿತ್ರಾ ಭಾವೀ ಪತಿಗೆ, ‘ಸ್ನಾನ ಮುಗಿಸಿ ಬರುವೆ. ಹೊರಗೆ ಕಾಯುತ್ತಿರು,’ಎಂದು ಹೇಳಿದ್ದರು ಎಂದು ವಿಚಾರಣೆ ವೇಳೆ ಭಾವಿ ಪತಿ ಪೊಲೀಸರಿಗೆ ತಿಳಿಸಿದ್ದಾರೆ. 

ಒಟ್ಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಅಕ್ಕ-ತಂಗಿ 

'ಪಾಂಡಿಯನ್‌ ಸ್ಟೋ​ರ್ಸ್‌' ಧಾರಾವಾಹಿ ಮೂಲಕ  ಚಿತ್ರಾ ಹೆಚ್ಚು ಜನಪ್ರಿಯರಾಗಿದ್ದರು. ಮೇ 2, 1992ರಲ್ಲಿ ಜನಿಸಿದ ಈ ನಟಿ ಇಷ್ಟು ಬೇಗ, ಅದೂ ಈ ರೀತಿ ಇಹಲೋಕ ತ್ಯಜಿಸಿರುವ ವಿಚಾರ ತಿಳಿದು ಕಲಾ ಬಂಧುಗಳು ಹಾಗೂ ಸ್ನೇಹಿತರು ಶಾಕ್ ಆಗಿದ್ದಾರೆ. ತಮ್ಮ ನೆಚ್ಚಿನ ನಟಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.