ಕಲಬುರಗಿ (ಡಿ.08):  ಮನೆಯಲ್ಲೇ ಅಕ್ಕ, ತಂಗಿ ಇಬ್ಬರೂ ಏಕಕಾಲಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನಾಪುರ ಗ್ರಾಮದ ಐಶ್ವರ್ಯ ಸುತಾರ (20) ಮತ್ತು ಸಾರಿಕಾ ಸುತಾರ (17) ಎಂಬ ಇಬ್ಬರು ಅಕ್ಕ ತಂಗಿ ನೇಣಿಗೆ ಶರಣಾಗಿದ್ದಾರೆ.‌

ಮನೆಯಲ್ಲಿ ಯಾರೂ‌ ಇಲ್ಲದ ಸಮಯದಲ್ಲಿ ಇಬ್ಬರೂ ನೇಣು ಬಿಗಿದುಕೊಂಡಿದ್ದಾರೆ. ಅಕ್ಕ ತಂಗಿಯರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಸ್ನಾನದ ದೃಶ್ಯ ಚಿತ್ರೀಕರಿಸಿ ರೇಪ್ ಮಾಡಿದ ಬಿಜೆಪಿ ಕೌನ್ಸಿಲರ್! ...

ತಂದೆ ವಿಶ್ವನಾಥ ಸುತಾರ ಐನಾಪುರ ಗ್ರಾಮದಲ್ಲೇ ಚಹಾ ಅಂಗಡಿ ನಡೆಸುತ್ತಿದ್ದಾರೆ. ಇವರಿಗೆ ಒಟ್ಟು ಐವರು ಹೆಣ್ಣು ಮಕ್ಕಳು ಇದ್ದು, ಈಗಾಗಲೇ ಮೂವರ ಮದುವೆಯಾಗಿದೆ. ಐದನೆಯವಳಾದ ಸಾರಿಕಾಗೆ ಒಂದೂವರೆ ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು. ಆದರೆ, ನಾಲ್ಕನೆಯವಳಾದ ಐಶ್ವರ್ಯ ಇನ್ನೂ ಯಾವುದೇ ಮದುವೆ ನಿಶ್ಚಯವಾಗಿರಲಿಲ್ಲ.

ಮಧ್ಯಾಹ್ನ ತಂದೆ ಚಹಾ ಅಂಗಡಿಯಿಂದ ಮನೆಗೆ ಬಂದಾಗ ಊಟ ಇವರೇ ಬಡಿಸಿದ್ದಾರೆ. ನಂತರ ತಂದೆ ಮರಳಿಗೆ ಹೋಗಿದ್ದಾರೆ. ಸಂಜೆ ತಾಯಿ ಹೊಲದಿಂದ ಮನೆಗೆ ಬಂದಾಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ವಿಷಯ ತಿಳಿದ ಸಬ್‌ಇನ್‌ಸ್ಪೆಕ್ಟರ್‌ ರಾಜಶೇಖರ ರಾಠೋಡ ಸ್ಥಳಕ್ಕೆ ಭೇಟಿ‌, ನೀಡಿ ಪರಿಶೀಲನೆ ‌ನಡೆಸಿದರು. ಈ ಬಗ್ಗೆ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.