ಮನೆಯಲ್ಲೇ  ಕಿರುತೆರೆ ಕಲಾವಿದರ ಆತ್ಮಹತ್ಯೆ, ವಾಸನೆ ಬಂದ ಮೇಲೆ ಗೊತ್ತಾಯ್ತು

ಮತ್ತೊಂದು ಶಾಕಿಂಗ್ ನ್ಯೂಸ್ ಚೆನ್ನೈನಿಂದ/ ಆರ್ಥಿಕ ಮುಗ್ಗಟ್ಟು ಎದುರಿಸಲಾಗದೆ ಕಿರುತೆರೆ ನಟ-ನಟಿ ಆತ್ಮಹತ್ಯೆ/ ಆತ್ಮಹತ್ಯೆಗೆ ಶರಣಾದ ಅಣ್ಣ-ತಂಗಿ/ ಲಾಕ್ ಡೌನ್ ಪರಿಣಾಮ ಶೂಟಿಂಗ್ ಇರಲಿಲ್ಲ

Tamil TV Actor Sreedhar and Jaya Kalyani committed Suicide In Chennai

ಚೆನ್ನೈ (ಜೂ. 15)  ಮತ್ತೊಂದು ಶಾಕಿಂಗ್ ನ್ಯೂಸ್ ತಮಿಳುನಾಡಿನಿಂದ ಬಂದಿದೆ. ತಮಿಳು ಕಿರುತೆರೆ ನಟ ಶ್ರೀಧರ್ ಮತ್ತು ಅವರ ಒಡಹುಟ್ಟಿದ ಜಯಾ ಕಲ್ಯಾಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಚೆನ್ನೈನ ಅವರ ನಿವಾಸದಲ್ಲಿ ಶವ ಪತ್ತೆಯಾಗಿದೆ. ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗ್ರಹಿಸಿದ ಪಕ್ಕದವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಸುಶಾಂತ್ ಸಾವಿನ ನಂತರ ಮಾಜಿ ಗೆಳತಿ ಆಡಿದ ಮಾತುಗಳು

ಶ್ರೀಧರ್ ಮತ್ತು ಜಯಾ ಕಲ್ಯಾಣಿ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದರು.  ಕೊರೋನಾ ಲಾಕ್ ಡೌನ್ ಕಾರಣಕ್ಕೆ ಶೂಟಿಂಗ್ ಬಂದ್ ಆಗಿದ್ದರ ಪರಿಣಾಮ ಎದುರಿಸುತ್ತಿದ್ದರು.  ಚೆನ್ನೈನ ಕುಡುಂಗೈಯೂರ್​​ ಮುತ್ತಮೀಜ್​​ ನಗರದಲ್ಲಿರುವ ನಿವಾಸದಲ್ಲಿಯೇ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರು ಶ್ರೀಧರ್​ ಮತ್ತು  ಜಯ ಕಲ್ಯಾಣಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ದೃಢಪಟ್ಟಿದೆ. 

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

 

 

Latest Videos
Follow Us:
Download App:
  • android
  • ios