ತಮಿಳಿನ ಖ್ಯಾತ ನಿರ್ದೇಶಕ ಬಾಬು ಶಿವನ್ ಬುಧವಾರ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ವಿಜಯ ಹಾಗೂ ಅನುಷ್ಕಾ ಶೆಟ್ಟಿ ಅಭಿನಯದ ವೇಟಕಾರನ್ ಸಿನಿಮಾ ಖ್ಯಾತಿನ ಬಾಬು ಶಿವನ್ ಲಿವರ್ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.

ನಿರ್ದೇಶಕ ಲಿವರ್ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಡಯಾಲಿಸಿಸ್ ಮಾಡಬೇಕೆಂದು ವೈದ್ಯರು ನಿರ್ಧರಿಸಿದ್ದರು. ಈ ನಡುವೆ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿ ಮೃತಪಟ್ಟಿದ್ದಾರೆ.

ತಮಿಳು ಕಾಮಿಡಿ ನಟ ವಡಿವೇಲು ಬಾಲಾಜಿ ಹೃದಯಾಘಾತದಿಂದ ಸಾವು

ಭಾನುವಾರ ಬಾಬು ಶಿವನ್ ಮನೆಯಲ್ಲಿ ಒಬ್ಬರೇ ಇದ್ದರು. ಅವರ ಮನೆಯವರು ಮರಳಿದಾಗ ನಿರ್ದೇಶಕ ಪ್ರಜ್ಞೆ ತಪ್ಪಿ ಬಿದ್ದ ಸ್ಥಿತಿಯಲ್ಲಿ ಇದ್ದರು.  ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆರ್ಥಿಕ ಸಮಸ್ಯೆಯಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ನಿರ್ದೇಶಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಉಪನಿರ್ದೇಶಕನಾಗಿ ಕೆರೆಯರ್ ಆರಂಭಿಸಿದ ಬಾಬು ಶಿವನ್ ನಂತರ ಡಯಲಾಗ್ ರೈಟರ್ ಆಗಿಯೂ ಕೆಲಸ ಮಾಡಿದ್ದರು. 2009ರಲ್ಲಿ ಇವರು ನಿರ್ದೇಶಿಸಿದ ವೇಟಕಾರನ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ ಬೇರೆ ಯಾವುದೇ ಸಿನಿಮಾ ನಿರ್ದೇಶನಕ್ಕೆ ಅವಕಾಶ ಸಿಕ್ಕಿರಲಿಲ್ಲ.

ಹಿರಿಯ ತಮಿಳು ನಟ ಕೊರೋನಾದಿಂದ ಸಾವು

ಹಲವು ವರ್ಷ ಸಿನಿಮಾದಲ್ಲಿ ಯಾವುದೇ ಅವಕಾಶ ಸಿಗದಿದ್ದಾಹ ಇವರು ತಮಿಳು ಟಿವಿ ಧಾರವಾಹಿಯತ್ತ ಗಮನ ಹರಿಸಿದ್ದರು. ತಮಿಳಿನ ಹಿಟ್ ಧಾರವಾಹಿ ರಾಸಾತಿ ನಿರ್ದೇಶನ ಮಾಡುತ್ತಿದ್ದರು.