ತಮಿಳು ಕಾಮಿಡಿ ನಟ ವಡಿವೇಲು ಬಾಲಾಜಿ ಹೃದಯಾಘಾತದಿಂದ ಸಾವು

ಕಾಲಿವುಡ್ ಕಾಮಿಡಿ ನಟ ವಡಿವೇಲ್ ಬಾಲಾಜಿ ಹೃದಯಾಘಾತದಿಂದ ಚೆನ್ನೈನಲ್ಲಿ ಮೃತಪಟ್ಟಿದ್ದಾರೆ.

Tamil comedian Vadivel Balaji passes away in Chennai

ಕಾಲಿವುಡ್ ಕಾಮಿಡಿ ನಟ ವಡಿವೇಲ್ ಬಾಲಾಜಿ ಹೃದಯಾಘಾತದಿಂದ ಚೆನ್ನೈನಲ್ಲಿ ಮೃತಪಟ್ಟಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ನಿನ್ನೆ ನಿಧನರಾಗಿದ್ದಾರೆ. ಹೃದಯಾಘಾತವಾಗಿ ನಟನನ್ನು ಹದಿನೈದು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟನಿಗೆ 42 ವರ್ಷ ವಯಸ್ಸಾಗಿತ್ತು.

ಖಾಸಗಿ ಆಸ್ಪತ್ರೆಯಿಂದ ವಡಿವೇಲ್ ಅವರನ್ನು ಒಮನ್‌ದುರೈ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಚೆನ್ನೈನಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ನಟನನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡ ಕಿರುತೆರೆ ನಟ ಸಿದ್ಧರಾಜ್ ಕಲ್ಯಾಣ್ಕರ್‌ ನಿಧನ

ಕಾಲಿವುಡ್ ಕಾಮಿಡಿ ನಟ ವಡಿವೇಲು ಅವರ ಮಿಮಿಕ್ರಿ ಮಾಡಿ ವಡಿವೇಲು ಬಾಲಾಜಿ ಫೇಮಸ್ ಆಗಿದ್ದರು. ವಿಜಯ್ ಟಿವಿಯ ಕಲಕ್ಕಪೋವದು ಯಾರು ಕಾರ್ಯಕ್ರಮದ ಮೂಲಕ ಮನೆ ಮನೆಗೆ ಪರಿಚಯವಾಗಿದ್ದರು. ನಂತರ ಶಿವಕಾರ್ತಿಕೇಯನ್ ನಟನೆಯ  ಟಿವಿ ಶೋ ಅದು ಇದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಖ್ಯಾತ ಹಾಸ್ಯ ನಟ ಜಯಪ್ರಕಾಶ್‌ ರೆಡ್ಡಿ ಇನ್ನಿಲ್ಲ

ಬಹಳಷ್ಟು ಕಾರ್ಯಕಮದ ಮೂಲಕ ನಟ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದರು. ನಯನ್‌ತಾರಾ ಅಭಿನಯದ ಕೊಳಮಾವು ಕೋಕಿಲ ಸಿನಿಮಾದಲ್ಲಿಯೂ ಇವರು ನಿಟಿಸಿದ್ದರು. ಕಿರುತೆರೆಯಿಂದ ಹಿರಿತೆರೆಗೆ ಬಂದು ಹಿಟ್ ಆದ ಕೆಲವರಲ್ಲಿ ಒಬ್ಬರು ವಡಿವೇಲ್.

Latest Videos
Follow Us:
Download App:
  • android
  • ios