ತಮಿಳು ನಟ ಫ್ಲೋರೆಂಟ್ ಸಿ ಪೆರಿರಾ ಚೆನ್ನೈನಲ್ಲಿ ಸೋಮವಾರ ಸಂಜೆ ಮೃತಪಟ್ಟಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ನಟನ ಅಕಾಲಿಕ ಸಾವು ತಮಿಳು ಸಿನಿಮಾ ಇಂಡಸ್ಟ್ರಿಗೆ ಶಾಕ್ ನೀಡಿದೆ. ಬಹಳಷ್ಟು ಜನರು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಗೌರವ ಸಲ್ಲಿಸಿದ್ದಾರೆ. ಇದಂ ಪೊರುಳ್ ಯವಲ್ ಸಿನಿಮಾ ನಿರ್ದೇಶಕ ಸೀನು ರಾಮಸ್ವಾಮಿ ಟ್ವೀಟ್ ಮಾಡಿದ್ದಾರೆ.

ಹಿರಿಯ ನಟ ಅಜಿತ್ ದಾಸ್ ಇನ್ನಿಲ್ಲ

ಇದನ್ನು ನನಗೆ ನಂಬಲಾಗುತ್ತಿಲ್ಲ. ಸಿನಿಮಾ ನಟ, ಕಲೈಂಗಾರ್ ಟಿವಿಯ ಮಾಜಿ ಜಿಎಂ. ಒಳ್ಳೆಯ ವ್ಯಕ್ತಿ. ಪೆರಿರಾ ನೀವು ನಮ್ಮ ಮಧ್ಯೆಯೇ ಇದ್ದೀರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಹಾಗೂ ಸ್ನೇಹಿತರಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದಿದ್ದಾರೆ.

ರಿಯಾಸ್ ಕೆ ಅಹ್ಮದ್ ಟ್ವೀಟ್ ಮಾಡಿ, ಪೆರಿರಾ ಗಾಂಧಿ ಆಸ್ಪತ್ರೆಯಲ್ಲಿ 10 ಗಂಟೆಗೆ  ಕೊರೋನಾದಿಂದ ಮೃತಪಟ್ಟಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದಿದ್ದಾರೆ. 2003ರಲ್ಲಿ ಪುದಿಯ ಗೀತೈ ಸಿನಿಮಾ ಮೂಲಕ ತಮಿಳು ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದರು. ಇದರಲ್ಲಿ ವಿಜಯ್ ಲೀಡ್ ರೋಲ್ ಮಾಡಿದ್ದರು.

ತಮಿಳು ಕಾಮಿಡಿ ನಟ ವಡಿವೇಲು ಬಾಲಾಜಿ ಹೃದಯಾಘಾತದಿಂದ ಸಾವು

ಪ್ರಭು ಸೋಲಮನ್ ನಿರ್ದೇಶನದ ಕಾಯಲ್(2014) ಸಿನಿಮಾದಲ್ಲಿ ಅವರು ಹಿಟ್ ಆಗಿದ್ದರು. ನಂತರ ಧರ್ಮದುರೈ, ವಿಐಪಿ 2, ರಾಜ ಮಂತ್ರಿ, ತೊಡರೈ, ಮುಪ್ಪರಿಮಾನಂ, ಕೊಡಿವೀರನ್, ಎಂಕಿಟ್ಟ ಮೋದಾದೆ, ಸತ್ರಿಯನ್, ಪೊದುವಾಗ ಎನ್ ಮನಸು ತಂಗಮ್, ನಾಗೇಶ್ ತಿರೈಇರಂಗನಂ, ತರಮನಿಯಂಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೆ ಇವರು ವಿನ್ ಟಿವಿ, ಕಲೈಂಗಾರ್ ಟಿವಿ, ವಿಜಯ್ ಟಿವಿಯಲ್ಲಿಯೂ ಕೆಲಸ ಮಾಡಿದ್ದಾರೆ.