ಸೆನ್ಸಾರ್ ಮಂಡಳಿಯಲ್ಲಿ ಲಂಚಾವತಾರ: ತಮಿಳು ನಟ ವಿಶಾಲ್ ಹೇಳಿಕೆ ಭಾರೀ ವೈರಲ್!
ತಮಿಳು ನಟ ವಿಶಾಲ್ ತಮ್ಮ ಚಿತ್ರೋದ್ಯಮದ ವಿರುದ್ಧ ಆರೋಪ ಮಾಡಿದ್ದಾರೆ. ಈ ಮೂಲಕ ವಿಶಾಲ್, ತಮಿಳು ಚಿತ್ರೋದ್ಯಮದ ಸೆನ್ಸಾರ್ ಮಂಡಳಿಯ 'ಲಂಚಾವತಾರ'ವನ್ನು ಜಗಜ್ಜಾಹೀರು ಮಾಡಿದ್ದಾರೆ. 'ಸರ್ಕಾರದ ಎಲ್ಲಾ ಸೇವೆಗಳಲ್ಲಿ ಲಂಚ ಕೊಡುವುದು ಮತ್ತು ತೆಗೆದುಕೊಳ್ಳುವುದು ಬಹುತೇಕ ಕಾಮನ್ ಎಂಬಂತಾಗಿಬಿಟ್ಟಿದೆ', ಎಂದಿದ್ದಾರೆ ನಟ ವಿಶಾಲ್.

ತಮಿಳು ನಟ ವಿಶಾಲ್ ಇತ್ತೀಚೆಗೆ ತಮ್ಮ ಸೋಷಿಯಲ್ದ ಮೀಡಿಯಾ 'ಇನ್‌ಸ್ಟಾಗ್ರಾಂ'ನಲ್ಲಿ ಒಂದು ಆರೋಪ ಮಾಡಿದ್ದಾರೆ. ತಮ್ಮ ಚಲನಚಿತ್ರದ ಸೆನ್ಸಾರ್ ಮಾಡಿಸಲು ತಾವು ರೂ. 6.5 ಲಕ್ಷ ಹಣವನ್ನು ಲಂಚ ಕೊಟ್ಟಿದ್ದಾನೆ ಅವರು ರಿವೀಲ್ ಮಾಡಿದ್ದಾರೆ. ಈ ಮೂಲಕ ಸಿನಿಮಾ ಸೆನ್ಸಾರ್ ಮಂಡಳಿಯಲ್ಲೂ ಲಂಚದ ರೌದ್ರಾವತಾರ ತಾಂಡವವಾಡುತ್ತಿದೆ ಎಂಬುದನ್ನು ನಟ ವಿಶಾಲ್ ಹೊರಜಗತ್ತಿಗೆ ತಿಳಿಸಿದ್ದಾರೆ.
ಸಿನಿಮಾ ಸೆನ್ಸಾರ್ ಮಾಡಿಸಲು ಲಂಚ ಕೊಟ್ಟಿದ್ದು ಇದೇ ಮೊದಲು ಎನ್ನಲು ಅಸಾಧ್ಯ. ಆದರೆ, ಇಂತಹ ಪ್ರಕರಣಗಳು ಸಾಮಾನ್ಯವಾಗಿ ಬೆಳಕಿಗೆ ಬರುವುದೇ ಇಲ್ಲ. ಕೋಟಿ ಕೋಟಿ ಹಣ ಖರ್ಚು ಮಾಡಿ ಸಿನಿಮಾ ನಿರ್ಮಾಣ ಮಾಡಿರುವ ನಿರ್ಮಾಪಕರುಗಳು, ಸೆನ್ಸಾರ್ ಬೋರ್ಡ್ ಕೇಳುವ ಲಂಚವನ್ನು ಸೀಕ್ರೆಟ್ ಆಗಿ ಕೊಟ್ಟು ತಮ್ಮ ಕೆಲಸ ಮುಗಿಸಿಕೊಂಡು ಸಿನಿಮಾ ಬಿಡುಗಡೆ ಮಾಡಿಕೊಂಡು, ಲಾಭವೋ ಅಥವಾ ನಷ್ಟವೋ ಒಂದನ್ನು ಅನುಭವಿಸಿ ಸುಮ್ಮನಾಗಿಬಿಡುತ್ತಾರೆ ಎನ್ನಬಹುದು.
ಕೆಜಿಎಫ್ (KGF-3) ಸಿನಿಮಾ ಘೋಷಿಸಿದ ಹೊಂಬಾಳೆ ಫಿಲಂಸ್!
ಆದರೆ ತಮಿಳು ನಟ ಅಂತಹ ಕೆಟಗರಿಗೆ ಸೇರದೇ ನೇರವಾಗಿ ತಮ್ಮ ಚಿತ್ರೋದ್ಯಮದ ವಿರುದ್ಧ ಆರೋಪ ಮಾಡಿದ್ದಾರೆ. ಈ ಮೂಲಕ ವಿಶಾಲ್, ತಮಿಳು ಚಿತ್ರೋದ್ಯಮದ ಸೆನ್ಸಾರ್ ಮಂಡಳಿಯ 'ಲಂಚಾವತಾರ'ವನ್ನು ಜಗಜ್ಜಾಹೀರು ಮಾಡಿದ್ದಾರೆ. ಬಿಗ್ ಬಜೆಟ್ ಚಿತ್ರಗಳ ನಿರ್ಮಾಪಕರಗಳು ಅದೊಂದು 'ಸಣ್ಣ ಮೊತ್ತದ ಹಣ' ಎಂಬಂತೆ ಸುಮ್ಮನಾಗಬಹುದು. ಆದರೆ ನಟ ವಿಶಾಲ್ ಹೇಳುವಂತೆ ಇದು 'ಸಣ್ಣ ಅಥವಾ ದೊಡ್ಡ ಮೊತ್ತದ ಹಣ' ಎಂಬ ವಿಷಯವಲ್ಲ. ಸಿನಿಮಾ ಸೆನ್ಸಾರ್ ಮಂಡಳಿಯಲ್ಲೂ ಕೆಲಸ ನಡೆಯಬೇಕಾದರೆ ಲಂಚ ಕೊಡಲೇಬೇಕಾಗುತ್ತದೆ ಎಂಬ ಸಂಗತಿಯ ಅನಾವರಣ.
ಹಾಟ್ ಫೋಟೋ ಮೂಲಕ ಸೌಂದರ್ಯ ಅನಾವರಣ ಮಾಡಿದ ರಶ್ಮಿಕಾ ಮಂದಣ್ಣ
ಸರ್ಕಾರದ ಎಲ್ಲಾ ಸೇವೆಗಳಲ್ಲಿ ಲಂಚ ಕೊಡುವುದು ಮತ್ತು ತೆಗೆದುಕೊಳ್ಳುವುದು ಬಹುತೇಕ ಕಾಮನ್ ಎಂಬಂತಾಗಿಬಿಟ್ಟಿದೆ, ಇದು ಯಾವುದೇ ರಾಜ್ಯ ಅಥವಾ ದೇಶ ಎಂದು ಸೀಮಿತವಾಗಿಲ್ಲ. ಎಲ್ಲಾ ಕಡೆ ಲಂಚ ಕೊಟ್ಟು ಅಥವಾ ತೆಗೆದುಕೊಂಡೇ ಕೆಲಸ ಮುಗಿಸಿಕೊಳ್ಳಬೇಕಾಗುತ್ತದೆ ಎಂಬುದು ಗಮನಿಸಬೇಕಾದ ಅಂಶ. ಇಂಥ ಅನಿಷ್ಠ ಪದ್ದತಿಗಳನ್ನೂ ಯಾವುದೇ ಕ್ಷೇತ್ರದಲ್ಲಿ ಹಾಗೇ ಮುಂದುವರಿಸಿಕೊಂಡು ಹೋದರೆ ಒಳ್ಳೆಯದಲ್ಲ ಎಂಬುದು ಸತ್ಯ. ನಟ ವಿಶಾಲ್ ಮಾಡಿರುವುದು ಇಂಥ ಕೆಟ್ಟ ಸಂಗತಿಯ ವಿರುದ್ಧ ಬೆಳಕು ಚೆಲ್ಲುವ ಕೆಲಸ ಎನ್ನಲು ಯಾವ ಸಮಸ್ಯೆಯ ಇಲ್ಲ.
;