ಹಾಟ್ ಫೋಟೋ ಮೂಲಕ ಸೌಂದರ್ಯ ಅನಾವರಣ ಮಾಡಿದ ರಶ್ಮಿಕಾ ಮಂದಣ್ಣ
ಕನ್ನಡತಿ, ನ್ಯಾಷನಲ್ ಕ್ರಷ್ ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗಾಗಿ ಆಗಾಗ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಕಲರ್ಫುಲ್ ಫೋಟೋಗಳನ್ನು ಅಪ್ಲೋಡ್ ಮಾಡುತ್ತ ಇರುತ್ತಾರೆ. ರಶ್ಮಿಕಾ ಫೋಟೋಗಳಿಗೆ ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಹುಡುಕುತ್ತಲೇ ಇರುತ್ತಾರೆ.
ನಟಿ ರಶ್ಮಿಕಾ ಮಂದಣ್ಣ ಕನ್ನಡದ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ತಮ್ಮ ಸಿನಿಪಯಣ ಪ್ರಾರಂಭಿಸಿದ ನಟಿ. ಬಳಿಕ ತೆಲುಗು ಚಿತ್ರಂಗಕ್ಕೆ ಪದಾರ್ಪಣೆ ಮಾಡಿದ ನಟಿ, ತೆಲುಗಿನ ನಟ ವಿಜಯ್ ದೇವರಕೊಂಡ ಜತೆಗೆ 'ಗೀತ ಗೋವಿಂದಂ' ಚಿತ್ರದಲ್ಲಿ ನಟಿಸಿದರು. ಈ ಚಿತ್ರ ಸೂಪರ್ ಹಿಟ್ ದಾಖಲಿಸಿತು.
ಗೀತಗೋವಿಂದಂ' ಚಿತ್ರದ ಬಳಿಕ ನಟಿ ರಶ್ಮಿಕಾ ತೆಲುಗಿನಲ್ಲಿ ಬಹಳಷ್ಟು ಖ್ಯಾತಿ ಗಳಿಸಿದರು. ಬಳಿಕ ಅದೇ ವಿಜಯ್ ದೇವರಕೊಂಡ ಜತೆ 'ಡಿಯರ್ ಕಾಮ್ರೆಡ್' ಚಿತ್ರದಲ್ಲೂ ನಟಿಸಿ ಟಾಲಿವುಡ್ನಲ್ಲಿ 'ಹಿಟ್ ಜೋಡಿ' ಎಂಬ ಬಿರುದು ಪಡೆದರು. ನಟಿ ರಶ್ಮಿಕಾ ಡಿಯರ್ ಕಾಮ್ರೆಡ್ ಚಿತ್ರದ ಬಳಿಕ ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಸಹ ಕಾಣಿಸಿಕೊಂಡು ಭಾರೀ ಜನಪ್ರಿಯತೆ ಗಳಿಸಿಕೊಂಡರು.
ಕನ್ನೆಡದಲ್ಲಿ ರಶ್ಮಿಕಾ 'ಕಿರಿಕ್ ಪಾರ್ಟಿ' ಬಳಿಕ ಪುನೀತ್ ರಾಜ್ಕುಮಾರ್ 'ಅಂಜನಿ ಪುತ್ರ' ಚಿತ್ರದಲ್ಲಿ ಕಾಣಿಸಿಕೊಂಡರು. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಚಮಕ್' ಚಿತ್ರದಲ್ಲಿ ಸಹ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅವರು ಇಲ್ಲಿಯವರೆಗೆ ಕೊನೆಯದಾಗಿ ಕಾಣಿಸಿಕೊಂಡ ಕನ್ನಡ ಚಿತ್ರ ಪೊಗರು.
ರಶ್ಮಿಕಾ ಮಂದಣ್ಣ ಇತ್ತೀಚೆಗೆ ಹೆಚ್ಚಾಗಿ ಬಾಲಿವುಡ್ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಟಾಲಿವುಡ್ ಚಲನಚಿತ್ರಗಳಲ್ಲೂ ಕಾಣಿಸಿಕೊಂಡು ದಕ್ಷಿಣ-ಉತ್ತರ ಎಂಬ ಬೇಧವಿಲ್ಲದೇ ಎಲ್ಲ ಕಡೆ ಸಲ್ಲುವ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ರಶ್ಮಿಕಾ ಮಂದಣ್ಣ.
ರಶ್ಮಿಕಾ ನಟನೆಯ 'ಅನಿಮಲ್' ಚಿತ್ರದ 'ಗೀತಾಂಜಲಿ' ಪೋಸ್ಟರ್ ಇತ್ತೀಚೆಗೆ ಬಿಡುಗಡೆಗೊಂಡಿದೆ. ಈ ಪೋಸ್ಟರ್ನಲ್ಲಿ ರಶ್ಮಿಕಾರ ಅಪ್ಪಟ ಗೃಹಿಣಿ ಲುಕ್ ಭಾರೀ ಜನಪ್ರಿಯತೆ ಗಳಿಸಿದೆ. ಈ ಲುಕನಲ್ಲಿ ರಶ್ಮಿಕಾರನ್ನು ನೋಡಿದ ಮೇಲೆ ಈ ಮೊದಲು ಫ್ಯಾನ್ಸ್ ಆಗದೇ ಇದ್ದ ಹಲವರು ಈಗ ರಶ್ಮಿಕಾ ಫ್ಯಾನ್ಸ್ ಲಿಸ್ಟ್ ಸೇರಿದ್ದಾರೆ.
ತಮಿಳಿನ ವಾರಿಸು, ಸುಲ್ತಾನ್ ಮೊದಲಾದ ಸಿನಿಮಾಗಳಲ್ಲಿ ಸಹ ನಟಿಸಿರುವ ರಶ್ಮಿಕಾ ತಮಿಳಿನಲ್ಲಿ ಸಹ ಬಹಳಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ. ವಿಜಯ್-ರಶ್ಮಿಕಾ ಜೋಡಿ ತಮಿಳಿನಲ್ಲಿ ಭಾರೀ ಮೋಡಿ ಮಾಡಿದೆ. ತಮಿಳು ಸಿನಿಮಾದಲ್ಲಿ ರಶ್ಮಿಕಾ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎನ್ನಬಹುದು.
ವಿಜಯ್ ದೇವರಕೊಂಡ ಮುಂಬರುವ ಚಿತ್ರವೊಂದಕ್ಕೆ ಮೊದಲು ಆಯ್ಕೆಯಾಗಿದ್ದ ನಟಿ ಶ್ರೀಲೀಲಾ ಬದಲು ಇದೀಗ ರಶ್ಮಿಕಾ ನಟಿಸಲಿದ್ದಾರೆ ಎನ್ನಲಾಗಿದೆ. ವಿಜಯ್ ದೇವರಕೊಂಡ ಜತೆಗೆ ಮತ್ತೆ ಮತ್ತೆ ಸ್ಕ್ರೀನ್ ಹಂಚಿಕೊಳ್ಳುವ ಮೂಲಕ ನಟಿ ರಶ್ಮಿಕಾ ತಮ್ಮ ಜೋಡಿಯ ಫ್ಯಾನ್ಸ್ ಬಳಗ ಕುಸಿಯದಂತೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚೆಗಷ್ಟೇ ಶಾರುಖ್ ಖಾನ್ ಜತೆ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿರುವ ನಟಿ ರಶ್ಮಿಕಾ ತಾವು ಹೆಚ್ಚುಕಡಿಮೆ ಎಲ್ಲಾ ಸ್ಟಾರ್ ನಟರ ಜತೆ ತೆರೆ ಕ್ಯಾಮರಾ ಫೇಸ್ ಮಾಡಿದ್ದೇನೆ ಎಂಬ ಹೆಮ್ಮೆ ಹೊಂದಿದ್ದಾರೆ. ಪಠಾಣ್ ಹಾಗೂ ಜವಾನ್ ಚಿತ್ರಗಳ ಯಶಸ್ಸಿನ ಬಳಿಕ ಕಿಂಗ್ ಖಾನ್ ಶಾರುಖ್, ಬಾಲಿವುಡ್ನ ಬಹು ಬೇಡಿಕೆ ನಟರಾಗಿ ಹೊರಹೊಮ್ಮಿದ್ದಾರೆ.
ಒಟ್ಟಿನಲ್ಲಿ ನಟಿ ರಶ್ಮಿಕಾ ಕ್ರೇಜ್ ಇಡೀ ಭಾರತೀಯ ಚಿತ್ರಂಗದಲ್ಲಿ ಛಾಪೊತ್ತಿದೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸೇರಿದಂತೆ, ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಜತೆ ಕೂಡ ನಟಿಸಿರುವ ನಟಿ ರಶ್ಮಿಕಾ, ಎಲ್ಲ ಕಡೆ ಸಲ್ಲುವ ನಟಿ ಎಂಬ ಪಟ್ಟ ಹೊತ್ತು ಮೆರೆಯುತ್ತಿದ್ದಾರೆ.