ವಿಶಾಲ್‌ಗೆ ಅನಾರೋಗ್ಯ, ವೇದಿಕೆಯಲ್ಲಿ ಮಾತನಾಡಲು ನಡುಗಿದ ದೇಹ, ಕಣ್ಣೀರಿಟ್ಟ ನಟ, ಅಭಿಮಾನಿಗಳು ಆತಂಕ!
ನಟ ವಿಶಾಲ್ ಅವರು ತಮ್ಮ ಮುಂದಿನ ಚಿತ್ರ 'ಮದ ಗಜ ರಾಜ'ದ ಪ್ರಚಾರದ ವೇಳೆ ಅನಾರೋಗ್ಯದಿಂದ ಬಳಲುತ್ತಿದ್ದರು. ವೇದಿಕೆಯಲ್ಲಿ ಕೈಗಳು ನಡುಗುತ್ತಾ, ಮಾತನಾಡಲು ಕಷ್ಟಪಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳು ವಿಶಾಲ್ ಅವರ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಸಿನಿಮಾ ತಾರೆಯರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗುತ್ತವೆ. ಚಿತ್ರದ ಪ್ರಚಾರಕ್ಕೆ ಬಂದಿದ್ದಾಗಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಿದ್ದಾಗಲಿ, ಅವರ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುತ್ತವೆ. ಅಂತಹದ್ದೇ ಒಂದು ವಿಡಿಯೋ ಈಗ ತಮಿಳು ಸಿನಿಪ್ರಿಯರಿಗೆ ಮಾತ್ರವಲ್ಲ ದಕ್ಷಿಣ ಭಾರತದ ಅನೇಕ ಮಂದಿಗೆ ಶಾಕ್ ಕೊಟ್ಟಿದೆ.
ನಟ ವಿಶಾಲ್ ಅವರು ಬಿಳಿ ಪಂಚೆ ಮತ್ತು ಶರ್ಟ್ ಧರಿಸಿ ತಮ್ಮ ಮುಂದಿನ ಚಿತ್ರ ಮದ ಗಜ ರಾಜ ಚಿತ್ರದ ಪ್ರಚಾರಕ್ಕೆ ಆಗಮಿಸಿದ್ದರು. ಆದರೆ ವೇದಿಕೆಯಲ್ಲಿ ಕೈಗಳು ನಡುಗುತ್ತಾ, ಮಾತನಾಡಲು ಕಷ್ಟಪಡುತ್ತಿರುವ ವಿಶಾಲ್ ಅವರ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಅವರ ಕಣ್ಣುಗಳಲ್ಲಿ ನೀರು ತುಂಬಿ ಬರುವುದನ್ನೂ ಕಾಣಬಹುದು. ತೀವ್ರ ಅಸ್ವಸ್ಥರಾಗಿರುವ ವಿಶಾಲ್ ಅವರ ದೇಹವು ನಡುಗುತ್ತಿರುವುದನ್ನೂ ಕಾಣಬಹುದಾಗಿದೆ.
ಎನ್.ಟಿ.ಆರ್ ಸಿನಿಮಾದಿಂದ ನನ್ನನ್ನು ತೆಗೆದರು, ಐರನ್ ಲೆಗ್ ಅಂತ ಕರೆದರೆಂದು ಬೇಸರವಾಯ್ತು: ಚಿರಂಜೀವಿ
ಕಳೆದ ಕೆಲವು ದಿನಗಳಿಂದ ವಿಶಾಲ್ ತೀವ್ರ ಜ್ವರದಿಂದ ಬಳಲುತ್ತಿದ್ದರು. ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದಲೇ ಈ ಆರೋಗ್ಯ ಸಮಸ್ಯೆ ಉಂಟಾಗಿದೆಯೆಂದು ಪ್ರಚಾರದ ವೇಳೆ ನಿರೂಪಕರು ಹೇಳಿದ್ದಾರೆ. ಅಸ್ವಸ್ಥರಾಗಿದ್ದರೂ ಚಿತ್ರದ ಪ್ರಚಾರಕ್ಕೆ ವಿಶಾಲ್ ಆಗಮಿಸಿದ್ದರು. ವಿಶಾಲ್ ಅವರ ವಿಡಿಯೋ ಬಿಡುಗಡೆಯಾದ ನಂತರ, ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ವಿಶಾಲ್ ಶೀಘ್ರವಾಗಿ ಗುಣಮುಖರಾಗಲಿ ಎಂದು ಅವರು ಹಾರೈಸುತ್ತಿದ್ದಾರೆ.
ಅನಾರೋಗ್ಯದ ಹೊರತಾಗಿಯೂ, ಅಭಿಮಾನಿಗಳು ವಿಶಾಲ್ ಅವರ ಸಮರ್ಪಣೆ ಮತ್ತು ಕಾರ್ಯಕ್ರಮಕ್ಕೆ ಹಾಜರಾಗಲು ಮತ್ತು ಪ್ರೇಕ್ಷಕರೊಂದಿಗೆ ತೊಡಗಿಸಿಕೊಳ್ಳಲು ಇಷ್ಟಪಟ್ಟಿದ್ದು ಅವರ ಕೆಲಸದ ಬದ್ಧತೆಯನ್ನು ಶ್ಲಾಘಿಸಿದರು.
ಅವರ ಆರೋಗ್ಯದ ಬಗ್ಗೆ ವಿಶಾಲ್ ಅಥವಾ ಅವರ ತಂಡ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಆದರೆ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಚಿತ್ರದ ಕಲಾವಿದರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ನಿರ್ದೇಶಕ ಸುಂದರ್ ಸಿ ಅವರ ಪತ್ನಿಯೂ ಆಗಿರುವ ನಟಿ ಕಮ್ ರಾಜಕಾರಣಿ ಖುಷ್ಬು ಸುಂದರ್ ಅವರು ಈ ಸಂದರ್ಭವನ್ನು ಅಲಂಕರಿಸಿದರು ಮತ್ತು ವಿಶಾಲ್ ಅವರನ್ನು ಆಲಿಂಗನದ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.
ನಾನೇ ಲೆಜೆಂಡ್ ಎಂದು ಘೋಷಿಸಿ ಚಿರು, ಮೋಹನ್ ಬಾಬುಗೆ ಟಾಂಗ್ ಕೊಟ್ಟ ಬಾಲಯ್ಯ! ವಿವಾದಗಳು ಒಂದೆರೆಡಲ್ಲ
ಮದಗಜ ರಾಜ ಚಿತ್ರದಲ್ಲಿ ಸಂತಾನಂ, ಅಂಜಲಿ, ಸೋನು ಸೂದ್, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ದಿವಂಗತ ಮನೋಬಾಲಾ ಸೇರಿದಂತೆ ತಾರಾ ಬಳಗವಿದೆ. ಸುಂದರ್ ಸಿ ನಿರ್ದೇಶಿಸಿದ ಈ ಚಿತ್ರವು ಆರಂಭದಲ್ಲಿ 2013 ರಲ್ಲಿ ಬಿಡುಗಡೆಗೆ ಯೋಜಿಸಲಾಗಿತ್ತು ಆದರೆ ಹಣಕಾಸಿನ ಮತ್ತು ಕಾನೂನು ತೊಡಕುಗಳಿಂದಾಗಿ ಒಂದು ದಶಕದ ವಿಳಂಬವನ್ನು ಎದುರಿಸಿತು. 12 ವರ್ಷಗಳ ವಿಳಂಬದ ನಂತರ ಇದೀಗ ಅಂತಿಮವಾಗಿ ಜನವರಿ 12, 2025 ರಂದು ಥಿಯೇಟರ್‌ಗಳಿಗೆ ಬರಲು ನಿರ್ಧರಿಸಲಾಗಿದೆ.
ಒಂದು ದಶಕದ ಸುದೀರ್ಘ ಕಾಯುವಿಕೆಯ ನಂತರ, ನಿರ್ದೇಶಕ-ನಟ ಸುಂದರ್ ಸಿ ಅವರು ಮದಗಜವನ್ನು ಬಿಡುಗಡೆ ಮಾಡುತ್ತಿದ್ದಾರೆ. 2013 ರ ಬಿಡುಗಡೆಗೆ ಯೋಜಿಸಲಾಗಿತ್ತು. ಸೋನು ಸೂದ್, ಸಂತಾನಂ, ವಿಶಾಲ್, ವರಲಕ್ಷ್ಮಿ ಶರತ್‌ಕುಮಾರ್, ಮತ್ತು ಅಂಜಲಿ ಸೇರಿದಂತೆ ತಾರಾಗಣದಲ್ಲಿ ನಟಿಸಿದ ಚಲನಚಿತ್ರವು 2012 ರಲ್ಲಿ ನಿರ್ಮಾಣವನ್ನು ಪ್ರಾರಂಭಿಸಿತು ಮತ್ತು 2013 ರ ಅಂತ್ಯದ ವೇಳೆಗೆ ಪೂರ್ಣಗೊಂಡಿತು. ಆದರೆ ಹಣಕಾಸನ ಸಮಸ್ಯೆ ಜೊತೆಗೆ ಹಲವು ತೊಂದರೆಗಳ ನಂತರ ಈಗ ಮದಗಜ ರಾಜ ಚಿತ್ರವು ಜನವರಿ 12, 2025 ರಂದು ಥಿಯೇಟರ್‌ಗಳಿಗೆ ಬರುವುದು ಖಚಿತವಾಗಿದೆ. ಜೆಮಿನಿ ಫಿಲ್ಮ್ ಸರ್ಕ್ಯೂಟ್ ನಿರ್ಮಿಸಿದ ಈ ಚಲನಚಿತ್ರವು ಮೂಲತಃ ಉದ್ದೇಶಿಸಿದಂತೆ ದೊಡ್ಡ ಪರದೆಯ ಮೇಲೆ ಆಕ್ಷನ್, ಹಾಸ್ಯ ಮತ್ತು ಮನರಂಜನೆಯನ್ನು ತರುವ ನಿರೀಕ್ಷೆಯಿದೆ.