Asianet Suvarna News Asianet Suvarna News

ಬಲಗೈಯಲ್ಲಿ ಪತಿಯ ಭಾವಚಿತ್ರ; ಪ್ರೇಮಲತಾ ವಿಜಯಕಾಂತ್‌ ಫೋಟೋ ವೈರಲ್

 ಪತಿಯನ್ನು ಕಳೆದುಕೊಂಡ ದುಖಃದಲ್ಲಿ ಹೊರ ಬಾರದ ಕುಟುಂಬಸ್ಥರು. ಕೈಯಲ್ಲಿ ಟ್ಯಾಟು ನೋಡಿ ಶಾಕ್ ಆದ ನೆಟ್ಟಿಗರು....

Tamil Actor Vijayakanth wife Premalatha gets husband face tattoo vcs
Author
First Published Feb 6, 2024, 3:27 PM IST

150ಕ್ಕೈ ಹೆಚ್ಚು ಅಧಿಕ ತಮಿಳು ಸಿನಿಮಾಗಳಲ್ಲಿ ನಟಿಸಿರುವ ನಟ ವಿಜಯಕಾಂತ್‌, ದೇಸಿಯ ಮುರ್ಪೊಕ್ಕು ಡ್ರಾವಿಡ ಕಳಗಂ ಪಕ್ಷ ಸ್ಥಾಪಿಸಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ನ್ಯೂಮೋನಿಯಾ ಮತ್ತು ಕೊರೋನಾ ಸೋಂಕಿನಿಂದ ಚೆನ್ನೈನ ಎಂಐಒಟಿ ಇಂಟರ್ನ್ಯಾಷನಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ವಿಧಿ ಡಿಸೆಂಬರ್ 28ರಂದು ಕೊನೆಯುಸಿರೆಳೆದ್ದರು. ಪತ್ನಿ ಪ್ರೇಮಾಲತಾ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ವಿಜಯಕಾಂತ್ ಅಂತ್ಯಕ್ರಿಯೆಯನ್ನು ಕೊಯಂಬೆಡು ಡಿಎಂಡಿಕೆ ಪ್ರಧಾನ ಕಾರ್ಯಲಯದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರೆವೇರಿಸಿದ್ದರು.

ವಿಜಯಕಾಂತ್ ಅಗಲಿ ತಿಂಗಳು ಕಳೆದರೂ ಸಮಾಧಿಗೆ ಅಭಿಮಾನಿಗಳು, ರಾಜಕೀಯ ಮುಖಂಡರು ಮತ್ತು ಸಿನಿಮಾ ತಾರೆಯರು ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದಾರೆ. ಆದರೆ ಈ ನೋವಿನಿಂದ ವಿಜಯಕಾಂತ್ ಪತ್ನಿ ಪ್ರೇಮಾಲತಾ ಹೊರ ಬಂದಿಲ್ಲ ಹೀಗಾಗಿ ಕೈಯಲ್ಲಿ ಪತಿ ಮುಖದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಸಖತ್ ವೈರಲ್ ಆಗುತ್ತಿದೆ. 

ವಿಜಯ್‌ಕಾಂತ್‌ ಅವರದು ಸಹಜ ಸಾವಲ್ಲ, ಕೊಲೆ; ಗಂಭೀರ ಆರೋಪ ಮಾಡಿದ ಖ್ಯಾತ ನಿರ್ದೇಶಕ!

ಹೌದು! ಪ್ರೇಮಾಲತಾ ಅವರ ಬಲಗೈಯಲ್ಲಿ ವಿಜಯಕಾಂತ್ ಮುಖದ ಟ್ಯಾಟು ಹಾಕಿಸಿಕೊಂಡಿದ್ದಾರೆ. ಪತಿ ಮೇಲೆ ಇಷ್ಟೋಂದು ಪ್ರೀತಿ ಇದೆ ಅಂತ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಟ್ಯಾಟೂ ತುಂಬಾನೇ ಕ್ಲಿಯರ್ ಆಗಿದ್ದು ಸೂಪರ್ ಎನ್ನುತ್ತಿದ್ದಾರೆ ಅಭಿಮಾನಿಗಳು. ವಿಜಯಕಾಂತ್ ಪತ್ನಿ ಪ್ರೇಮಲತಾ ದೇಸಿಯ ಮುರ್ಪೊಕ್ಕು ಡ್ರಾವಿಡ ಕಳಗಂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದರು. 1990ರಲ್ಲಿ ವಿಜಯಕಾಂತ್ ಕೈ ಹಿಡಿದರು, ಇದು ಅರೇಂಜ್ಡ್‌ ಮ್ಯಾರೇಜ್ ಆಗಿತ್ತು. 

Tamil Actor Vijayakanth wife Premalatha gets husband face tattoo vcs

Follow Us:
Download App:
  • android
  • ios