Asianet Suvarna News Asianet Suvarna News

275 ಕೋಟಿ ಸಂಭಾವನೆ ಪಡೆದ ದಳಪತಿ ವಿಜಯ್: ಸಿನಿಮಾ ಬಜೆಟ್‌ನ ಅರ್ಧ ಹಣ ಒಬ್ಬರೇ ನಟನಿಗೆ ಕೊಟ್ಟ ನಿರ್ಮಾಪಕ..!

ವಿಜಯ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾ ಘೋಷಣೆಯಾಗಿದ್ದಕ್ಕೆ ಸಂಭ್ರಮಿಸುವ ಬದಲು ಬೇಸರ ವ್ಯಕ್ತಪಡಿಸಿದ್ದಾರೆ. ವಿಜಯ್ ಸಿನಿಮಾ ತೊರೆದು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವುದು ಅವರ ಬೇಸರಕ್ಕೆ ಕಾರ

Tamil Actor vijay thalapathy who received Remuneration of 275 crores rs His Last Movie grg
Author
First Published Sep 14, 2024, 10:52 AM IST | Last Updated Sep 14, 2024, 12:56 PM IST

ಸಿನಿವಾರ್ತೆ(ಸೆ.14): ಕೆವಿಎನ್ ಪ್ರೊಡಕ್ಷನ್ ಇದೀಗ ದಳಪತಿ ವಿಜಯ್ ನಟನೆಯ ತಮಿಳು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ವಿಜಯ್ ಅವರ 69ನೇ ಸಿನಿಮಾ ಮತ್ತು ವೃತ್ತಿ ಬದುಕಿನ ಕೊನೆಯ ಚಿತ್ರ ಇದಾಗಿದ್ದು 500 ಕೋಟಿ ರು.ಗೂ ಅಧಿಕ ಬಂಡವಾಳದಲ್ಲಿ ನಿರ್ಮಾಣಗೊಳ್ಳಲಿದೆ. 

ತಮಿಳಿನ ಖ್ಯಾತ ನಿರ್ದೇಶಕ ಹೆಚ್ ವಿನೋದ್ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಇದು ಕೆವಿಎನ್ ಸಂಸ್ಥೆಯ 5ನೇ ಸಿನಿಮಾವಾಗಿದೆ. ವಿಜಯ್ ನಟನೆಯ ಕೊನೆಯ ಸಿನಿಮಾ ಎಂಬಂತೆ ಬಿಂಬಿಸುವ ಟೀಸರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ವೀಕ್ಷಣೆ ದಾಖಲಿಸಿದೆ. ಆದರೆ ವಿಜಯ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾ ಘೋಷಣೆಯಾಗಿದ್ದಕ್ಕೆ ಸಂಭ್ರಮಿಸುವ ಬದಲು ಬೇಸರ ವ್ಯಕ್ತಪಡಿಸಿದ್ದಾರೆ. ವಿಜಯ್ ಸಿನಿಮಾ ತೊರೆದು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವುದು ಅವರ ಬೇಸರಕ್ಕೆ ಕಾರಣ. 

ದಳಪತಿ ವಿಜಯ್ ಸಿನಿಮಾಗೆ ಕಿಸ್ ಬೆಡಗಿ ಶ್ರೀಲೀಲಾ ನೋ ಅಂದಿದ್ದು ಸರಿನಾ?: ಅದು ಯಾವ ಪಾತ್ರ ಗೊತ್ತಾ?

275 ಕೋಟಿ ಸಂಭಾವನೆ ಪಡೆದ ಭಾರತದ ಮೊದಲ ನಟ

ಹೌದು, ದಳಪತಿ ವಿಜಯ್ ತಮ್ಮ ಮುಂದಿನ ಚಿತ್ರ ದಳಪತಿ 69ನೇ ಸಿನಿಮಾಗೆ ಬರೋಬ್ಬರಿ 275 ಕೋಟಿ ಸಂಭಾವನೆ ಪಡೆಯಲಿದ್ದಾರೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಮೊತ್ತದ ಸಂಭಾವನೆ ಪಡೆದ ಮೊದಲ ನಟನಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ಖಾನ್‌ ಅವರು 250 ಕೋಟಿ ರೂ. ಸಂಭಾವನೆ ಪಡೆದು ಮೊದಲ ಸ್ಥಾನದಲ್ಲಿದ್ದರು. ಇದೀಗ ಶಾರುಖ್‌ ಖಾನ್‌ ಅವರನ್ನ ಹಿಂದಿಕ್ಕಿ ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದವರ ಪಟ್ಟಿಯಲ್ಲಿ ದಳಪತಿ ವಿಜಯ್ ಮೊದಲ ಸ್ಥಾನದಲ್ಲಿದ್ದಾರೆ. 

100 ಕೋಟಿ ಕ್ಲಬ್‌ ಸೇರಿದ ಗೋಟ್‌

ಇತ್ತೀಚೆಗೆ ತೆರೆಕಂಡ ದಳಪತಿ ವಿಜಯ್‌ ನಟನೆಯ ‘ಗೋಟ್‌’ ಸಿನಿಮಾಕ್ಕೆ ವಿಶ್ವಾದ್ಯಂತ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಸಿನಿಮಾ ಮೊದಲ ದಿನವೇ ದಾಖಲೆಯ 100 ಕೋಟಿ ರು. ಕಲೆಕ್ಷನ್‌ನತ್ತ ಮುನ್ನುಗ್ಗಿದೆ. ತಜ್ಞರ ಪ್ರಕಾರ ವಿಶ್ವಾದ್ಯಂತ ಮೊದಲ ದಿನ ಈ ಸಿನಿಮಾದ ಒಟ್ಟು ಕಲೆಕ್ಷನ್‌ 98 ಕೋಟಿ ರು. ಇತ್ತೀಚಿನ ವರ್ಷಗಳಲ್ಲಿ ಕಾಲಿವುಡ್‌ನಲ್ಲಿ ಮೊದಲ ದಿನವೇ ಭಾರೀ ಮೊತ್ತದ ಕಲೆಕ್ಷನ್‌ ಮಾಡಿರುವ ಎರಡನೇ ತಮಿಳು ಸಿನಿಮಾವಾಗಿ ‘ಗೋಟ್‌’ ಗುರುತಿಸಿಕೊಂಡಿತ್ತು. 

ಮೊದಲ ಸ್ಥಾನದಲ್ಲಿ ಕಳೆದ ವರ್ಷ ಬಿಡುಗಡೆಯಾದ ವಿಜಯ್‌ ಅವರದೇ ‘ಲಿಯೋ’ ಸಿನಿಮಾವಿದೆ. ವಿಶ್ವಾದ್ಯಂತದ ಬಹುದೊಡ್ಡ ಸಂಖ್ಯೆಯಲ್ಲಿರುವ ವಿಜಯ್‌ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಿ ಕಣ್ತುಂಬಿಕೊಂಡಿದ್ದರು. ವೆಂಕಟ್‌ ಪ್ರಭು ನಿರ್ದೇಶನದ ಈ ಚಿತ್ರದಲ್ಲಿ ವಿಜಯ್‌ ದ್ವಿಪಾತ್ರದಲ್ಲಿ ಮಿಂಚಿದ್ದರು. 

‘GOAT’ ಸಿನಿಮಾದ ಮೊದಲ ದಿನದ ಕಲೆಕ್ಷನ್ 43 ಕೋಟಿ ರೂಪಾಯಿ. ತಮಿಳಿನಲ್ಲಿ 38 ಕೋಟಿ ರೂಪಾಯಿ, ಹಿಂದಿಯಲ್ಲಿ 1.7 ಕೋಟಿ ರೂಪಾಯಿ ಹಾಗೂ ತೆಲುಗಿನಿಂದ 3 ಕೋಟಿ ರೂಪಾಯಿ ಗಳಿಕೆ ಆಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸಿನಿಮಾ ಭರ್ಜರಿ ಗಳಿಕೆ ಮಾಡಬೇಕಿತ್ತು. ಏಕೆಂದರೆ ಬೆಂಗಳೂರು ಒಂದರಲ್ಲೇ ಈ ಚಿತ್ರಕ್ಕೆ ಬರೋಬ್ಬರಿ 1200 ಶೋಗಳನ್ನು ನೀಡಲಾಗಿತ್ತು. ಚೆನ್ನೈ, ಹೈದರಾಬಾದ್​ನಲ್ಲೂ ಹೆಚ್ಚಿನ ಶೋ ನೀಡಲಾಗಿತ್ತು. ಆದರೆ, ಗಳಿಕೆ ಮಾತ್ರ ಅಂದುಕೊಂಡ ರೀತಿಯಲ್ಲಿ ಆಗಿಲ್ಲ.

ಪ್ರಭುದೇವ, ಪ್ರಶಾಂತ್‌, ಸ್ನೇಹಾ ಮೊದಲಾದವರು ನಟಿಸಿದ್ದಾರೆ. ಎಜಿಎಸ್‌ ಎಂಟರ್‌ಟೈನ್‌ಮೆಂಟ್‌ ಈ ಬಹುಕೋಟಿ ವೆಚ್ಚದ ಅದ್ದೂರಿ ಸಿನಿಮಾವನ್ನು ನಿರ್ಮಾಣ ಮಾಡಿದೆ. ಎ ಆರ್ ರೆಹಮಾನ್ ಸಂಗೀತ ನಿರ್ದೇಶನವಿದೆ.

Latest Videos
Follow Us:
Download App:
  • android
  • ios